Old Cheque Book Valid News : ಜೂನ್ ೩೦ರವರೆಗೆ ಮಾತ್ರ ಮಾನ್ಯವಾಗಿರಲಿದೆ ಹಳೆಯ ಚೆಕ್ ಬುಕ್
ಸರ್ಕಾರವು ಕೆಲವು ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳ ಜೊತೆ ವಿಲೀನಗೊಳಿಸಿದೆ. ಬೇರೆ ಬ್ಯಾಂಕ್ ನೊಂದಿಗೆ ವಿಲೀನಗೊಳಿಸಿದ ನಂತರ ಚೆಕ್‌ಬುಕ್‌ಗಳು , ಪಾಸ್‌ಬುಕ್‌ಗಳು, ಐಎಫ್‌ಎಸ್‌ಸಿ ಕೋಡ್‌ಗಳನ್ನು ಬದಲಾಯಿಸ ಬೇಕಾಗುತ್ತದೆ.
ನವದೆಹಲಿ : Old Cheque Book Valid News Update: ಪಿಎನ್‌ಬಿ (PNB) ಖಾತೆದಾರರ ಚೆಕ್‌ಬುಕ್‌ನ ಸಿಂಧುತ್ವವನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಅಂದರೆ ಈ ಬ್ಯಾಂಕುಗಳ ಗ್ರಾಹಕರು ತಮ್ಮ ಹಳೆಯ ಚೆಕ್‌ಬುಕ್ ಅನ್ನು ಜೂನ್ 30ರವರೆಗೆ ಬಳಸಬಹುದು. ಜುಲೈ 1 ರಿಂದ ಹಳೆಯ ಚೆಕ್ ಬುಕ್ ಅಮಾನ್ಯವಾಗುತ್ತದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು (UNI) ಪಿಎನ್‌ಬಿಯೊಂದಿಗೆ ವಿಲೀನಗೊಳಿಸಿದ ನಂತರ ಖಾತೆದಾರರು ಹೊಸ ifsc ಕೋಡ್ ಮತ್ತು ಚೆಕ್ ಬುಕ್ ಗಳನ್ನು ಪಡೆಯುವಂತೆ ಸೂಚಿಸಲಾಗಿತ್ತು.
ಸರ್ಕಾರವು ಕೆಲವು ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳ (Bank) ಜೊತೆ ವಿಲೀನಗೊಳಿಸಿದೆ. ಬೇರೆ ಬ್ಯಾಂಕ್ ನೊಂದಿಗೆ ವಿಲೀನಗೊಳಿಸಿದ ನಂತರ ಚೆಕ್‌ಬುಕ್‌ಗಳು (Cheque book) , ಪಾಸ್‌ಬುಕ್‌ಗಳು, ಐಎಫ್‌ಎಸ್‌ಸಿ ಕೋಡ್‌ಗಳನ್ನು ( ifsc code) ಬದಲಾಯಿಸ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅವುಗಳ ಹಳೆಯ ಚೆಕ್‌ಬುಕ್‌ಗಳು ಅಮಾನ್ಯವಾಗುತ್ತವೆ. ಆದರೆ ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕಿನ (PNB) ನಿರ್ಧಾರದಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಪಿಎನ್‌ಬಿ ತನ್ನ ಅಧಿಕೃತ ಟ್ವಿಟರ್ (Twitter) ಮೂಲಕ ಈ ಮಾಹಿತಿ ನೀಡಿದೆ.
PPF ಸೇರಿದಂತೆ ಇತರ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ
ಹಳೆಯ ಚೆಕ್ ಬುಕ್ ಜೂನ್ 30 ರವರೆಗೆ ಮಾನ್ಯವಾಗಿರುತ್ತದೆ :
e-OBC/e-UNI ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ (ATM) ಮೂಲಕ ಹೊಸ ಪಿಎನ್‌ಬಿ ಚೆಕ್ ಬುಕ್ ಪಡೆದುಕೊಳ್ಳುವಂತೆ ಪಿಎನ್‌ಬಿ ಬ್ಯಾಂಕ್ ಸೂಚಿಸಿದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ನೀಡಿರುವ Post Dated Cheque Book ಜೂನ್ 30 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಪಿಎನ್‌ಬಿ ಹೇಳಿದೆ.
ಹೊಸIFSC ಮತ್ತು MICR ಜಾರಿ :
ಈ ಎರಡೂ ಬ್ಯಾಂಕುಗಳ ಖಾತೆದಾರರಿಗೆ ಪಿಎನ್‌ಬಿ ಹೊಸ ಐಎಫ್‌ಎಸ್‌ಸಿ ಕೋಡ್ ಮತ್ತು ಎಂಐಸಿಆರ್ (MICR) ನೀಡಿದೆ. ಒಂದು ವೇಳೆ ಗ್ರಾಹಕರು ಈ ಮಾಹಿತಿಯನ್ನು ಇನ್ನೂ ಸ್ವೀಕರಿಸದಿದ್ದರೆ, ಈ ಬಗ್ಗೆ SMS ಮೂಲಕ ಬ್ಯಾಂಕಿಗೆ ಮಾಹಿತಿಯನ್ನು ನೀಡಬೇಕಾಗುತ್ತದೆ.
ಇದನ್ನೂ ಓದಿ : Auto-Debit Payments: ದೇಶದ ಕೋಟ್ಯಾಂತರ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ RBI
SMS ಮೂಲಕ ifsc ಕೋಡ್ ತಿಳಿದುಕೊಳ್ಳಬಹುದು :
ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ UPGR <Space> < ಖಾತೆ ಸಂಖ್ಯೆಯ ಕೊನೆಯ 4 ಅಂಕೆಗಳು> ಟೈಪ್ ಮಾಡಿ 9264092640 ಗೆ SMS ಕಳುಹಿಸಬೇಕು. ಪಿಎನ್‌ಬಿಯ ಟೋಲ್ ಫ್ರೀ ಸಂಖ್ಯೆಗಳಾದ 1800-180-2222 ಮತ್ತು 1800-103-2222 ಅನ್ನು ಕೂಡಾ ಸಂಪರ್ಕಿಸಬಹುದು. ಖಾತೆದಾರನು care@pnb.co.in ಗೆ ಇಮೇಲ್ ಮಾಡುವ ಮೂಲಕ ತನ್ನ ದೂರನ್ನು ನೋಂದಾಯಿಸಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.