ನವದೆಹಲಿ : Employees Pension Scheme latest news: ಇಪಿಎಸ್ 95 (EPS-95) ಪಿಂಚಣಿದಾರರಿಗೊಂದು ಸಿಹಿ ಸುದ್ದಿ.  ಈಗ ಪಿಂಚಣಿಗಾಗಿ ಕಾಯಬೇಕಾಗಿಲ್ಲ. ಈಗ ತಿಂಗಳ ಕೊನೆಯ ಕೆಲಸದ ದಿನದಂದು ಪಿಂಚಣಿದಾರರ ಖಾತೆಗೆ ಪಿಂಚಣಿ (Pension ammount) ಮೊತ್ತ ಸೇರುತ್ತದೆ. ಪಿಂಚಣಿದಾರರು ಪಿಂಚಣಿಗಾಗಿ ದೀರ್ಘಕಾಲದವರೆಗೆ ಕಾಯಬೇಕಾಗುತ್ತದೆ ಎಂಬ ದೂರು ನಿರಂತರವಾಗಿ ಕೇಳಿ ಬರುತ್ತಿತ್ತು. 


COMMERCIAL BREAK
SCROLL TO CONTINUE READING

ಪಿಂಚಣಿದಾರರ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಇಪಿಎಫ್‌ಒ (EPFO) ಸುತ್ತೋಲೆ ಹೊರಡಿಸಿದೆ. ಇದರ ಪ್ರಕಾರ, ಮಾರ್ಚ್ ಹೊರತುಪಡಿಸಿ ಎಲ್ಲಾ ತಿಂಗಳುಗಳಲ್ಲಿ ಪಿಂಚಣಿದಾರರು (Pensioners), ತಿಂಗಳ ಕೊನೆಯ ಕೆಲಸದ ದಿನದ ಮೊದಲು  ಪಿಂಚಣಿ ಪಡೆಯುತ್ತಾರೆ. ಅಂದರೆ, ಇನ್ನು ಮುಂದೆ ಪಿಂಚಣಿಗಾಗಿ  ಪಿಂಚಣಿದಾರರು ಕಾಯಬೇಕಾಗಿಲ್ಲ.


ಇದನ್ನೂ ಓದಿ : 19-01-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ


ಕೊನೆಯ ಕೆಲಸದ ದಿನದಂದು ಖಾತೆಗಳಿಗೆ ಜಮೆಯಾಗಲಿದೆ ಹಣ : 
ಈಗ ಪಿಂಚಣಿ (Pension) ಮೊತ್ತವನ್ನು ತಿಂಗಳ ಕೊನೆಯ ಕೆಲಸದ ದಿನದಂದು ಪಿಂಚಣಿದಾರರ (EPS Pensioners) ಖಾತೆಗೆ ವರ್ಗಾಯಿಸಲಾಗುತ್ತದೆ. ಇಲ್ಲಿಯವರೆಗೆ ಪಿಂಚಣಿಯನ್ನು ತಿಂಗಳ ಆರಂಭದಲ್ಲಿ ಪಿಂಚಣಿದಾರರ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಅನೇಕ ಬಾರಿ ರಜೆ ಅಥವಾ ಇನ್ನಾವುದೇ ಕಾರಣದಿಂದ ಪಿಂಚಣಿ ಮೊತ್ತ ಬಹಳ ತಡವಾಗಿ ಖಾತೆ ಸೇರುತ್ತಿತ್ತು. ಪಿಂಚಣಿ ವಿಭಾಗವು ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ದೇಶನಗಳಿಗೆ ಅನುಸಾರವಾಗಿ, ಮಾಸಿಕ ಮಾಹಿತಿಯನ್ನು ಬ್ಯಾಂಕ್‌ಗಳ ಎಲ್ಲಾ ಕ್ಷೇತ್ರ ಕಚೇರಿಗಳಿಗೆ ಪಿಂಚಣಿ ಜಮಾ ಮಾಡುವ ರೀತಿಯಲ್ಲಿ ಕಳುಹಿಸಲು ನಿರ್ಧರಿಸಲಾಗಿದೆ. 


ನಿರಂತರವಾಗಿ ಕೇಳಿ ಬರುತ್ತಿತ್ತು ದೂರು : 
ಪಿಂಚಣಿ ವಿಭಾಗವು ಸಕಾಲಕ್ಕೆ ಪಿಂಚಣಿ ಪಡೆಯದಿರುವ ಬಗ್ಗೆ ನಿರಂತರವಾಗಿ ದೂರುಗಳನ್ನು ಸ್ವೀಕರಿಸುತ್ತಿದೆ ಎಂದು EPFO ಹೇಳಿದೆ. ಈ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಸರಿಯಾದ ಸಮಯಕ್ಕೆ ಪಿಂಚಣಿ ಮೊತ್ತವನ್ನು ಜಮಾ ಮಾಡುವಂತೆ ಆದೇಶ ನೀಡಲಾಗಿದೆ. ಇದರೊಂದಿಗೆ ಬ್ಯಾಂಕ್‌ಗಳು (Bank) ಪಿಂಚಣಿದಾರರ ಖಾತೆಗೆ ಹಣ ವರ್ಗಾವಣೆ ಮಾಡುವ ದಿನಕ್ಕೆ ಗರಿಷ್ಠ 2 ದಿನಗಳ ಮೊದಲು ಈ ಮೊತ್ತವನ್ನು ಬ್ಯಾಂಕ್‌ಗಳು ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ.   


ಇದನ್ನೂ ಓದಿ : Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಭಾರತೀಯ ರೈಲುಗಳಲ್ಲಿ ಆರಂಭವಾಗಿದೆ ಈ ಸೇವೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.