Business Opportunity: ಸ್ವಂತ ವ್ಯಾಪಾರ ಆರಂಭಿಸಬೇಕೆ? ಈ ಉದ್ಯಮ ಆರಂಭಿಸಲು ಸರ್ಕಾರವೂ ನಿಮಗೆ ಸಹಾಯ ಮಾಡುತ್ತದೆ

Business Idea: ಒಂದು ವೇಳೆ ನೀವೂ ಕೂಡ ಸ್ವಂತ ಉದ್ಯಮ ಆರಂಭಿಸುವ ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೊಸ ಉದ್ಯಮ ಆರಂಭಿಸಲು ನಿಮಗೆ ಸಹಾಯ ಮಾಡಲು ಸರ್ಕಾರ ಕೂಡ ಹಲವು ಯೋಜನೆಗಳನ್ನು ಮುನ್ನಡೆಸುತ್ತಿದೆ. ಇದರಿಂದ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಸಾಕಷ್ಟು ಲಾಭ ಸಿಗುತ್ತಿದೆ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಉದ್ಯಮವನ್ನು ನೀವು ಅತಿ ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಿಸಬಹುದು ಮತ್ತು ಅದರಿಂದ ಜಬರ್ದಸ್ತ್ ಲಾಭ ಗಳಿಕೆ ಮಾಡಬಹುದು,   

Written by - Nitin Tabib | Last Updated : Aug 2, 2022, 10:00 PM IST
  • ಹೊಸ ಉದ್ಯಮ ಆರಂಭಿಸಲು ನಿಮಗೆ ಸಹಾಯ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಮುನ್ನಡೆಸುತ್ತಿದೆ.
  • ಒಂದು ವೇಳೆ ನೀವೂ ಕೂಡ ಸ್ವಂತ ಉದ್ಯಮ ಆರಂಭಿಸುವ ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ.
Business Opportunity: ಸ್ವಂತ ವ್ಯಾಪಾರ ಆರಂಭಿಸಬೇಕೆ? ಈ ಉದ್ಯಮ ಆರಂಭಿಸಲು ಸರ್ಕಾರವೂ ನಿಮಗೆ ಸಹಾಯ ಮಾಡುತ್ತದೆ title=
Business Opportunity

Business Idea: ಒಂದು ವೇಳೆ ನೀವೂ ಕೂಡ ಸ್ವಂತ ಉದ್ಯಮ ಆರಂಭಿಸುವ ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೊಸ ಉದ್ಯಮ ಆರಂಭಿಸಲು ನಿಮಗೆ ಸಹಾಯ ಮಾಡಲು ಸರ್ಕಾರ ಕೂಡ ಹಲವು ಯೋಜನೆಗಳನ್ನು ಮುನ್ನಡೆಸುತ್ತಿದೆ. ಇದರಿಂದ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಸಾಕಷ್ಟು ಲಾಭ ಸಿಗುತ್ತಿದೆ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಉದ್ಯಮವನ್ನು ನೀವು ಅತಿ ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಿಸಬಹುದು ಮತ್ತು ಅದರಿಂದ ಜಬರ್ದಸ್ತ್ ಲಾಭ ಗಳಿಕೆ ಮಾಡಬಹುದು, ಕಡಕನಾಥ್ ಹುಂಜು ಸಾಕಾಣಿಕೆಯ ಉದ್ಯಮ ಇದಾಗಿದೆ. ಮಧ್ಯಪ್ರದೇಶ ಹಾಗೂ ಚತ್ತೀಸ್ಗಡ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ಉಧ್ಯಮ ಭರದಿಂದ ಸಾಗುತ್ತಿದೆ. ಮಧ್ಯಪ್ರದೇಶದ ಈ ಕಡಕನಾಥ್ ಹುಂಜುಗಳ ಪ್ರಜಾತಿಗೆ ಭೌಗೋಲಿಕ ಗುರುತು ಮಾನ್ಯತೆ ಕೂಡ ದೊರೆತಿರುವುದು ಇಲ್ಲಿ ವಿಶೇಷ.

ಯಾವುದಾದರೊಂದು ವ್ಯಾಪಾರವನ್ನು ಆರಂಭಿಸುವ ಮೂಲಕ ನೀವೂ ಕೂಡ ಪ್ರತಿ ತಿಂಗಳಿಗೆ ಉತಮ ಆದಾಯವನ್ನು ಗಳಿಕೆ ಮಾಡಲು ನೀವು ಬಯಸುತ್ತಿದ್ದರೆ, ಈ ಸುದ್ದಿ ನಿಮಗೊಂದು ಸುವರ್ಣಾವಕಾಶ ನೀಡಲಿದೆ. ಇಂದು ನಾವು ಕಡಕನಾಥ ಕೋಳಿಗಳ ಉದ್ಯಮದ ಬಗ್ಗೆ ಹೇಳಿಕೊಡಲಿದ್ದೇವೆ. ಈ ಕಪ್ಪು ರೂಸ್ಟರ್ ಜಗತ್ತಿನಲ್ಲಿ ತನ್ನದೇ ಆದ ಗುರುತನ್ನು ಹೊಂದಿದೆ. ಈ ಕೋಳಿಗಳ ಹೆಚ್ಚಿನ ವ್ಯಾಪಾರವು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ನಡೆಯುತ್ತದೆ. ಬುಡಕಟ್ಟು ಪ್ರದೇಶದಲ್ಲಿ ಇದನ್ನು 'ಕಾಳಿಮಾಸಿ' ಎಂದು ಕರೆಯಲಾಗುತ್ತದೆ. ಇದರ ಮಾಂಸವು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಕಡಕ್ನಾಥ್ ಚಿಕನ್ ನಲ್ಲಿರುವ ಔಷಧೀಯ ಗುಣಗಳಿಂದಾಗಿ ಅದಕ್ಕೆ ವಿಪರೀತ ಬೇಡಿಕೆಯಿದೆ.

ಕಡಕ್ನಾಥ್ ಕೋಳಿಗಳ ವ್ಯಾಪಾರ ಪ್ರಸ್ತುತ ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಕೃಷಿ ವಿಜ್ಞಾನ ಕೇಂದ್ರಗಳು ಕಡಕ್‌ನಾಥ್ ಕೋಳಿ ಕೋಳಿಗಳನ್ನು ಸಮಯಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದರ ಮೇಲೆ ನೀವು ಇವುಗಳಿಂದಾಗುವ ಗಳಿಕೆಯ ಕುರಿತು ಅಂದಾಜಿಸಬಹುದು. ಕಡಕ್ನಾಥ್ ಕೋಳಿ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ, ಆದ್ದರಿಂದ ಮಧ್ಯಪ್ರದೇಶದ ಕಡಕ್ನಾಥ್ ಕೋಳಿಗೆ GI ಟ್ಯಾಗ್ ದೊರೆತಿದೆ. ಈ ಟ್ಯಾಗ್ ಎಂದರೆ ಕಡಕ್ನಾಥ್ ನಂತಹ ಕೋಳಿ ಮತ್ತು ಹುಂಜ ಮತ್ತೊಂದಿರಲು ಸಾಧ್ಯವಿಲ್ಲ ಎಂಬುದನ್ನು ಸಾರುತ್ತದೆ.

ಕಡಕ್ನಾಥ್ ಹುಂಜ ಮತ್ತು ಕೋಳಿಯ ಬಣ್ಣ, ಅದರ ಮಾಂಸದ ಬಣ್ಣ ಮತ್ತು ಅದರ ರಕ್ತದ ಬಣ್ಣ ಕೂಡ ಕಪಾಗಿರುತ್ತದೆ ಎಂದು ನಾವು ನಿಮಗೆ ಹೇಳಿದರೆ, ನಮಗೂ ಕೂಡ ಆಶ್ಚರ್ಯವಾಗಬಹುದು. ಔಷಧೀಯ ಗುಣಗಳಿಂದಾಗಿ ಇದಕ್ಕೆ ಹೆಚ್ಚಿನ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಈ ಕೋಳಿ ಮಾಂಸದಲ್ಲಿ ಕಬ್ಬಿಣ ಮತ್ತು ಪ್ರೋಟೀನ್ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಇದರ ಮಾಂಸದಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕೂಡ ಇರುತ್ತದೆ. ಈ ಕಾರಣದಿಂದಾಗಿ, ಈ ಕೋಳಿ ಹೃದಯ ಮತ್ತು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರ ನಿಯಮಿತ ಸೇವನೆಯಿಂದ ದೇಹವು ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತದೆ. ಇದಕ್ಕಿರುವ ಬೇಡಿಕೆ ಮತ್ತು ಪ್ರಯೋಜನಗಳ ಹಿನ್ನೆಲೆ, ಸರ್ಕಾರವು ಕೂಡ ಉದ್ಯಮವನ್ನು ಪ್ರಾರಂಭಿಸಲು ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡುತ್ತದೆ.

ಕಡಕ್ನಾಥ್ ಕೋಳಿ ಸಾಕಾಣಿಕೆಯ ಅಗತ್ಯವನ್ನು ಅರ್ಥಮಾಡಿಕೊಂಡ ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಸರ್ಕಾರಗಳು ಅದನ್ನು ಉತ್ತೇಜಿಸಲು ಅನೇಕ ಯೋಜನೆಗಳನ್ನು ನಡೆಸುತ್ತಿವೆ. ಛತ್ತೀಸ್‌ಗಢದಲ್ಲಿ ಕೇವಲ 53,000 ರೂ.ಗಳನ್ನು ಠೇವಣಿ ಇರಿಸಿದರೆ, 1000 ಮರಿಗಳು, 30 ಕೋಳಿ ಶೆಡ್‌ಗಳು ಮತ್ತು ಆರು ತಿಂಗಳ ಉಚಿತ ಆಹಾರವನ್ನು ಸರ್ಕಾರವು ಮೂರು ಕಂತುಗಳಲ್ಲಿ ನೀಡುತ್ತದೆ. ಇದೇ ವೇಳೆ ಸರ್ಕಾರವು ಲಸಿಕೆ ಮತ್ತು ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ಸಹ ಹೊತ್ತುಕೊಳ್ಳುತ್ತದೆ. ಅಷ್ಟೇ ಅಲ್ಲ ಕೋಳಿಗಳು ಬೆಳೆದಾಗ ಅವುಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಕೆಲಸವನ್ನೂ ಕೂಡ ಸರ್ಕಾರವೇ ಮಾಡುತ್ತದೆ.

ಇದನ್ನೂ ಓದಿ-GST Rules: ಅಕ್ಟೋಬರ್ 1 ರಿಂದ ಜಿಎಸ್ಟಿ ನಿಮಯಗಳಲ್ಲಿ ಭಾರಿ ಬದಲಾವಣೆ, ಸರ್ಕಾರ ಹೇಳಿದ್ದೇನು?

ನೀವೂ ಕಡಕ್ನಾಥ್ ಕೋಳಿ ಸಾಕಾಣಿಕೆ ಉದ್ಯಮ ಅಆರಂಭಿಸಲು ಬಯಸುತ್ತಿದ್ದರೆ, ನೀವು ಕೃಷಿ ವಿಜ್ಞಾನ ಕೇಂದ್ರದಿಂದ ಮರಿಗಳನ್ನು ತೆಗೆದುಕೊಳ್ಳಬಹುದು. ಕೆಲವು ರೈತರು 15 ದಿನದ ಮರಿಯನ್ನು ತೆಗೆದುಕೊಂಡರೆ, ಕೆಲವರು ಒಂದು ದಿನದ ಮರಿಯನ್ನು ತೆಗೆದುಕೊಳ್ಳುತ್ತಾರೆ. ಕಡಕ್ನಾಥದ ಮರಿಗಳು ಮೂರೂವರೆಯಿಂದ ನಾಲ್ಕು ತಿಂಗಳೊಳಗೆ ಮಾರಾಟಕ್ಕೆ ಸಿದ್ಧವಾಗುತ್ತದೆ. ಕಡಕ್ನಾಥ್ ಕೋಳಿಯ ಒಂದು ಮರಿಯ ದರ 70-100 ರೂ. ಒಂದು ಮೊಟ್ಟೆಯ ದರ 20-30 ರೂ.ವರೆಗೆ ಇರುತ್ತದೆ. ಅಂದರೆ, ನಿಮ್ಮ ಬಜೆಟ್  ವಿಷಯದಲ್ಲಿಯೂ ಕೂಡ ಇದು ತುಂಬಾ ಅಗ್ಗದ ಉದ್ಯಮವಾಗಲಿದೆ.

ಇದನ್ನೂ ಓದಿ-ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಶೇ.30ರಷ್ಟು ಕಡಿಮೆಯಾಗಲಿದೆ ಟಿಕೆಟ್ ದರ!

ಈ ಉದ್ಯಮದಿಂದ ಬರುವ ಲಾಭದ ಕುರಿತು ಹೇಳುವುದಾದರೆ, ಕಡಕ್ನಾಥ್ ಒಂದು ಕೋಳಿ ಮಾರುಕಟ್ಟೆಯಲ್ಲಿ ಸುಮಾರು 3,000-4,000 ರೂ.ಗೆ ಮಾರಾಟವಾಗುತ್ತದೆ. ಇದರ ಮಾಂಸ ಕೆಜಿಗೆ 700-1000 ರೂ.ಗೆ ಮಾರಾಟವಾಗುತ್ತದೆ. ಚಳಿಗಾಲದಲ್ಲಿ ಮಾಂಸಾಹಾರ ಸೇವನೆ ಹೆಚ್ಚಾದಾಗ ಕಡಕ್ ನಾಥ್ ಚಿಕನ್ ಬೆಲೆ 1000-1200 ಕೆಜಿಗೆ ತಲುಪುತ್ತದೆ. ಈಗ ನೀವು ಲಾಭದ ಪ್ರಮಾಣವನ್ನು ನೋಡಿದರೆ, ನೀವು ಸರ್ಕಾರದಿಂದ 53,000 ರೂ.ಗೆ 1000 ಕೋಳಿಗಳನ್ನು ಖರೀದಿಸಿದ್ದೀರಿ ಎಂದು ಭಾವಿಸೋಣ. ಒಂದು ಕೋಳಿಯಲ್ಲಿ ಸರಾಸರಿ 3 ಕೆಜಿ ಮಾಂಸ ಹೊರಬರುತ್ತದೆ, ನಂತರ ಒಂದು ಚಳಿಗಾಲದಲ್ಲಿ ನೀವು 35 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಗಳಿಕೆ ಮಾಡಬಹುದು. ಇದಲ್ಲದೆ, ನೀವು 6 ತಿಂಗಳವರೆಗೆ ಧಾನ್ಯಗಳು ಮತ್ತು ಶೆಡ್‌ಗಳನ್ನು ತಯಾರಿಸಲು ಯಾವುದೇ ಖರ್ಚು ಮಾಡಬೇಕಾಗಿಲ್ಲ. ಅಂದರೆ, ನೀವು ಅತ್ಯಲ್ಪ ಶ್ರಮದಲ್ಲಿ ಮತ್ತು ಕಡಿಮೆ ಹೂಡಿಕೆಯಲ್ಲಿ ಪ್ರಚಂಡ ಲಾಭವನ್ನು ಪಡೆಯಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News