NPS Rule Update: NPS ನಿಯಮದಲ್ಲಿ ಮಹತ್ವದ ಬದಲಾವಣೆ, ಈ ಹೊಸ ಬದಲಾವಣೆ ನಿಮಗೂ ತಿಳಿದಿರಲಿ
NPS Rules: ಪಿಂಚಣಿ ನಿಧಿ ನಿಯಂತ್ರಕ PFRDA ಯ ಎರಡು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಎನ್‌ಪಿಎಸ್ ಯೋಜನೆಯು ಸಂಘಟಿತ ವಲಯದ ಉದ್ಯೋಗಿಗಳಿಗಾಗಿ ನಡೆಸಲಾಗುತ್ತದೆ.
NPS-APY Rules : ನೀವು ಕೂಡ ಒಂದು ವೇಳೆ ಯಾವುದೇ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಥವಾ ಅಟಲ್ ಪಿಂಚಣಿ ಯೋಜನೆಯಲ್ಲಿ (APY) ಹೂಡಿಕೆ ಮಾಡುತ್ತಿದ್ದರೆ, ಅವುಗಳ ಕುರಿತಾದ ಈ ಅಪ್ಡೇಟ್ ನಿಮಗೆ ತಿಳಿದಿರುವುದು ತುಂಬಾ ಮಹತ್ವದ್ದಾಗಿದೆ. ಹೌದು, ಪಿಂಚಣಿ ನಿಧಿ ನಿಯಂತ್ರಕ PFRDA ಯ ಎರಡು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಹೊಸ ನಿಯಮದ ಅಡಿಯಲ್ಲಿ, ಇದೀಗ ಯೋಜನೆಗೆ ಸಂಬಂಧಿಸಿದ ಚಂದಾದಾರರು UPI ಪಾವತಿ ವ್ಯವಸ್ಥೆಯ ಮೂಲಕ ತಮ್ಮ ಕೊಡುಗೆಯನ್ನು ಪಾವತಿಸಬಹುದಾಗಿದೆ.
ಬೆಳಗ್ಗೆ 9.30ರ ಮೊದಲು ಹೂಡಿಕೆ ಮಾಡುವವರು ಲಾಭದಲ್ಲಿ ಇರಲಿದ್ದಾರೆ
ಇದಲ್ಲದೆ, ಚಂದಾದಾರರು ಬೆಳಗ್ಗೆ 9.30 ಕ್ಕಿಂತ ಮೊದಲು ತನ್ನ ಕೊಡುಗೆಯನ್ನು ಪಾವತಿಸಿದರೆ, ಅದನ್ನು ಅದೇ ದಿನ ಮಾಡಿದ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ ಎಂದು ಪಿಂಚಣಿ ನಿಧಿ ನಿಯಂತ್ರಕ ತಿಳಿಸಿದೆ. ಇದೇ ವೇಳೆ, 9.30 ರ ನಂತರ ಮಾಡಲಾಗುವ ಪಾವತಿಯನ್ನು ಮರುದಿನದ ಹೂಡಿಕೆಯಲ್ಲಿ ಲೆಕ್ಕಹಾಕಲಾಗುವುದು ಎನ್ನಲಾಗಿದೆ. ಇದುವರೆಗೆ ಚಂದಾದಾರರು IMPS / NEFT / RTGS (IMPS / NEFT / RTGS) ಬಳಸಿಕೊಂಡು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನೇರವಾಗಿ ಸ್ವಯಂಪ್ರೇರಿತ ಕೊಡುಗೆಯನ್ನು ಪಾವತಿಸುತ್ತಿದ್ದರು. ಆದರೆ ಇದೀಗ ಅದರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.
NPS ಎಂದರೇನು?
ಎನ್‌ಪಿಎಸ್ ಯೋಜನೆಯು ಸಂಘಟಿತ ವಲಯದ ಉದ್ಯೋಗಿಗಳಿಗಾಗಿ ಇರುವ ಒಂದು ಪಿಂಚಣಿ ಯೋಜನೆಯಾಗಿದೆ. 2004 ರಿಂದ ಜಾರಿಗೆ ಬಂದ ಈ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗೆ (ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ) ಕಡ್ಡಾಯವಾಗಿದೆ. ಇದು ಜನವರಿ 1, 2004 ರಂದು ಅಥವಾ ನಂತರ ಸೇವೆಗೆ ಸೇರಿದ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ. ಮೇ 2009 ರಲ್ಲಿ, ಇದನ್ನು ಸ್ವಯಂಪ್ರೇರಿತ ಆಧಾರದ ಮೇಲೆ ಖಾಸಗಿ ಮತ್ತು ಅಸಂಘಟಿತ ವಲಯಕ್ಕೆ ವಿಸ್ತರಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Vegetable Prive: ಇಂದು ಕರ್ನಾಟಕದಲ್ಲಿ ತರಕಾರಿ ಬೆಲೆ ಹೀಗಿದೆ
ಅಟಲ್ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ
ಇನ್ನೊಂದೆಡೆ ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸೀಮಿತವಾಗಿದೆ. ಈ ಯೋಜನೆಯ ಚಂದಾದಾರರು ತಮ್ಮ ಕೊಡುಗೆಯ ಆಧಾರದ ಮೇಲೆ 60 ವರ್ಷ ವಯಸ್ಸಿನ ನಂತರ ಖಾತರಿಯೊಂದಿಗೆ ಮಾಸಿಕ ಕನಿಷ್ಠ ರೂ 1,000 ರಿಂದ ರೂ 5,000 ವರೆಗೆ ಪಿಂಚಣಿ ಪಡೆಯುತ್ತಾರೆ. ಈ ಎರಡೂ ಯೋಜನೆಗಳೊಂದಿಗೆ ಕೋಟ್ಯಂತರ ಜನರು ಸಂಪರ್ಕ ಹೊಂದಿದ್ದಾರೆ. ಇತ್ತೀಚೆಗೆ, ಅಟಲ್ ಪಿಂಚಣಿ ಯೋಜನೆಯಲ್ಲಿ ಸರ್ಕಾರವು ಪ್ರಮುಖ ಬದಲಾವಣೆಯನ್ನು ಮಾಡಿದೆ.
ಇದನ್ನೂ ಓದಿ-ಸಾಲ ವಸೂಲಿ ವೇಳೆ ಬೆದರಿಕೆ ಹಾಕುವಂತಿಲ್ಲ: ಆರ್‌ಬಿಐ ಖಡಕ್ ವಾರ್ನಿಂಗ್!
ಅಕ್ಟೋಬರ್ 1 ರಿಂದ ಈ ನಿಯಮ ಅನ್ವಯಿಸಲಿದೆ
ಈ ಬದಲಾವಣೆಗೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ಅಧಿಸೂಚನೆಯನ್ನೂ ಹೊರಡಿಸಿದೆ. ಹೊಸ ನಿಯಮದ ಪ್ರಕಾರ, ಆದಾಯ ತೆರಿಗೆ ಪಾವತಿದಾರರು ಇನ್ನು ಮುಂದೆ ಅಟಲ್ ಪಿಂಚಣಿ ಯೋಜನೆಗೆ (ಎಪಿವೈ) ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಈ ನಿಯಮವು ಅಕ್ಟೋಬರ್ 1, 2022 ರಿಂದ ಅನ್ವಯಿಸಲಿದೆ. ಇದರ ನಂತರ, ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಆದಾಯ ತೆರಿಗೆ ಪಾವತಿಸುವ ಯಾವುದೇ ವ್ಯಕ್ತಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.