Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಭಾರತೀಯ ರೈಲುಗಳಲ್ಲಿ ಆರಂಭವಾಗಿದೆ ಈ ಸೇವೆ

Indian Railways: ರೈಲ್ವೆ ಪ್ರಯಾಣಿಕರಿಗೆ ಬಹಳ ಮುಖ್ಯವಾದ ಸುದ್ದಿ. ಈಗ ನಿಮ್ಮ ಪ್ರಯಾಣವು ಇನ್ನಷ್ಟು ಸುಲಭವಾಗಲಿದೆ. ಏಕೆಂದರೆ ಈಗ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಭಾರವಾದ ಹೊದಿಕೆಗಳು ಮತ್ತು ಬೆಡ್ ಶೀಟ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಅಗತ್ಯವಿಲ್ಲ. 

Written by - Yashaswini V | Last Updated : Jan 19, 2022, 01:57 PM IST
  • ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ
  • ರೈಲ್ವೆ ವಿಶೇಷ ಸೇವೆ ಆರಂಭಿಸಿದೆ
  • ಎಲ್ಲಾ ಪ್ರಯಾಣಿಕರು ಪ್ರಯೋಜನ ಪಡೆಯುತ್ತಾರೆ
Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಭಾರತೀಯ ರೈಲುಗಳಲ್ಲಿ ಆರಂಭವಾಗಿದೆ ಈ ಸೇವೆ title=
Indian Railways latest News

Indian Railways: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದು ಬಂದಿದೆ. ಈಗ ರೈಲಿನಲ್ಲಿ ನಿಮ್ಮ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ. ಭಾರತೀಯ ರೈಲ್ವೇ (Indian Railways) ಪ್ರಯಾಣಿಕರಿಗೆ ಉತ್ತಮ ಪರಿಹಾರ ನೀಡಿದೆ. ಈಗ ನೀವು ಪ್ರಯಾಣದ ಸಮಯದಲ್ಲಿ ನಿಮ್ಮೊಂದಿಗೆ ಭಾರವಾದ ಹೊದಿಕೆಗಳು ಮತ್ತು ಬೆಡ್ ಶೀಟ್ ಗಳನ್ನು ಒಯ್ಯುವ ಅಗತ್ಯವಿಲ್ಲ. ರೈಲ್ವೇ ಈಗ ಬಿಸಾಡಬಹುದಾದ ಬೆಡ್‌ರೋಲ್‌ಗಳ ಸೌಲಭ್ಯವನ್ನು ಪ್ರಾರಂಭಿಸಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ರೈಲ್ವೆ ಕಳೆದ ಎರಡು ವರ್ಷಗಳಿಂದ ರೈಲುಗಳಲ್ಲಿ ಬೆಡ್‌ರೋಲ್‌ಗಳ ಸೇವೆಯನ್ನು ನಿಲ್ಲಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಈಗ ಇದಕ್ಕೆ ಪರ್ಯಾಯವಾಗಿ ಡಿಸ್ಪೋಸಬಲ್ ಬೆಡ್ ರೋಲ್ ಕಿಟ್ ಸೇವೆಯನ್ನು ಆರಂಭಿಸಿದೆ.

ಏನಿದು ಡಿಸ್ಪೋಸಬಲ್ ಬೆಡ್ ರೋಲ್?
ಈ ವಿಶೇಷ ಸೇವೆಯ ಅಡಿಯಲ್ಲಿ ಪ್ರಯಾಣಿಕರು ಬಿಸಾಡಬಹುದಾದ ಬೆಡ್‌ರೋಲ್ ಅನ್ನು 150 ರೂ.ಗೆ ಪಡೆಯುತ್ತಾರೆ. ಈಗ ಪ್ರಯಾಣಿಕರು ಪ್ರಯಾಣದಲ್ಲಿ ಬೆಡ್ ಶೀಟ್ ಬಗ್ಗೆ ಚಿಂತಿಸಬೇಕಾಗಿಲ್ಲ. ದೂರದ ಊರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸೌಲಭ್ಯ ನೀಡಲಾಗುತ್ತಿದೆ. ರೈಲ್ವೇ (Indian Railways) ನೀಡಿರುವ ಮಾಹಿತಿಯ ಪ್ರಕಾರ ಪ್ರಸ್ತುತ ಈ ಸೌಲಭ್ಯವು ಆಯ್ದ ರೈಲುಗಳಲ್ಲಿ ಮಾತ್ರ ಲಭ್ಯವಿದೆ. 

ಇದನ್ನೂ ಓದಿ- Aadhaar Update: ಗಮನಿಸಿ! ಈ ರೀತಿಯ ಆಧಾರ್ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲ- ಯುಐಡಿಎಐ

ಎಷ್ಟು ಪಾವತಿಸಬೇಕು?
ರೈಲ್ವೆಯ ಈ ವಿಶೇಷ ಸೌಲಭ್ಯಕ್ಕಾಗಿ ಪ್ರಯಾಣಿಕರು 150 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. 150 ರೂಪಾಯಿಯ ಕಿಟ್‌ನಲ್ಲಿ ಅನೇಕ ವಸ್ತುಗಳು ಲಭ್ಯವಿರುತ್ತವೆ. ಇದರಲ್ಲಿ ಹೊದಿಕೆಯ ಜೊತೆಗೆ ಟೂತ್ ಪೇಸ್ಟ್ ಮತ್ತು ಮಾಸ್ಕ್ ಕೂಡ ಲಭ್ಯವಿರುತ್ತದೆ. ಈ ರೈಲ್ವೇ ಕಿಟ್‌ನಲ್ಲಿ (Railway Kit) ಏನಿದೆ ಎಂದು ತಿಳಿಯೋಣ. 

ಇದನ್ನೂ ಓದಿ- ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಚಿಂತೆ ಬಿಟ್ಟು ಬಿಡಿ , TATA ತಂದಿದೆ ಅಗ್ಗದ ಬೆಲೆಯ CNG ಕಾರು

ಈ ರೈಲ್ವೇ ಕಿಟ್‌ನಲ್ಲಿ ಈ ಎಲ್ಲಾ ವಸ್ತುಗಳು ಲಭ್ಯವಿರಲಿದೆ:
ಬೆಲೆ: ₹ 150.00
1- ಬೆಡ್ ಶೀಟ್ ಬಿಳಿ(20 GSM) (Bed Sheet White)
48 x 75  
(1220mm x 1905mm)
2- ಬ್ಲಾಂಕೆಟ್ ಗ್ರೇ/ಬ್ಲೂ(40 GSM) (Blanket Grey/Blue)
54 x 78
(1370mm x 1980mm)  
3- 1 ಏರ್ ಪಿಲ್ಲೋ ವೈಟ್  (Inflatable Air Pillow White)
4-1 ಪಿಲ್ಲೋ ಕವರ್ ವೈಟ್ (Pillow Cover WHITE)
5- ಫೇಸ್ ಟವೆಲ್/ನ್ಯಾಪ್ಕಿನ್ ವೈಟ್ (Face Towel/Napkin WHITE)
6- ತ್ರೀ ಪ್ಲೈ ಫೇಸ್ ಮಾಸ್ಕ್ (Three ply Face Mask)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News