ನವದೆಹಲಿ: ಧನತ್ರಯೋದಶಿ ಅಥವಾ ಧನ್ತೇರಸ್ ಎಂದು ಕರೆಯಲ್ಪಡುವ ಆಚರಣೆಯನ್ನು ದೀಪಾವಳಿ ಹಬ್ಬದ ಮೊದಲ ದಿನದಂದು ಆಚರಣೆ ಮಾಡಲಾಗುತ್ತದೆ. ಈ ಧನ್ತೇರಸ್ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ಮಂಗಳಕರವೆಂದು ಬಹಳ ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ಹಳದಿ ಲೋಹ ಅಥವಾ ಬೆಳ್ಳಿಯ ಮೇಲೆ ಹೂಡಿಕೆ ಮಾಡುವುದು ಸಮೃದ್ಧಿಯನ್ನು ತರುತ್ತದೆಂದು ಜನರು ನಂಬುತ್ತಾರೆ.
ಈ ವರ್ಷ ಧನ್ತೇರಸ್ ಅನ್ನು ನವೆಂಬರ್ 2ರ ಮಂಗಳವಾರ ಆಚರಿಸಲಾಗುತ್ತದೆ. ಕೊರೊನಾ ಸಾಂಕ್ರಾಮಿಕದ ಸಂಕಷ್ಟದ ಮಧ್ಯೆ ಹಳದಿ ಲೋಹ ಖರೀದಿಯು ಜನಸಾಮಾನ್ಯರಿಗೆ ಹೊರಯಾಗಬಹುದು. ಅನೇಕ ಭಾರತೀಯರು ದೀಪಾವಳಿ ಮತ್ತು ಧನ್ತೇರಸ್(Dhanteras and Diwali 2021) ವೇಳೆ ಚಿನ್ನವನ್ನು ಖರೀದಿಸುತ್ತಾರೆ.
ಇದನ್ನೂ ಓದಿ: Aadhaar Card Update: ನಿಮ್ಮ ಆಧಾರ್‌ಗೆ eSign ಅಥವಾ ಡಿಜಿಟಲ್ ಸಹಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ನಿಮಗೆ ಗೊತ್ತೆ..? ಕೇವಲ 1 ರೂಪಾಯಿಗೂ ನೀವು ಚಿನ್ನ(Gold) ಖರೀದಿಸಬಹುದು. ನಿಮ್ಮ ಬಳಿ ಚಿನ್ನ ಖರೀದಿಸಲು ಹಣವಿಲ್ಲದಿದ್ದರೆ ಚಿಂತೆಯಿಲ್ಲ. ಇರುವಷ್ಟೇ ಹಣದಲ್ಲಿ ನೀವು ಚಿನ್ನ ಖರೀದಿಸಬಹುದು. ಹೌದು, ಡಿಜಿಟಲ್ ಚಿನ್ನವನ್ನು ನೀವು ಕೇವಲ 1 ರೂಪಾಯಿಗೆ ಖರೀದಿಸಬಹುದು. ಏಕೆಂದರೆ ಹೂಡಿಕೆದಾರರಿಗೆ ಡಿಜಿಟಲ್ ಚಿನ್ನವು ಉತ್ತಮ ಆಯ್ಕೆಯಾಗಿದೆ. ಹಬ್ಬದ ಸಂದರ್ಭದಲ್ಲಿ ನೀವು PayTM, Google Pay, Phone Pe ಸೇರಿದಂತೆ ಅನೇಕ ಮೊಬೈಲ್ ವ್ಯಾಲೆಟ್‌ಗಳಿಂದ ಶೇ.99.99ರಷ್ಟು ಶುದ್ಧ ಪ್ರಮಾಣೀಕೃತ ಚಿನ್ನವನ್ನು ಕೇವಲ 1 ರೂಪಾಯಿಗೆ ಖರೀದಿಸಬಹುದು.
ಡಿಜಿಟಲ್ ಗೋಲ್ಡ್(Digital Gold) ಇತ್ತೀಚೆಗೆ ಪ್ರಮುಖ ಹೂಡಿಕೆಯ ಸಾಧನವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅನೇಕರು ಇಂದು ಮನೆಯಲ್ಲಿ ಕುಳಿತುಕೊಂಡು ತಮ್ಮ ಮೊಬೈಲ್ ಫೋನಿನಲ್ಲಿಯೇ ಕ್ಷಣಮಾತ್ರದಲ್ಲಿ ಡಿಜಿಟಲ್ ಗೋಲ್ಡ್ ಖರೀದಿಸುತ್ತಿದ್ದಾರೆ. ಡಿಜಿಟಲ್ ಗೋಲ್ಡ್ ಗೆ ಇಂದು ಭಾರೀ ಬೇಡಿಕೆ ಇದೆ. ಡಿಜಿಟಲ್ ಗೋಲ್ಡ್ ಖರೀದಿಸಲು ನಿಮ್ಮ ಬಳಿ ಸಾಕಷ್ಟು ಹಣವಿರಬೇಕೆಂದೇನೂ ಇಲ್ಲ. ನಿಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟೇ ಹಣಕ್ಕೆ ಚಿನ್ನವನ್ನು ಖರೀದಿಸಬಹುದು.
ಚಿನ್ನದ ನಾಣ್ಯವನ್ನು ಖರೀದಿಸುವುದು ಹೇಗೆ..?
* Google Pay ಖಾತೆಯನ್ನು ತೆರೆಯಿರಿ.
* ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಿನ್ನದ ಆಯ್ಕೆಯನ್ನು ಆರಿಸಿ.
* ಸಣ್ಣ ಮೊತ್ತವನ್ನು ಪಾವತಿಸಿ ನಿಮ್ಮ ಡಿಜಿಟಲ್ ಚಿನ್ನವನ್ನು ಖರೀದಿಸಿ.
* ನಿಮ್ಮ ಡಿಜಿಟಲ್ ಚಿನ್ನದ ಖರೀದಿಗೆ ಶೇ.3ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.
* ನಿಮ್ಮ ಚಿನ್ನದ ನಾಣ್ಯವನ್ನು ಮೊಬೈಲ್ ವ್ಯಾಲೆಟ್‌ನ ಚಿನ್ನದ ಲಾಕರ್‌ನಲ್ಲಿ ಭದ್ರಪಡಿಸಲಾಗುತ್ತದೆ.
* ಬಳಿಕ ನೀವು ಚಿನ್ನವನ್ನು ಮಾರಾಟ ಮಾಡಬಹುದು, ವಿತರಿಸಬಹುದು ಅಥವಾ ಉಡುಗೊರೆಯಾಗಿಯೂ ನೀಡಬಹುದು.
* ನೀವು ಚಿನ್ನವನ್ನು ಮಾರಾಟ ಮಾಡಲು ಬಯಸಿದರೆ, Sell ಬಟನ್ ಕ್ಲಿಕ್ ಮಾಡಿ.
* ನೀವು ಉಡುಗೊರೆಯಾಗಿ ನೀಡಲು ಬಯಸಿದರೆ, Gift ಬಟನ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮನೆ ಬಾಗಿಲಿಗೆ ಚಿನ್ನದ ನಾಣ್ಯ ತರಿಸಿಕೊಳ್ಳುವುದು ಹೇಗೆ?
ಹೋಮ್ ಡೆಲಿವರಿಗಾಗಿ ಗ್ರಾಹಕರು ಕನಿಷ್ಠ ಅರ್ಧ ಗ್ರಾಂ ಡಿಜಿಟಲ್ ಚಿನ್ನವನ್ನು ನಾಣ್ಯಗಳು ಅಥವಾ ಬಾರ್‌ಗಳ ರೂಪದಲ್ಲಿ ಖರೀದಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ