Indian Railways Latest Rule: ರೈಲ್ವೇ ಪ್ರಯಾಣಿಕರಿಗೆ ಇದು ಮಹತ್ವದ ಸುದ್ದಿ. ಈಗ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಕನ್ಫರ್ಮ್  ಆಗಿಲ್ಲ ಎನ್ನುವುದರ ಬಗ್ಗೆ ಚಿಂತಿಸಬೇಕಾಗಿಲ್ಲ. ವೈಟಿಂಗ್ ಅಥವಾ RAC ಟಿಕೆಟ್‌ಗಳನ್ನು     ಕನ್ಫರ್ಮ್ ಮಾಡಿಕೊಡುವಂತೆ TTಯನ್ನು ವಿನಂತಿಸಬೇಕಾಗಿಲ್ಲ. ರೈಲ್ವೇ ಸಚಿವಾಲಯದ ಒಂದು ನಿರ್ಧಾರದಿಂದಾಗಿ, ರೈಲಿನಲ್ಲಿ ವೈಟಿಂಗ್ ಮತ್ತು ಆರ್‌ಎಸಿ ಟಿಕೆಟ್‌ ಬಗ್ಗೆ ಚಿಂತಿಸಬೇಕಾಗಿಲ್ಲ. ರೈಲ್ವೇಯು ಪ್ರೀಮಿಯಂ, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಟಿಟಿಗೆ ಹ್ಯಾಂಡ್ ಹೆಲ್ಡ್ ಟರ್ಮಿನಲ್ ಸಾಧನವನ್ನು ಒದಗಿಸಲಿದೆ. ರೈಲ್ವೆ ಈಗಾಗಲೇ  ಈ ಪದ್ದತಿಯನ್ನು ಆರಂಭಿಸಿದೆ. ರೈಲಿನಲ್ಲಿ ಖಾಲಿ ಇರುವ ಬರ್ತ್ ವೇಟಿಂಗ್ ಅಥವಾ RAC ಸಂಖ್ಯೆ ಮತ್ತು ವರ್ಗದ ಪ್ರಕಾರ ಈ HHT ಸಾಧನ  ಸ್ವಯಂಚಾಲಿತವಾಗಿ  ಸೀಟನ್ನು ಕನ್ಫರ್ಮ್ ಮಾಡುವುದು. 


COMMERCIAL BREAK
SCROLL TO CONTINUE READING

ರೈಲ್ವೆಯ ಮಹತ್ವದ ನಿರ್ಧಾರ :
ಭಾರತೀಯ ರೈಲ್ವೆಯು ಈ ಹಿಂದೆ ಕೆಲವು ಪ್ರೀಮಿಯಂ ರೈಲುಗಳಲ್ಲಿ ಪ್ರಾಯೋಗಿಕವಾಗಿ   ಟಿಟಿಗಳಿಗೆ HHT ಸಾಧನಗಳನ್ನು ನೀಡಿತ್ತು. ಈ ಸೇವೆ ಪ್ರಯಾಣಿಕರ ಮೆಚ್ಚುಗೆಗೂ ಪಾತ್ರವಾಗಿತ್ತು.  ಈ ಯಶಸ್ಸಿನ ನಂತರ, ಭಾರತೀಯ ರೈಲ್ವೆಯು 559 ರೈಲುಗಳಲ್ಲಿ TT ಗೆ 5850 HHT ಸಾಧನಗಳನ್ನು ನೀಡಿದೆ. ರೈಲ್ವೇ ನೀಡಿದ ಮಾಹಿತಿಯ ಪ್ರಕಾರ, ಪ್ರೀಮಿಯಂ ರೈಲುಗಳ ಜೊತೆಗೆ ಎಲ್ಲಾ ಮೇಲ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕ್ರಮೇಣ ಸಾಧನವನ್ನು ಅಳವಡಿಸಲಾಗುವುದು. 


ಇದನ್ನೂ ಓದಿ : ಹಬ್ಬದ ಸೀಸನ್‌ನಲ್ಲಿ ಸಾರ್ವಜನಿಕರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ಬೆಲೆ ಕಡಿಮೆ ಆಗುವ ನಿರೀಕ್ಷೆ


ಚಲಿಸುತ್ತಿರುವ ರೈಲಿನಲ್ಲಿ ಒಂದು ದಿನದಲ್ಲಿ 523604  ರಿಸರ್ವೇಶನ್ ಮಾಡಲಾಗುತ್ತದೆ.  ಇದರಲ್ಲಿ 242825 ಟಿಕೆಟ್‌ಗಳನ್ನು ಚಲಿಸುವ ರೈಲಿನಲ್ಲಿ HHT ಸಾಧನದೊಂದಿಗೆ ಪರಿಶೀಲಿಸಲಾಗಿದೆ. ಇವುಗಳಲ್ಲಿ 18 ಸಾವಿರಕ್ಕೂ ಹೆಚ್ಚು ಆರ್‌ಎಸಿಗಳು ಮತ್ತು ಒಂಬತ್ತು ಸಾವಿರಕ್ಕೂ ಹೆಚ್ಚು ವೇಟಿಂಗ್ ಟಿಕೆಟ್‌ಗಳನ್ನು ಖಚಿತಪಡಿಸಲಾಗಿದೆ. ರೈಲ್ವೆ ಸಚಿವಾಲಯದ ಪ್ರಕಾರ, ಸಾಮಾನ್ಯ ದಿನಗಳಲ್ಲಿ ದಿನಕ್ಕೆ 12.5 ಲಕ್ಷ  ರಿಸರ್ವೇಶನ್  ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೇಲ್, ಎಕ್ಸ್‌ಪ್ರೆಸ್ ರೈಲುಗಳಲ್ಲಿ HHT ಸಾಧನಗಳೊಂದಿಗೆ ಟಿಕೆಟ್‌ಗಳನ್ನು ಪರಿಶೀಲಿಸಿದರೆ,  ಕನ್ಫರ್ಮ್  ಟಿಕೆಟ್‌ಗಳ ಸಂಖ್ಯೆ ಹೆಚ್ಚಾಗುತ್ತದೆ.


ಈಗ ತಪಾಸಣೆ ಹೇಗೆ ಮಾಡಲಾಗುತ್ತದೆ? :
ಈಗ ಅನೇಕ ರೈಲುಗಳಲ್ಲಿ, ಟಿಟಿ ಚಾರ್ಟ್‌ಗಳನ್ನು ತೆಗೆದುಕೊಳ್ಳುವ ಮೂಲಕ ಟಿಕೆಟ್‌ಗಳನ್ನು ಪರಿಶೀಲಿಸುತ್ತಾರೆ. ನಂತರ ಖಾಲಿ ಇರುವ ಬರ್ತ್ ಅನ್ನು ಗುರುಟಿಸಿ ವೈಟಿಂಗ್ ಮತ್ತು RAC ಪ್ರಯಾಣಿಕರಿಗೆ ನೀಡಲಾಗುತ್ತದೆ. ಆದರೆ ಇದರಲ್ಲಿ ಸೀಟು ಹಂಚಿಕೆ ಟಿಟಿಯನ್ನು ಅವಲಂಬಿಸಿರುತ್ತದೆ. ಕನ್ಫರ್ಮ್ ಸೀಟು ನೀಡಲು ಟಿಟಿಗಳು ಚೌಕಾಸಿ ಮಾಡುವ ಪ್ರಕರಣಗಳು ಕೂಡಾ ನಡೆದಿವೆ. 


ಇದನ್ನೂ ಓದಿ : Amit Shah: ಇಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ, ರಾಜಕೀಯ ವಿದ್ಯಮಾನ ಚರ್ಚೆ ಸಾಧ್ಯತೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.