Ola E-Scooter- ಓಲಾ ಇ-ಸ್ಕೂಟರ್ ಅನ್ನು ಬುಕ್ ಮಾಡಲು ಗ್ರಾಹಕರು ಹೆಚ್ಚು ಸಮಯ ಕಾಯಬೇಕಾಗುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ತನ್ನ ಓಲಾ ಇ-ಸ್ಕೂಟರ್‌ಗಳಾದ ಎಸ್ 1 ಮತ್ತು ಎಸ್ 1 ಪ್ರೊಗಾಗಿ ಸ್ವೀಕರಿಸಿದ ಮೊದಲ ಆರ್ಡರ್‌ಗಳ ತಯಾರಿಯಲ್ಲಿ ಪ್ರಸ್ತುತ ನಿರತವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ನವೆಂಬರ್ 1, 2021 ರಿಂದ ಪ್ರಾರಂಭವಾಗಬೇಕಿದ್ದ ಮುಂದಿನ ಸುತ್ತಿನ ಬುಕಿಂಗ್ ಅನ್ನು ಮುಂದೂಡಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಓಲಾ ಇ-ಸ್ಕೂಟರ್ (Ola E-Scooter) S1 ಮತ್ತು S1 Pro ಗಾಗಿ ಮುಂದಿನ ಸುತ್ತಿನ ಬುಕಿಂಗ್‌ಗಳು ಗ್ರಾಹಕರಿಗೆ ಡಿಸೆಂಬರ್ 16 ರಿಂದ ಪ್ರಾರಂಭವಾಗಲಿದೆ ಎಂದು Ola ತಿಳಿಸಿದೆ. ಈ ಮೊದಲು ಈ ಬುಕಿಂಗ್ ದೀಪಾವಳಿಯ ಮೊದಲು ನವೆಂಬರ್ 1 ರಿಂದ ಪ್ರಾರಂಭವಾಗಬೇಕಿತ್ತು.


ಇದನ್ನೂ ಓದಿ- Dhanatrayodashi 2021: ಈ ಬಾರಿಯ ಧನತ್ರಯೋದಶಿಯ ದಿನದಂದು ಶೇ.20 ಡಿಸ್ಕೌಂಟ್ ನಲ್ಲಿ ಚಿನ್ನದ ನಾಣ್ಯ ಖರೀದಿಗೆ ಅವಕಾಶ


ಈಗಾಗಲೇ ಬುಕ್ ಮಾಡಿರುವ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಓಲ್ ಇ ಸ್ಕೂಟರ್ ಡೆಲಿವರಿ (Ola E-Scooter Delivery) ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಇದಕ್ಕೂ ಮೊದಲು, ಓಲಾ ಕಂಪನಿಯು ನವೆಂಬರ್ 10 ರಿಂದ ಓಲಾ ಇ-ಸ್ಕೂಟರ್‌ಗಳ ಉಚಿತ ಟೆಸ್ಟ್ ರೈಡ್ ಅನ್ನು ಪ್ರಾರಂಭಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿತ್ತು. 


OLA ನ ಇ-ಸ್ಕೂಟರ್‌ಗೆ ಸಾಕಷ್ಟು ಕ್ರೇಜ್ ಇದೆ:
Ola Electric ತನ್ನ ಎರಡು ಎಲೆಕ್ಟ್ರಿಕ್ ಸ್ಕೂಟರ್ S1 ಮತ್ತು S1 Pro ಅನ್ನು ಆಗಸ್ಟ್ 15 ರಂದು ಭಾರತೀಯ ಮಾರುಕಟ್ಟೆಯಲ್ಲಿ  1 ಲಕ್ಷ ರೂ.ಗಳ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಿತು. ಸ್ಕೂಟರ್ ಬಿಡುಗಡೆಯಾದ 1 ತಿಂಗಳ ನಂತರ ಅದರ ಬುಕಿಂಗ್ (Ola Electric Scooter Booking Date)  ಅನ್ನು ಎರಡು ದಿನಗಳವರೆಗೆ ತೆರೆಯಲಾಗಿದೆ. ಕಂಪನಿಯ ಪ್ರಕಾರ ಕೇವಲ ಎರಡು ದಿನಗಳಲ್ಲಿ 1100 ಕೋಟಿ ರೂ.ಗೂ ಹೆಚ್ಚು ಆನ್ ಲೈನ್ ವ್ಯವಹಾರ ನಡೆದಿದೆ. 


ಇದನ್ನೂ ಓದಿ- Bank Holidays : ನಾಳೆಯಿಂದ 5 ದಿನಗಳವರೆಗೆ ಬ್ಯಾಂಕ್ ರಜೆ, ಇಂದೇ ಪೂರೈಸಿಕೊಳ್ಳಿ ನಿಮ್ಮೆಲ್ಲಾ ಕೆಲಸ


ನವೆಂಬರ್ 10 ರಿಂದ ಟೆಸ್ಟ್ ಡ್ರೈವ್ ಆರಂಭ:
ಓಲಾ ಎಲೆಕ್ಟ್ರಿಕ್ ನಿರ್ದಿಷ್ಟ ಡೆಲಿವರಿ ವಿಂಡೋದಲ್ಲಿ ಸ್ಕೂಟರ್‌ಗಳನ್ನು ಹಸ್ತಾಂತರಿಸಲು ಸಿದ್ಧವಾಗಿದೆ ಮತ್ತು ಗ್ರಾಹಕರಿಗೆ ಓಲಾ ಇ-ಸ್ಕೂಟರ್‌ನ ಟೆಸ್ಟ್ ಡ್ರೈವ್ ಅನ್ನು ನವೆಂಬರ್ 10 ರಿಂದ ನೀಡಲು ಯೋಜಿಸಿದೆ. ಇ-ಸ್ಕೂಟರ್ ಎಸ್ 1 ಗಾಗಿ ಬುಕ್ ಮಾಡಿದ ಗ್ರಾಹಕರು ಟೆಸ್ಟ್ ಡ್ರೈವ್ ನಂತರವೇ ಪೂರ್ಣ ಪಾವತಿಯನ್ನು ಮಾಡಲು ಕಂಪನಿಯು ಕೇಳುತ್ತದೆ ಎಂದು ಓಲಾ ಹೇಳಿದೆ. 


ವಿತರಣೆ:
ಸ್ಕೂಟರ್‌ಗಾಗಿ ಕಾಯ್ದಿರಿಸಿದ ನಮ್ಮ ಎಲ್ಲಾ ಗ್ರಾಹಕರಿಗೆ ನಿರ್ದಿಷ್ಟ ಡೆಲಿವರಿ ವಿಂಡೋವನ್ನು ನೀಡಲಾಗಿದೆ ಮತ್ತು ಆ ವಿಂಡೋದಲ್ಲಿಯೇ ಅವರಿಗೆ ವಾಹನವನ್ನು  ವಿತರಿಸಲು ಸಿದ್ದರಿದ್ದೇವೆ ಎಂದು ಓಲಾ ಎಲೆಕ್ಟ್ರಿಕ್ ಹೇಳಿಕೆಯಲ್ಲಿ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ