2.5 ರಿಂದ 3 ಲಕ್ಷದವರೆಗೆ ಇರಲಿದೆ ಆದಾಯ ತೆರಿಗೆ ವಿನಾಯಿತಿ.! ಇಲ್ಲಿದೆ ಪಕ್ಕಾ ಮಾಹಿತಿ .!

Income Tax Slab: ಈ ಬಾರಿ ಸರ್ಕಾರವು ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. 

Written by - Ranjitha R K | Last Updated : Jan 16, 2023, 04:25 PM IST
  • ತೆರಿಗೆದಾರರಿಗೆ ಭರ್ಜರಿ ಸುದ್ದಿ ಇದೆ
  • ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಲಿದೆ ಸರ್ಕಾರ
  • 3 ಲಕ್ಷದವರೆಗಿನ ಆದಾಯದ ಮೇಲೆ ಇರಬಹುದು ತೆರಿಗೆ ವಿನಾಯಿತಿ
2.5 ರಿಂದ 3 ಲಕ್ಷದವರೆಗೆ ಇರಲಿದೆ ಆದಾಯ ತೆರಿಗೆ ವಿನಾಯಿತಿ.! ಇಲ್ಲಿದೆ ಪಕ್ಕಾ ಮಾಹಿತಿ .!  title=

Income Tax Slab : ನೀವು ತೆರಿಗೆದಾರರಾಗಿದ್ದರೆ ನಿಮಗೊಂದು ಒಳ್ಳೆಯ ಸುದ್ದಿ ಇದೆ. ಬಜೆಟ್ ಮಂಡನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ.  ಈ ಮಧ್ಯೆ, ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಸರ್ಕಾರವು ತೆರಿಗೆ  ವಿನಾಯಿತಿ ಮಿತಿಯನ್ನು ಹೆಚ್ಚಿಸಬಹುದು ಎನ್ನಲಾಗಿದೆ. ಪ್ರಸ್ತುತ, 2.5 ಲಕ್ಷದವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಆದರೆ ಅದನ್ನು 3 ಲಕ್ಷಕ್ಕೆ ಹೆಚ್ಚಿಸಬಹುದು ಎನ್ನಲಾಗಿದೆ. ಹೀಗಾದರೆ ಮಧ್ಯಮ ವರ್ಗದ ಜನರಿಗೆ ಪರಿಹಾರ ಸಿಗಲಿದೆ. 

3 ಲಕ್ಷದವರೆಗಿನ ಆದಾಯದ ಮೇಲೆ ಇರಬಹುದು ತೆರಿಗೆ ವಿನಾಯಿತಿ : 
ಈ ಬಾರಿ ಸರ್ಕಾರವು ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಈ ಬಾರಿ  ಮೊದಲಿಗಿಂತ ಕಡಿಮೆ ತೆರಿಗೆ ಪಾವತಿಸುವಂತಾಗುತ್ತದೆ. 

ಇದನ್ನೂ ಓದಿ :  ಮಾರ್ಚ್ ಅಂತ್ಯದವರೆಗೆ ಈ ಕೆಲಸ ಮಾಡದಿದ್ದರೆ ನಿಷ್ಕ್ರಿಯಗೊಳ್ಳಲಿದೆ ನಿಮ್ಮ ಪ್ಯಾನ್ ಕಾರ್ಡ್

9 ವರ್ಷಗಳ ಹಿಂದೆ ಮಿತಿಯನ್ನು ಹೆಚ್ಚಿಸಲಾಗಿತ್ತು: 
ಆದಾಯ ತೆರಿಗೆ ಮೇಲಿನ ವಿನಾಯಿತಿಯನ್ನು ಕೊನೆಯ ಬಾರಿಗೆ 2014 ರಲ್ಲಿ ಹೆಚ್ಚಿಸಲಾಗಿತ್ತು. ಆಗ ಸರ್ಕಾರ ಈ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸಿತ್ತು. ಕಳೆದ 9 ವರ್ಷಗಳಿಂದ ಈ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿರುವುದರಿಂದ ಈ ಬಾರಿ ಸರ್ಕಾರ ಹಲವು ದೊಡ್ಡ ಘೋಷಣೆಗಳನ್ನು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. 

ಹಿರಿಯ ನಾಗರಿಕರಿಗೆ 3 ಲಕ್ಷ ರೂ. ಮಿತಿ : 
 2.5 ಲಕ್ಷ ರೂ.ವರೆಗಿನ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗಿಲ್ಲ. ಈ ಬಜೆಟ್‌ನಲ್ಲಿ ಸರ್ಕಾರವು  ಈ ಮಿತಿಯನ್ನು 50,000 ರೂ.ಗಳಷ್ಟು ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ನಾವು ಹಿರಿಯ ನಾಗರಿಕರ  ಆದಾಯ ತೆರಿಗೆ ಮಿತಿಯನ್ನು 3 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. 

ಇದನ್ನೂ ಓದಿ :   Car Sales: ಡಿಸೆಂಬರ್‌ನಲ್ಲಿ ಅತಿಹೆಚ್ಚು ಮಾರಾಟವಾದ ಕಾರು ಇದೇ ನೋಡಿ

ಈಗ ಆದಾಯ ತೆರಿಗೆ ಸ್ಲ್ಯಾಬ್ :
 2.5 ಲಕ್ಷ ದವರೆಗಿನ ಆದಾಯ - ತೆರಿಗೆ ಮುಕ್ತ
 2.5 ರಿಂದ 5 ಲಕ್ಷ ವಾರ್ಷಿಕ ಆದಾಯಕ್ಕೆ  - 5% ತೆರಿಗೆ
 5 ರಿಂದ 10 ಲಕ್ಷ ವಾರ್ಷಿಕ ಆದಾಯಕ್ಕೆ  - 20% ತೆರಿಗೆ
10 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯಕ್ಕೆ - 30% ತೆರಿಗೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News