Facebook ನಿಂದ ಇನ್ಮುಂದೆ ನೀವು ಸಾಲ ಕೂಡ ಪಡೆಯಬಹುದು, ಈ ರೀತಿ ಅಪ್ಲೈ ಮಾಡಿ

Facebook Small Business Loan Initiative - ಇನ್ಮುಂದೆ ನೀವೂ ಕೂಡ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬ್ಯಾಂಕಿನಿಂದ ಸಾಲವನ್ನು ಪಡೆಯುವ ಅವಶ್ಯಕತೆ ಇಲ್ಲ. ಹೌದು, ಸಾಮಾಜಿಕ ಮಾಧ್ಯಮ ತಾಣ ಫೇಸ್‌ಬುಕ್ (Facebook) ಇದೀಗ ಸುಲಭ ನಿಯಮಗಳಲ್ಲಿ 50 ಲಕ್ಷದವರೆಗೆ ಸಾಲವನ್ನು ನೀಡಲಿದೆ. 

Written by - Nitin Tabib | Last Updated : Feb 4, 2022, 02:50 PM IST
  • ಇನ್ಮುಂದೆ ನೀವೂ ವ್ಯಾಪಾರಕ್ಕಾಗಿ ಫೇಸ್ ಬುಕ್ ನಿಂದ ಸಾಲ ಪಡೆಯಬಹುದು
  • ಆದರೆ, ಫೇಸ್ ಬುಕ್ ಅಥವಾ ಅಥವಾ ಅದರ ಮೂಲ ಕಂಪನಿ ಮೆಟಾ ನಿಮಗೆ ಈ ಸಾಲ ನೀಡುವುದಿಲ್ಲ.
  • ಈ ಸಾಲ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ತಿಳಿಯಲು ಸುದ್ದಿ ಓದಿ.
Facebook ನಿಂದ ಇನ್ಮುಂದೆ ನೀವು ಸಾಲ ಕೂಡ ಪಡೆಯಬಹುದು, ಈ ರೀತಿ ಅಪ್ಲೈ ಮಾಡಿ title=
Facebook Small Business Loan Initiative (File Photo)

Facebook Loan: ಯಾವುದೇ ಒಂದು ವ್ಯಾಪಾರಕ್ಕಾಗಿ ಸಾಲವನ್ನು ತೆಗೆದುಕೊಳ್ಳುವ ಅಗತ್ಯವಿದ್ದರೆ, ನಾವು ಸಾಮಾನ್ಯವಾಗಿ ಬ್ಯಾಂಕುಗಳು ಅಥವಾ NBFC ಗಳಂತಹ ಸಂಸ್ಥೆಗಳಿಂದ ಸಹಾಯವನ್ನು ಕೇಳುತ್ತೇವೆ. ನಿಮ್ಮ ನೆಚ್ಚಿನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಸಹ ನಿಮಗೆ ಸಹಾಯ ನೀಡುತ್ತದೆ  ಎಂದು ನೀವು ಎಂದಾದರೂ ಕೇಳಿದ್ದೀರಾ? ಹೌದು,  ಫೇಸ್ ಬುಕ್ ಕೂಡ ಇದೀಗ ಕೆಲಸ ಆರಂಭಿಸಿದೆ. ನೀವು ಫೇಸ್‌ಬುಕ್‌ನಲ್ಲಿ ಸಣ್ಣ ವ್ಯಾಪಾರ ಮಾಡಿದರೆ, ಅದು ನಿಮಗೆ 50 ಲಕ್ಷದವರೆಗೆ ಸಾಲವನ್ನು ನೀಡುತ್ತದೆ. ಈ ಸಾಲವು ಪ್ರಸ್ತುತ ದೇಶದ 300 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ. ಈ ಸೌಲಭ್ಯದ ಲಾಭವನ್ನು ನೀವು ಹೇಗೆ ಪಡೆಯಬಹುದುಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಸಣ್ಣ ವ್ಯಾಪಾರ ಸಾಲಕ್ಕಾಗಿ Facebook ಬಳಸಿ
ಫೇಸ್‌ಬುಕ್ ಇನ್ನು ಮುಂದೆ ಕೇವಲ ಚಾಟ್ ಮಾಡುವ ಅಥವಾ ಪರಸ್ಪರ ಸಂಪರ್ಕಿಸುವ ಸ್ಥಳವಾಗಿ ಉಳಿದಿಲ್ಲ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಇಂದಿನ ಕಾಲದಲ್ಲಿ ಫೇಸ್ ಬುಕ್ ಕೂಡ ವ್ಯಾಪಾರ ಮಾಡುವ ಮೂಲಕ ಉತ್ತಮ ಲಾಭ ಗಳಿಸಲು ವೇದಿಕೆಯಾಗುತ್ತಿದೆ. ಈ ಮೂಲಕ ಜನರು ಸಣ್ಣ ವ್ಯಾಪಾರವನ್ನು ಆರಂಭಿಸುತ್ತಿದ್ದಾರೆ ಮತ್ತು ಅದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಫೇಸ್‌ಬುಕ್ ಕೂಡ ಸಣ್ಣ ಉದ್ಯಮ ಸಾಲಗಳ ಉಪಕ್ರಮವನ್ನು ಪ್ರಾರಂಭಿಸಿದೆ. ಫೇಸ್‌ಬುಕ್‌ನ ಮಾಲೀಕ ಕಂಪನಿ Meta ಅಥವಾ Facebook ಸ್ವತಃ ಈ ಸಾಲವನ್ನು ನೀಡುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಇದಕ್ಕಾಗಿ ಕಂಪನಿ Indifi ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

ಇದನ್ನೂ ಓದಿ-Three Headed Cheetah!: ಮೂರು ತಲೆಗಳುಳ್ಳ ಚಿರತೆಯನ್ನು ಎಲ್ಲಾದರು ನೋಡಿದ್ದೀರಾ? ನೋಡಿದ್ರೆ, ನೀವೂ ಛಾಯಾಗ್ರಾಹಕನ ಫ್ಯಾನ್ ಆಗುವಿರಿ

Small Business loan ಇನಿಶಿಯೇಟಿವ್‌ಗೆ ಭೇಟಿ ನೀಡುವ ಮೂಲಕ ನೀವು ಸಣ್ಣ ವ್ಯಾಪಾರ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಸಾಲವನ್ನು ಪಡೆಯಲು, ನೀವು ಕನಿಷ್ಟ 6 ತಿಂಗಳ ಕಾಲ Meta ಅಥವಾ Facebook ನೊಂದಿಗೆ ಸಂಯೋಜಿತವಾಗಿರುವ ಯಾವುದೇ ಅಪ್ಲಿಕೇಶನ್‌ನಲ್ಲಿ ನಿಮ್ಮ ವ್ಯಾಪಾರದ ಜಾಹೀರಾತುಗಳನ್ನು ಮಾಡುತ್ತಿರಬೇಕು. ಈ ಅವಶ್ಯಕತೆಗಳನ್ನು ಪೂರೈಸಿದ ನಂತರ, ನೀವು ಸುಲಭವಾಗಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ-Facebook ಬಳಕೆದಾರರಿಗೊಂದು ಎಚ್ಚರಿಕೆ! ಈ ರೀತಿಯ Comment ನಿಮ್ಮನ್ನು ಶಿಕ್ಷೆಗೆ ಗುರಿಯಾಗಿಸಬಹುದು

ಎಷ್ಟು ಸಾಲ ಸಿಗಬಹುದು?
ಫೇಸ್‌ಬುಕ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮೂಲಕ ನೀವು 2 ಲಕ್ಷದಿಂದ 50 ಲಕ್ಷದವರೆಗೆ ಸಾಲ ಪಡೆಯಬಹುದು. ಸಾಲವನ್ನು ಅನುಮೋದಿಸಿದ ನಂತರ, ಹಣವನ್ನು 3 ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಸಾಲಕ್ಕಾಗಿ ನೀವು ಏನನ್ನೂ ಅಡಮಾನ ಇಡುವ ಅಗತ್ಯವಿಲ್ಲ. ಅಲ್ಲದೆ, ಸಾಲದ ಬಡ್ಡಿ ದರವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ನೀವು ಪಡೆದ ಮೊತ್ತಕ್ಕೆ ಶೇ.17 ರಿಂದ ಶೇ.20 ವಾರ್ಷಿಕ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಮಹಿಳಾ ಉದ್ಯಮಿಗಳಿಗೆ ಬಡ್ಡಿದರದಲ್ಲಿ ಶೇ.0.2 ರಷ್ಟು ರಿಯಾಯಿತಿ ಸಿಗುತ್ತದೆ. ನಿಮ್ಮ ಲೋನ್ ಅನುಮೋದಿಸಿದ ನಂತರ, ನೀವು ಕೇವಲ ಒಂದು ದಿನದಲ್ಲಿ ದೃಢೀಕರಣವನ್ನು ಪಡೆಯುತ್ತೀರಿ. ಇನ್ನುಳಿದ ದಾಖಲೆಗಳ ಕೆಲಸ ಕೇವಲ ಮೂರು ದಿನಗಳಲ್ಲಿ ಮುಗಿಯಲಿದೆ.

ಇದನ್ನೂ ಓದಿ-ಎಚ್ಚರ! ನಕಲಿ WhatsApp, Facebook, Instagram ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಿದ್ದೀರಾ? ಈಗಲೇ ಪರಿಶೀಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News