ನಿಮ್ಮ ಬಳಿ 5 ಮತ್ತು 10 ರೂ. ನಾಣ್ಯಗಳಿದ್ದರೆ 10 ಲಕ್ಷ ಗಳಿಸಬಹುದು: ಮಾಹಿತಿ ಇಲ್ಲಿದೆ ನೋಡಿ…
ಮನೆಯಲ್ಲಿಯೇ ಕುಳಿತುಕೊಂಡು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಹಳೆಯ ನಾಣ್ಯ ಮತ್ತು ನೋಟುಗಳನ್ನು ಮಾರಾಟ ಮಾಡಿ ಕೈತುಂಬಾ ಹಣ ಗಳಿಸಬಹುದಾಗಿದೆ.
ನವದೆಹಲಿ: ನೀವು ಹಳೆಯ ನಾಣ್ಯಗಳು(Old Coins) ಮತ್ತು ನೋಟು(Old Notes)ಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದೀರಾ..? ಹೌದು ಎಂದಾದರೆ, ಹಳೆಯ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ನೀವು ಲಕ್ಷ ಲಕ್ಷ ರೂ. ಗಳಿಸುವ ಸುವರ್ಣಾವಕಾಶವಿದೆ. ಮನೆಯಲ್ಲಿಯೇ ಕುಳಿತುಕೊಂಡು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಹಳೆಯ ನಾಣ್ಯ ಮತ್ತು ನೋಟುಗಳನ್ನು ಮಾರಾಟ ಮಾಡಿ ಕೈತುಂಬಾ ಹಣ ಗಳಿಸಬಹುದಾಗಿದೆ.
ಗಮನಿಸಬೇಕಾದ ಸಂಗತಿಯೆಂದರೆ 1, 2 ರೂ. ಮುಖ ಬೆಲೆಯ ಹಳೆಯ ನಾಣ್ಯಗಳು ಮತ್ತು 1, 2, 5 ರೂ. ಮುಖಬೆಲೆಯ ಹಳೆಯ ನೋಟುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಅಪರೂಪದ ಮತ್ತು ಹಳೆಯ ನಾಣ್ಯಗಳು, ನೋಟುಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವ ಮೂಲಕ ನೀವು 10 ಲಕ್ಷ ರೂ.ವರೆಗೂ ಹಣ ಗಳಿಸಬಹುದು.
ಇದನ್ನೂ ಓದಿ: NPS Rule Change: NPS ನಿಯಮಗಳಲ್ಲಿ ಭಾರಿ ಬದಲಾವಣೆ
ಮಾತೆ ವೈಷ್ಣೋ ದೇವಿ(Shri Mata Vaishno Devi)ಯ ಫೋಟೋ ಹೊಂದಿರುವ 5 ಮತ್ತು 10 ರೂ. ನಾಣ್ಯಗಳು ನಿಮ್ಮ ಬಳಿ ಇದ್ದರೆ ದೊಡ್ಡ ಮೊತ್ತವನ್ನು ಗಳಿಸಬಹುದು. ಈ ವಿಶೇಷ ನಾಣ್ಯಗಳನ್ನು 2002 ರಲ್ಲಿ ಬಿಡುಗಡೆ ಮಾಡಲಾಗಿತ್ತು. ದೇವಿಯ ಫೋಟೋ ಹೊಂದಿರುವ ನಾಣ್ಯಗಳನ್ನು ಧಾರ್ಮಿಕ ಮತ್ತು ಅದೃಷ್ಟದ ಸಂಕೇತವಾಗಿ ನೋಡಲಾಗುತ್ತದೆ. ಈ ನಾಣ್ಯವನ್ನು ಪಡೆದುಕೊಳ್ಳಲು ಅನೇಕರು 10 ಲಕ್ಷ ರೂ. ವರೆಗೂ ನೀಡಲು ಸಿದ್ಧರಿದ್ದಾರೆ. ಇದು ಅಚ್ಚರಿಯಾದರೂ ನಿಜ.
ಕೆಲವು ಇತರ ನೋಟು ಮತ್ತು ನಾಣ್ಯಗಳು ಕೂಡ ಬೇಡಿಕೆಯಲ್ಲಿವೆ.
1) 1 ರೂ. ಮುಖಬೆಲೆಯ ಹಳೆಯ ನೋಟು
1957 ರಲ್ಲಿ ಚಲಾವಣೆಗೆ ಬಂದ ರಾಜ್ಯಪಾಲ ಎಚ್.ಎಮ್.ಪಟೇಲ್ ಅವರ ಸಹಿ ಹೊಂದಿರುವ 1 ರೂ. ಮುಖಬೆಲೆಯ ನೋಟು( Rs 1 Note) ನಿಮಗೆ ಕೈತುಂಬಾ ಹಣವನ್ನು ಗಳಿಸಲು ಸಹಾಯ ಮಾಡುತ್ತದೆ. ಈ ನೋಟಿನಲ್ಲಿ ಸರಣಿ ಸಂಖ್ಯೆ 123456 ಅನ್ನು ಹೊಂದಿರಬೇಕು.
2) ONGCಯ 5 ರೂ. ಮತ್ತು 10 ರೂ. ಸ್ಮರಣಾರ್ಥ ನಾಣ್ಯಗಳು
ONGCಯ ವಿಶೇಷ ಸ್ಮರಣಾರ್ಥ ನಾಣ್ಯ(Coins)ಗಳನ್ನು ನಿಮ್ಮ ಬಳಿ ಇದ್ದರೆ ನೀವು ಸಾವಿರ ಸಾವಿರ ರೂ. ಹಣ ಗಳಿಸಬಹುದು. ಈ ನಾಣ್ಯಗಳಿಗೆ ಆನ್‌ಲೈನ್‌ನಲ್ಲಿ ಭಾರೀ ಬೇಡಿಕೆ ಇದ್ದು, ಅನೇಕರು ಸಾವಿರಾರು ರೂ. ಖರ್ಚು ಮಾಡಿ ಈ ನಾಣ್ಯಗಳನ್ನು ಪೆದುಕೊಳ್ಳಲು ಸಿದ್ಧರಿದ್ದಾರೆ.
3) 100 ರೂ. ಮುಖಬೆಲೆಯ ನೋಟುಗಳು
100 ರೂ. ಮುಖಬೆಲೆಯ ನೋಟುಗಳಲ್ಲಿ 000 786ರ ವಿಶೇಷ ಸಂಖ್ಯಾ ಸರಣಿ ಹೊಂದಿದ್ದರೆ ನೀವು ಲಕ್ಷ ಲಕ್ಷ ರೂ. ಹಣ ಗಳಿಸಬಹುದು. ಈ ನೋಟುಗಳು ಆರ್‌ಬಿಐನ ಮಾಜಿ ಗವರ್ನರ್ ಡಿ.ಸುಬ್ಬರಾವ್ ಅವರ ಸಹಿಯನ್ನು ಹೊಂದಿವೆ. ಇಲ್ಲಿ 786 ಸಂಖ್ಯೆಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ಸಂಖ್ಯೆಯ ನೋಟುಗಳಿಗೆ ಭಾರೀ ಬೇಡಿಕೆ ಇದ್ದು, ಕೈತುಂಬಾ ಹಣ ಗಳಿಸಬಹುದಾಗಿದೆ.
4) 1943ರ 10 ರೂ. ಮುಖಬೆಲೆಯ ನೋಟು
ಆರ್‌ಬಿಐನ ಮಾಜಿ ಗವರ್ನರ್ ಸಿ.ಡಿ.ದೇಶಮುಖ್(CD Deshmukh) ಅವರ ಸಹಿ ಮತ್ತು ಅಶೋಕ ಸ್ತಂಭ ಹೊಂದಿರುವ 1943ನೇ ಇಸವಿಯ 10 ರೂ. ಮುಖಬೆಲೆಯ ಈ ನೋಟಿ(Rs 10 Note)ಗೆ ಸಖತ್ ಡಿಮ್ಯಾಂಡ್ ಇದೆ. ಈ ನೋಟು ನಿಮ್ಮ ಬಳಿ ಇದ್ದರೆ ನೀವು 25 ಸಾವಿರ ರೂ.ವರೆಗೂ ಹಣ ಗಳಿಸಬಹುದು.
ಇದನ್ನೂ ಓದಿ: Online Passport Apply : ಈಗ ಮನೆಯಿಂದಲೇ Passport ಗೆ ಅರ್ಜಿ ಸಲ್ಲಿಸಬಹುದು - ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ!
ನೀವು ಈ ಅಪರೂಪದ, ಹಳೆಯ ವಿಶಿಷ್ಟ ನಾಣ್ಯಗಳನ್ನು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ನಿಮ್ಮ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡಲು ನೀವು ಈ ವೆಬ್‌ಸೈಟ್‌ಗಳಲ್ಲಿ ಮೊದಲು ನೋಂದಾಯಿಸಿಕೊಳ್ಳಬೇಕು. Quikr, Coin Bazaar, Snapdeal ಸೇರಿದಂತೆ ಅನೇಕ ವೆಬ್‌ಸೈಟ್‌ಗಳಲ್ಲಿ ನೀವು ಹಳೆಯ ನೋಟು ಮತ್ತು ನಾಣ್ಯಗಳನ್ನು ಮಾರಾಟ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.