Big Update: 8ನೇ ವೇತನ ಆಯೋಗ ಜಾರಿಯಾಗಲಿದೆ! ನೌಕರರ ಸಂಘ ನೀಡಿದ ಮಾಹಿತಿ ಏನು?

8th Pay Commission Today News: ಕಳೆದ ಕೆಲ ದಿನಗಳಿಂದ 8ನೇ ವೇತನ ಆಯೋಗ ಜಾರಿಯಾಗುವುದಿಲ್ಲ ಎಂಬ ಸುದ್ದಿ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲ ಸರ್ಕಾರ ಬೇರೊಂದು ವಿಧಾನದ ಮೂಲಕ ನೌಕರರ ವೇತನವನ್ನು ಹೆಚ್ಚಿಸಲು ಯೋಜನೆ ರೂಪಿಸುತ್ತಿದೆ ಎನ್ನಲಾಗುತ್ತಿದೆ. ಆದರೆ ನೌಕರರ ಸಂಘದ ಈ ಕುರಿತಾದ ಹೇಳಿಕೆಯೇ ಭಿನ್ನವಾಗಿದೆ. ಬನ್ನಿ ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ಏನು ತಿಳಿದುಕೊಳ್ಳೋಣ.  

Written by - Nitin Tabib | Last Updated : Aug 12, 2022, 09:32 PM IST
  • ದೇಶಾದ್ಯಂತ ಇರುವ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಸ್ತುತ 7ನೇ ವೇತನ ಆಯೋಗದ ಶಿಫಾರಸುಗಳು ಅನ್ವಯಿಸುತ್ತಿವೆ,
  • ಉದ್ಯೋಗಿಗಳೂ ಇದರ ಲಾಭ ಸಿಗುತ್ತಿದೆ.
  • ಆದರೆ, ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ವೇತನ ವೇತನ ಸಿಗುತ್ತಿದೆ ಎಂಬುದು ನೌಕರರ ಕ್ಲೇಶವಾಗಿದೆ.
Big Update: 8ನೇ ವೇತನ ಆಯೋಗ ಜಾರಿಯಾಗಲಿದೆ! ನೌಕರರ ಸಂಘ ನೀಡಿದ ಮಾಹಿತಿ ಏನು? title=
8th Pay Commission

8th Pay Commission Latest Updates: ದೇಶಾದ್ಯಂತ ಇರುವ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಸ್ತುತ 7ನೇ ವೇತನ ಆಯೋಗದ ಶಿಫಾರಸುಗಳು ಅನ್ವಯಿಸುತ್ತಿವೆ, ಉದ್ಯೋಗಿಗಳೂ ಇದರ ಲಾಭ ಸಿಗುತ್ತಿದೆ. ಆದರೆ, ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ವೇತನ ವೇತನ ಸಿಗುತ್ತಿದೆ ಎಂಬುದು ನೌಕರರ ಕ್ಲೇಶವಾಗಿದೆ. ಈ ಸಂಬಂಧ ಜ್ಞಾಪಕ ಪತ್ರವನ್ನು ಸಿದ್ಧಪಡಿಸುತ್ತಿದ್ದು, ಶೀಘ್ರವೇ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ನೌಕರರ ಸಂಘಗಳು ತಿಳಿಸಿವೆ. ಈ ಜ್ಞಾಪಕ ಪತ್ರದಲ್ಲಿನ ಶಿಫಾರಸ್ಸುಗಳ ಪ್ರಕಾರ ವೇತನ ಹೆಚ್ಚಿಸಬೇಕು ಅಥವಾ 8ನೇ ವೇತನ ಆಯೋಗ ಜಾರಿಗೆ ತರಬೇಕು ಎಂಬ ಬೇಡಿಕೆ ಇದ್ರಲಿದೆ ಎನ್ನಲಾಗಿದೆ.

ಕಾರ್ಮಿಕರು ಮುಷ್ಕರ ನಡೆಸುವ ಸಾಧ್ಯತೆ ಇದೆ
ನಮ್ಮ ಅಂಗಸಂಸ್ಥೆ ಝೀ ಬಿಸಿನೆಸ್ ವೆಬ್‌ಸೈಟ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಶನ್ ಎಐಡಿಇಎಫ್, ಸರ್ಕಾರವು ಒಂದು ವೇಳೆ 8 ನೇ ವೇತನ ಆಯೋಗ ಜಾರಿ ಮತ್ತು ಹಳೆಯ ಪಿಂಚಣಿಯನ್ನು ಪುನಃಸ್ಥಾಪಿಸದಿದ್ದರೆ, ನೌಕರರು ಅನಿರ್ದಿಷ್ಟಾವಧಿಯವರೆಗೆ ಮುಷ್ಕರ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಮತ್ತು ರಾಜ್ಯ ನೌಕರರು ಜಂಟಿಯಾಗಿ ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ವಿಷಯ ಏನು ಅಂದರೆ, ಇತ್ತೀಚೆಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು 8 ನೇ ವೇತನ ಆಯೋಗವನ್ನು ರಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದರು. ಆದರೆ, 8ನೇ ವೇತನ ಆಯೋಗ ಬರುವುದೇ ಇಲ್ಲ ಅದನ್ನು ನೇರವಾಗಿ ಅರ್ಥೈಸಲಾಗಿದೆ. 

ಕನಿಷ್ಠ ವೇತನ 26 ಸಾವಿರ ರೂ
ಝೀ ಬ್ಯುಸಿನೆಸ್ ಪ್ರಕಾರ, ಪ್ರಸ್ತುತ ಕನಿಷ್ಠ ವೇತನ ಮಿತಿಯನ್ನು 18 ಸಾವಿರ ರೂ.ಗೆ ಇರಿಸಲಾಗಿದೆ ಎಂದು ಕೇಂದ್ರ ನೌಕರರ ಸಂಘಟನೆಗಳು ಹೇಳುತ್ತವೆ. ಇದರಲ್ಲಿ ಇನ್‌ಕ್ರಿಮೆಂಟ್‌ನಲ್ಲಿ ಫಿಟ್‌ಮೆಂಟ್ ಅಂಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪ್ರಸ್ತುತ, ಈ ಅಂಶವು 2.57 ಪಟ್ಟು ಇದೆ, ಆದರೆ 7 ನೇ ವೇತನ ಆಯೋಗದಲ್ಲಿ ಇದನ್ನು 3.68 ಪಟ್ಟು ಉಳಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ. ಇದೇ ವೇಳೆ ನೌಕರರ ಕನಿಷ್ಠ ವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ-ಭಾರತೀಯ ರೈಲ್ವೆ: ಈಗ ಪ್ರಯಾಣಿಕರು ರೈಲಿನಲ್ಲಿ ಟೆನ್ಶನ್ ಇಲ್ಲದೆ ಮಲಗಬಹುದು, ಮಿಸ್ ಆಗಲ್ಲ ನಿಮ್ಮ ಸ್ಟೇಷನ್

ಹೊಸ ವ್ಯವಸ್ಥೆಯನ್ನು ಕೂಡ ಸರ್ಕಾರ ಆರಂಭಿಸಬಹುದು
ಮೂಲಗಳ ಪ್ರಕಾರ ಇದೀಗ 7ನೇ ವೇತನ ಆಯೋಗದ ನಂತರ ಹೊಸ ವೇತನ ಆಯೋಗ ಬರುವುದಿಲ್ಲ ಎನ್ನಲಾಗುತ್ತಿದ್ದು. ಬದಲಾಗಿ ಹೊಸ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಲು ಹೊರಟಿದ್ದು, ಇದರಿಂದ ಸರ್ಕಾರಿ ನೌಕರರ ವೇತನ ತಾನಾಗಿಯೇ ಹೆಚ್ಚಾಗಲಿದೆ. ಇದು 'ಸ್ವಯಂಚಾಲಿತ ವೇತನ ಪರಿಷ್ಕರಣೆ ವ್ಯವಸ್ಥೆ' ಆಗಿರುವ ಸಾಧ್ಯತೆ ಇದೆ, ಇದರಲ್ಲಿ ಡಿಎ ಶೇಕಡಾ 50 ಕ್ಕಿಂತ ಹೆಚ್ಚಿದ್ದರೆ, ಸಂಬಳದಲ್ಲಿ ಸ್ವಯಂಚಾಲಿತ ಪರಿಷ್ಕರಣೆ ಇರಲಿದೆ. ಇದು ಸಂಭವಿಸಿದಲ್ಲಿ, 68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 52 ಲಕ್ಷ ಪಿಂಚಣಿದಾರರು ಅದರ ನೇರ ಪ್ರಯೋಜನವನ್ನು ಪಡೆಯುತ್ತಾರೆ. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಾಗ ಅಧಿಸೂಚನೆ ಹೊರಡಿಸಿ ಅಧಿಕೃತಗೊಳಿಸಲಾಗುವುದು ಎನ್ನಲಾಗುತ್ತಿದೆ.

ಇದನ್ನೂ ಓದಿ-Ola new e-Scooter: ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಓಲಾದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್

ಕಡಿಮೆ ಆದಾಯದ ಗುಂಪಿನ ನೌಕರರ ಸಂಬಳ ಹೆಚ್ಚಾಗಬಹುದು
ಈ ವಿಷಯಕ್ಕೆ ಸಂಬಂಧಿಸಿದ ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ಲೋವರ್ ಲೆವಲ್ ನಿಂದ ಮಿಡ್ಲ್ ಲೆವಲ್ ನೌಕರರ ವೇತನ ಹೆಚ್ಚಾಗಬೇಕು ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು 2023 ರಲ್ಲಿ ಹೊಸ ವೇತನ ಸೂತ್ರವನ್ನು ಜಾರಿಗೆ ತಂದರೆ, ಮಧ್ಯಮ ಹಂತದ ಉದ್ಯೋಗಿಗಳಿಗೆ ಹೆಚ್ಚಿನ ಲಾಭ ಸಿಗದೇ ಇರಬಹುದು. ಆದರೆ,  ಕಡಿಮೆ ಆದಾಯದ ಗುಂಪಿನ ನೌಕರರು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಅವರ ಮೂಲ ವೇತನ 3 ಸಾವಿರದಿಂದ 21 ಸಾವಿರ ರೂ.ವರೆಗೆ ಹೆಚ್ಚಾಗಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News