ಈ ಆದಾಯದ ಮೇಲೆ ಕೇವಲ ಶೇ.10ರಷ್ಟು ತೆರಿಗೆ ಅನ್ವಯ .! ಬಜೆಟ್ಗೂ ಮುನ್ನ ಹೊರ ಬಿತ್ತು ಮಾಹಿತಿ
ಭಾರತದಲ್ಲಿ ಎರಡು ರೀತಿಯಲ್ಲಿ ಆದಾಯ ತೆರಿಗೆಯನ್ನು ಪಾವತಿಸಲಾಗುತ್ತದೆ. ಒಂದು ಹಳೆಯ ತೆರಿಗೆ ಪದ್ಧತಿ ಮತ್ತೊಂದು ಹೊಸ ತೆರಿಗೆ ಪದ್ಧತಿ. ಈ ಎರಡೂ ವ್ಯವಸ್ಥೆಗಳಲ್ಲಿ, ವಿವಿಧ ಸ್ಲ್ಯಾಬ್‌ಗಳ ಪ್ರಕಾರ ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ.
Income Tax Slab : ಬಜೆಟ್ 2023 ಅನ್ನು ಕೆಲವೇ ದಿನಗಳಲ್ಲಿ ಮಂಡಿಸಲಾಗುವುದು. 2024ರ ಲೋಕಸಭೆ ಚುನಾವಣೆಗೂ ಮುನ್ನಕೇಂದ್ರ ಸರ್ಕಾರ ಮಂಡಿಸುತ್ತಿರುವ ಕೊನೆಯ ಪೂರ್ಣ ಬಜೆಟ್ ಇದಾಗಿರಲಿದೆ. ಇದೇ ವೇಳೆ ಈ ಬಾರಿಯ ಬಜೆಟ್‌ನಲ್ಲಿ ಮೋದಿ ಸರ್ಕಾರ ಹಲವು ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ. ಇದರೊಂದಿಗೆ ಮಧ್ಯಮ ವರ್ಗದ ಜನರಿಗೂ ಈ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಸಿಗುವ ನಿರೀಕ್ಷೆ ಇದೆ. ಪ್ರಸ್ತುತ ಆದಾಯ ತೆರಿಗೆಯನ್ನು ಯಾವ ಸ್ಲ್ಯಾಬ್ ಅಡಿಯಲ್ಲಿ ಪಾವತಿಸಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಆದಾಯ ತೆರಿಗೆ :
ಪ್ರಸ್ತುತ, ಭಾರತದಲ್ಲಿ ಎರಡು ತೆರಿಗೆ ವ್ಯವಸ್ಥೆಗಳ ಅಡಿಯಲ್ಲಿ ಆದಾಯ ತೆರಿಗೆಯನ್ನು ಪಾವತಿಸಲಾಗುತ್ತದೆ. ಒಂದು ಹಳೆಯ ತೆರಿಗೆ ಪದ್ಧತಿ ಮತ್ತು ಇನ್ನೊಂದರ ಹೆಸರು ಹೊಸ ತೆರಿಗೆ ಪದ್ಧತಿ. ಈ ಎರಡೂ ಸಿಸ್ಟಮ್ ನಲ್ಲಿ ವಿವಿಧ ಸ್ಲ್ಯಾಬ್‌ಗಳ ಪ್ರಕಾರ ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ. 2022-23 ರ ಆರ್ಥಿಕ ವರ್ಷದ ಬಗ್ಗೆ ಹೇಳುವುದಾದರೆ, ಈ ಹಣಕಾಸು ವರ್ಷದಲ್ಲಿ, ವಿವಿಧ ಆದಾಯಗಳ ಮೇಲೆ 5% ರಿಂದ 30% ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ. ಮತ್ತೊಂದೆಡೆ, 10 ಪ್ರತಿಶತ ತೆರಿಗೆಯ ಅಂಶವೂ ಇದೆ.
ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!
ಆದಾಯ ತೆರಿಗೆ ಸ್ಲ್ಯಾಬ್ :
ವ್ಯಕ್ತಿಯು ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆಯನ್ನು ಪಾವತಿಸುವುದಾದರೆ ಆತನ ಆದಾಯವು ವಾರ್ಷಿಕವಾಗಿ 5 ಲಕ್ಷದಿಂದ 7.5 ಲಕ್ಷದವರೆಗೆ ಇದ್ದರೆ, ಆಗ 10% ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ಹಳೆಯ ತೆರಿಗೆ ಪದ್ಧತಿಯಲ್ಲಿ ಈ ಆಯ್ಕೆ ಇರುವುದಿಲ್ಲ ಎನ್ನುವುದು ನೆನಪಿರಲಿ. ವಾಸ್ತವವಾಗಿ, ಹಳೆಯ ತೆರಿಗೆ ಪದ್ಧತಿಯಲ್ಲಿ 10% ತೆರಿಗೆಯ ನಿಬಂಧನೆ ಇಲ್ಲ.
ತೆರಿಗೆ ಸ್ಲ್ಯಾಬ್ :
ವ್ಯಕ್ತಿಯು ಹಳೆಯ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆಯನ್ನು ಪಾವತಿಸುವುದಾದರೆ, ಅದರಲ್ಲಿ 10 ಪ್ರತಿಶತ ತೆರಿಗೆ ಸ್ಲ್ಯಾಬ್ ಇರುವುದಿಲ್ಲ. 2022-23ರ ಹಣಕಾಸು ವರ್ಷದಲ್ಲಿ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯು ತೆರಿಗೆಯನ್ನು ಸಲ್ಲಿಸಿದರೆ, 2.5 ಲಕ್ಷದಿಂದ 5 ಲಕ್ಷದವರೆಗಿನ ವಾರ್ಷಿಕ ಆದಾಯದ ಮೇಲೆ 5% ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 5 ಲಕ್ಷದಿಂದ 10 ಲಕ್ಷದವರೆಗಿನ ಆದಾಯದ ಮೇಲೆ 20% ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : Economic Recession: ಭಾರತಕ್ಕೂ ತಟ್ಟಲಿದೆ ಆರ್ಥಿಕ ಹಿಜರಿತದ ಬಿಸಿ, ಕೇಂದ್ರ ಸಚಿವರ ಬೆಚ್ಚಿಬೀಳಿಸುವ ಹೇಳಿಕೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.