ಬೆಂಗಳೂರು : ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12 ನೇ ಕಂತು ಆಗಸ್ಟ್ ಮತ್ತು ನವೆಂಬರ್ ನಡುವೆ ಬರಲಿದೆ. ಕಳೆದ ಬಾರಿ ಆಗಸ್ಟ್ ಎರಡನೇ ವಾರದಲ್ಲಿ ರೈತರ ಖಾತೆಗೆ ಕಂತಿನ ಹಣ ಬಂದಿತ್ತು. ಆದರೆ, ಈ ಬಾರಿ ಈ ಕಂತು ಯಾವಾಗ ಬರುತ್ತದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಈ ಮೊದಲು ಯೋಜನೆಯ 12 ನೇ ಕಂತು ಸೆಪ್ಟೆಂಬರ್‌ನಲ್ಲಿ ಬರಲಿದೆ ಎಂದು ಹೇಳಲಾಗುತ್ತಿ ತ್ತು. ಆದರೆ ಇದೀಗ ಪಿಎಂ ಕಿಸಾನ್ ಯೋಜನೆಯ 12ನೇ ಕಂತು ಅಕ್ಟೋಬರ್‌ನಲ್ಲಿ ರೈತರ ಖಾತೆ ಸೇರಲಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

21 ಲಕ್ಷ ರೈತರು ಅನರ್ಹರು :
ಹೊಸ ಪಟ್ಟಿ ಸಿದ್ಧಪಡಿಸಿದ ನಂತರ ಈ ಮೊತ್ತವನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು. ಇನ್ನು ಉತ್ತರಪ್ರದೇಶದಲ್ಲಿ ಇದುವರೆಗೆ ನಡೆಸಿದ ಸಮೀಕ್ಷೆಯಲ್ಲಿ 21 ಲಕ್ಷ ರೈತರು ಈ ಯೋಜನೆಗೆ ಅನರ್ಹರು ಎಂದು ಗುರುತಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಡಿ  ಅರ್ಹ ರೈತರಿಗೆ  ಸವಲತ್ತುಗಳನ್ನು ನೀಡಲಾಗುತ್ತಿದ್ದು, ದೂರು ಸ್ವೀಕರಿಸಿದ ನಂತರ ತನಿಖೆ ಆರಂಭಿಸಲಾಗಿದೆ.


ಇದನ್ನೂ ಓದಿ : Gold Price Today : ಇಂದಿನ ಚಿನ್ನ ಬೆಳ್ಳಿ ದರ ತಿಳಿಯಿರಿ


ತಂಡಗಳಿಂದ ಸಮೀಕ್ಷೆ ಆರಂಭ :
ಇನ್ನು  77 ಸಾವಿರ ಮೃತ ರೈತರ ಖಾತೆಗಳಿಗೆ ಹಣ ರವಾನೆಯಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದಲ್ಲದೇ ಲಕ್ಷಾಂತರ ಅನರ್ಹ ರೈತರೂ ಯೋಜನೆಯ ಲಾಭ ಪಡೆಯುತ್ತಿರುವುದು ಕೂಡಾ ಗಮನಕ್ಕೆ ಬಂದಿದೆ. ಈ ರೀತಿ ಯೋಜನೆಯ ಹಣವನ್ನು ಪಡೆದಿರುವ ಅನರ್ಹ ರೈತರಿಂದ ಮುಂದಿನ ದಿನಗಳಲ್ಲಿ ವಸೂಲಿ ಮಾಡಲಾಗುವುದು ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. 


ಆನ್-ಸೈಟ್ ಪರಿಶೀಲನೆಯ ಪ್ರಕ್ರಿಯೆಯು ಅನೇಕ ರಾಜ್ಯಗಳಲ್ಲಿ ನಡೆಯುತ್ತಿದೆ. ಅಕ್ಟೋಬರ್ ಮೊದಲ ವಾರದೊಳಗೆ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ದಸರಾ ನಂತರ ನಿಧಿಯ ಹಣವನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು. ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಲಾಯಿತು. ಇದರ ಅಡಿಯಲ್ಲಿ ಅರ್ಹ ರೈತರ ಖಾತೆಗೆ ಎರಡು ಸಾವಿರ ರೂಪಾಯಿಗಳಂತೆ  ಮೂರು ಕಂತುಗಳಲ್ಲಿ ಹಣ ವರ್ಗಾವಣೆ ಮಾಡಲಾಗುವುದು. 


ಇದನ್ನೂ ಓದಿ : Finance Minister: ಸರ್ಕಾರಿ ಬ್ಯಾಂಕುಗಳ ಮುಖ್ಯಸ್ಥರ ಭೇಟಿಗೆ ಮುಂದಾದ ಸೀತಾರಾಮನ್, ಕಾರಣ ಇಲ್ಲಿದೆ


eKYC ಪಡೆಯುವ ರೈತರಿಗೆ ಮಾತ್ರ ಈ ಕಂತಿನ ಹಣ  ಸಿಗುತ್ತದೆ :
ಇ-ಕೆವೈಸಿ ಪಡೆಯದ ರೈತರಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪಿಎಂ ಕಿಸಾನ್‌ನ ನೋಂದಾಯಿತ ರೈತರು ಇಕೆವೈಸಿ ಕೊನೆಯ ದಿನಾಂಕ ಎಂದು ಹೇಳಲಾಗಿತ್ತು. ಆದರೆ, ಈಗ ಈ ದಿನಾಂಕವನ್ನು ತೆಗೆದುಹಾಕಲಾಗಿದೆ. ನೋಂದಾಯಿತ ರೈತರು ಇಕೆವೈಸಿ ಮಾಡುವುದು ಅಗತ್ಯ.  


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.