NPS account Opening through Aadhaar Based online KYC: ನೀವು ಬಯಸಿದರೆ ಈಗ ಇನ್ನೂ ಸುಲಭವಾಗಿ ಎನ್‌ಪಿಎಸ್ ಖಾತೆ (NPS Account) ತೆರೆಯಬಹುದಾಗಿದೆ.  ನೀವು ಆಧಾರ್ ಆಧಾರಿತ ಆನ್‌ಲೈನ್ ಕೆವೈಸಿ ಮೂಲಕ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಖಾತೆಯನ್ನು ಅಂದರೆ ಎನ್‌ಪಿಎಸ್ ಖಾತೆ ತೆರೆಯಬಹುದು.  ಲೈವ್‌ಮಿಂಟ್‌ನ ಸುದ್ದಿಯ ಪ್ರಕಾರ, ಹೊಸ ಚಂದಾದಾರರು ಎನ್‌ಪಿಎಸ್‌ಗೆ ಸೇರ್ಪಡೆಗೊಳ್ಳಲು ಆಧಾರ್ ಆಧಾರಿತ ಆನ್‌ಲೈನ್ ಕೆವೈಸಿ ಮೂಲಕ ಎನ್‌ಪಿಎಸ್‌ಗೆ ಸೇರಬಹುದು ಎಂದು ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಉಲ್ಲೇಖಿಸಿ ಇತ್ತೀಚೆಗೆ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಎನ್‌ಪಿಎಸ್ ಖಾತೆಗೆ ಇರುವ ನಿಬಂಧನೆಗಳಿವು:
ಇಲ್ಲಿಯವರೆಗೆ, ಇ-ಎನ್‌ಪಿಎಸ್ (e-NPS) ಅಡಿಯಲ್ಲಿ ಆಧಾರ್ ಮೂಲಕ ಆಫ್‌ಲೈನ್ ಕೆವೈಸಿ ಪ್ರಕ್ರಿಯೆಯ ಮೂಲಕ ಅಥವಾ ಪ್ಯಾನ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯ ಮೂಲಕ ನೋಂದಣಿ ಮಾಡಲಾಗಿದೆ. ಸುದ್ದಿಯ ಪ್ರಕಾರ, ಎನ್‌ಎಸ್‌ಡಿಎಲ್‌ಸಿಆರ್‌ಎ ಈಗ ಇ-ಎನ್‌ಪಿಎಸ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಣಿಗಾಗಿ ಆಧಾರ್ ಆಧಾರಿತ ಆನ್‌ಲೈನ್ ಕೆವೈಸಿ ದೃಢೀಕರಣ ಕಾರ್ಯವನ್ನು ಸಕ್ರಿಯಗೊಳಿಸಿದೆ.


ಇದನ್ನೂ ಓದಿ - NPS: ದಿನಕ್ಕೆ 180 ರೂ. ಹೂಡಿಕೆ ಮಾಡಿ, ನಿವೃತ್ತಿ ವೇಳೆ ಕೋಟ್ಯಾಧಿಪತಿಯಾಗಿ


ಆಧಾರ್‌ನಲ್ಲಿ ನೋಂದಾಯಿಸಲಾದ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಅಗತ್ಯ:
ಯಾವುದೇ ಹೂಡಿಕೆದಾರರು ಇ-ಎನ್‌ಪಿಎಸ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಖಾತೆಯನ್ನು ತೆರೆಯುವ ಮೂಲಕ ಹಣವನ್ನು ಹೂಡಿಕೆ ಮಾಡಬಹುದು. ಪ್ರಸ್ತುತ ಚಂದಾದಾರರು ಶ್ರೇಣಿ- II ಖಾತೆಯನ್ನು ಸಕ್ರಿಯಗೊಳಿಸಬಹುದು. ಈ ಹೊಸ ಸೌಲಭ್ಯದೊಂದಿಗೆ, ಎನ್‌ಪಿಎಸ್ (NPS) ಖಾತೆಯನ್ನು ತೆರೆಯುವುದು ಈಗ ಮೊದಲಿಗಿಂತ ಸುಲಭವಾಗುತ್ತದೆ. ಆಧಾರ್ ಆಧಾರಿತ ಆನ್‌ಲೈನ್ ಕೆವೈಸಿ ಮೂಲಕ ಎನ್‌ಪಿಎಸ್ ಖಾತೆ ತೆರೆಯಲು, ನಿಮ್ಮ ಆಧಾರ್ ಸಂಖ್ಯೆ ಮತ್ತು ಆಧಾರ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯವಿದೆ.


ಇದನ್ನೂ ಓದಿ - NPS ಖಾತೆಯಲ್ಲಿ Nominee ಬದಲಾಯಿಸಲು ಇಲ್ಲಿದೆ ಸುಲಭ ಪ್ರಕ್ರಿಯೆ


ಎನ್‌ಪಿಎಸ್‌ನಲ್ಲಿ ಹೂಡಿಕೆ:
ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಲು ಎರಡು ಆಯ್ಕೆಗಳಿವೆ - ಆಕ್ಟಿವ್ ಮೋಡ್ ಮತ್ತು ಆಟೋ ಮೋಡ್. ಆಕ್ಟಿವ್ ಮೋಡ್‌ನಲ್ಲಿ, ಒಬ್ಬ ವ್ಯಕ್ತಿಯು ವಾರ್ಷಿಕ ಆದಾಯವನ್ನು ಮೌಲ್ಯಮಾಪನ ಮಾಡಬಹುದು ಮತ್ತು ಈಕ್ವಿಟಿಯಿಂದ ಸಾಲಕ್ಕೆ ಮತ್ತು ಸಾಲವನ್ನು ಇಕ್ವಿಟಿ ಆಯ್ಕೆಗೆ ಪರಿವರ್ತಿಸಬಹುದು. ಆದಾಗ್ಯೂ, ಆಟೋ ಮೋಡ್‌ನಲ್ಲಿ, 8 ಫಂಡ್ ವ್ಯವಸ್ಥಾಪಕರು ಒಬ್ಬರ ಹೂಡಿಕೆಯನ್ನು ನಿಭಾಯಿಸುತ್ತಾರೆ ಮತ್ತು ತಮ್ಮ ಆಯ್ಕೆಗಳನ್ನು ಸಾಲದಿಂದ ಇಕ್ವಿಟಿಗೆ ಬದಲಾಯಿಸುತ್ತಾರೆ. ಎನ್‌ಪಿಎಸ್‌ನಲ್ಲಿ ಸೆಕ್ಷನ್ 80 ಸಿಸಿಡಿ ಅಡಿಯಲ್ಲಿ ಹೂಡಿಕೆಯ ಮೇಲೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.