Stock Market Outlook: ಮುಂದಿನ ವಾರ ಷೇರು ಮಾರುಕಟ್ಟೆಯ ಪಾಲಿಗೆ ಹೇಗಿರಲಿದೆ?

Share Market Latest News: ಯುಎಸ್ ಫೆಡರಲ್ ರಿಸರ್ವ್ ನ ಬಡ್ಡಿದರಗಳು ಈ ವಾರ ಮಾರುಕಟ್ಟೆಯ ನಡೆಯನ್ನು ನಿರ್ಧರಿಸಲಿವೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಒಳ ಹರಿವೂ ಕೂಡ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿದೆ.

Written by - Nitin Tabib | Last Updated : Sep 18, 2022, 02:08 PM IST
  • ಯುಎಸ್ ಹಣದುಬ್ಬರ ಅಂಕಿ-ಅಂಶಗಳು ಪ್ರಕಟಗೊಂಡ ನಂತರ ಜಾಗತಿಕ ಮಾರುಕಟ್ಟೆಗಳು ಆತಂಕಕ್ಕೊಳಗಾಗುತ್ತಿವೆ.
  • ಈ ಕಾರಣದಿಂದಾಗಿ, ಡಾಲರ್ ಸೂಚ್ಯಂಕವು ಸುಮಾರು 110ಕ್ಕೆ ತಲುಪಿದೆ.
  • ಯುಎಸ್ ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿಯ (FOMC) ಮುಂಬರುವ ಸಭೆಯ ಫಲಿತಾಂಶಗಳತ್ತ ಇದೀಗ ವ್ಯಾಪಾರಿಗಳು ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ.
Stock Market Outlook: ಮುಂದಿನ ವಾರ ಷೇರು ಮಾರುಕಟ್ಟೆಯ ಪಾಲಿಗೆ ಹೇಗಿರಲಿದೆ? title=
Stock Market Outlook

Share Market Outlook: ಯುಎಸ್ ಫೆಡರಲ್ ರಿಸರ್ವ್ ನ ಬಡ್ಡಿದರಗಳು ಈ ವಾರ ಮಾರುಕಟ್ಟೆಯ ನಡೆಯನ್ನು ನಿರ್ಧರಿಸಲಿವೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಒಳ ಹರಿವೂ ಕೂಡ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿದೆ.

ಮಾರುಕಟ್ಟೆಯ ತಜ್ಞರು ಹೇಳುವುದೇನು?
ಇದಕ್ಕೆ ಸಂಬಂದಿಸಿದಂತೆ ಮಾತನಾಡಿರುವ ಮಾರುಕಟ್ಟೆ ತಜ್ಞರು, “ಯುಎಸ್ ಹಣದುಬ್ಬರ ಅಂಕಿ-ಅಂಶಗಳು ಪ್ರಕಟಗೊಂಡ ನಂತರ ಜಾಗತಿಕ ಮಾರುಕಟ್ಟೆಗಳು ಆತಂಕಕ್ಕೊಳಗಾಗುತ್ತಿವೆ. ಈ ಕಾರಣದಿಂದಾಗಿ, ಡಾಲರ್ ಸೂಚ್ಯಂಕವು ಸುಮಾರು 110ಕ್ಕೆ ತಲುಪಿದೆ." ಯುಎಸ್ ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿಯ (FOMC) ಮುಂಬರುವ ಸಭೆಯ ಫಲಿತಾಂಶಗಳತ್ತ ಇದೀಗ ವ್ಯಾಪಾರಿಗಳು ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಇನ್ನೊಂದೆಡೆ ಬ್ಯಾಂಕ್ ಆಫ್ ಇಂಗ್ಲೆಂಡ್ ಕೂಡ ಬಡ್ಡಿದರದ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಾರಾಟಗಾರರಾಗಿರುವುದರಿಂದ ಸಾಂಸ್ಥಿಕ ಹೂಡಿಕೆದಾರರು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಜ್ಞರು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಮತ್ತೋರ್ವ ಮಾರುಕಟ್ಟೆ ತಜ್ಞರು, "ಯಾವುದೇ ಪ್ರಮುಖ ದೇಶೀಯ ಡೇಟಾ ಮತ್ತು ಘಟನೆಗಳ ಕೊರತೆಯ ಹಿನ್ನೆಲೆ ಭಾಗವಹಿಸುವವರ ದೃಷ್ಟಿ US ಫೆಡರಲ್ ರಿಸರ್ವ್ ಸಭೆಯ ಮೇಲೆ ಇರಲಿದೆ. ಇದಲ್ಲದೇ ವಿದೇಶದಿಂದ ಹರಿದುಬರುವ ಬಂಡವಾಳದ  ಮೇಲೂ ಕೂಡ ಅವರು ನಿಗಾ ವಹಿಸಲಿದ್ದಾರೆ" ಎಂದಿದ್ದಾರೆ.

ಇದನ್ನೂ ಓದಿ-Inflation: ಹಣದುಬ್ಬರದಿಂದ ಸಂಕಷ್ಟಕ್ಕೊಳಗಾದ ಜನತೆ, RBI ಅಧಿಕಾರಿಗಳು ಹೇಳಿದ್ದೇನು?

ಹಿಂದಿನ ವಾರ ಮಾರುಕಟ್ಟೆಯ ನಡೆ ಹೇಗಿತ್ತು?
ಕಳೆದ ವಾರ ಮಾರುಕಟ್ಟೆಯ ನಡೆಯ ಕುರಿತು ಹೇಳುವುದಾದರೆ, ಕಳೆದ ವಾರ ಸೆನ್ಸೆಕ್ಸ್ ಸೂಚ್ಯಂಕ ಸುಮಾರು 952.35 ಅಂಕಗಳಷ್ಟು ಅಂದರೆ ಶೇ. 1.59ರಷ್ಟು ಕುಸಿದಿದ್ದರೆ, ನಿಫ್ಟಿ ಕೂಡ 302.50 ಅಂಕಗಳಷ್ಟು ಅಂದರೆ, ಶೇ.1.69 ರಷ್ಟು ಕುಸಿದಿದೆ.

ಇದನ್ನೂ ಓದಿ-Nirmala Sitharaman: ವಂಚನೆಗಳನ್ನು ತಡೆಗಟ್ಟಲು ಬ್ಯಾಂಕ್ ಗಳಿಗೆ ಸಲಹೆ ನೀಡಿದ ವಿತ್ತ ಸಚಿವೆ
 
ಶುಕ್ರವಾರ ದಿನದಾಂತ್ಯಕ್ಕೆ ಸೆನ್ಸೆಕ್ಸ್ 1,093.22 ಪಾಯಿಂಟ್ ಅಥವಾ ಶೇ. 1.82 ರಷ್ಟು ಕುಸಿದು, 58,840.79 ಕ್ಕೆ ತಲುಪಿದೆ. ಬಲವಾದ ಸ್ಥೂಲ ಆರ್ಥಿಕ ಮಾಹಿತಿಯ ಹೊರತಾಗಿಯೂ, ದೇಶೀಯ ಮಾರುಕಟ್ಟೆ ಮತ್ತು ಡಾಲರ್ ಸೂಚ್ಯಂಕದಲ್ಲಿನ ಬಾಂಡ್ ಇಳುವರಿಗಳ ಏರಿಕೆಯ ಪ್ರವೃತ್ತಿಯು ಈಕ್ವಿಟಿ ಮಾರುಕಟ್ಟೆಗಳ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News