ನವದೆಹಲಿ : Indian Railways: ರೈಲ್ವೆ ಈಗ ತನ್ನ ಪ್ರಯಾಣಿಕರಿಗೆ ಮತ್ತೊಂದು ಸೌಲಭ್ಯವನ್ನು ನೀಡಿದೆ. ನಿಮ್ಮ ಬಳಿ ಕನ್ಫಾರ್ಮ್ ಟಿಕೆಟ್ (Confirm ticket) ಇದ್ದು,  ಆ ಟಿಕೆಟ್ ನಲ್ಲಿ ನಿಮಗೆ ಪ್ರಯಾಣಿಸುವುದು ಸಾಧ್ಯವಾಗದೆ ಹೋದರೆ,  ಆ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಬೇಕಿಲ್ಲ. ಈ ಟಿಕೆಟ್ ಅನ್ನು ನಿಮ್ಮ ಕುಟುಂಬದ ಯಾವುದೇ ಸದಸ್ಯರಿಗೆ ಅಥವಾ ಇನ್ನಾವುದೇ ವ್ಯಕ್ತಿಗೆ ವರ್ಗಾಯಿಸಬಹುದು.


COMMERCIAL BREAK
SCROLL TO CONTINUE READING

ರೈಲ್ವೆ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ : 
ರೈಲು ಟಿಕೆಟ್ (Railway ticket) ಕಾಯ್ದಿರಿಸಿದ ನಂತರ, ಪ್ರಯಾಣಿಸಲು ಸಾಧ್ಯವಾಗದೇ ಹೋದಾಗ ಅದನ್ನು ಕ್ಯಾನ್ಸಲ್ ಮಾಡಬೇಕಾಗುತ್ತದೆ. ಆದರೆ ಈಗ ಹೀಗೆ ಮಾಡಬೇಕಿಲ್ಲ. ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ, ಹೊಸ ಸೌಲಭ್ಯವನ್ನು ನೀಡಿದೆ. ಈ ಸೌಲಭ್ಯವು ಬಹಳ ಸಮಯದಿಂದ ಚಾಲ್ತಿಯಲ್ಲಿದೆ. ಆದರೆ, ಇನ್ನು ಹೆಚ್ಚಿನ ಪ್ರಯಾಣಿಕರಿಗೆ ಈ ಸೌಲಭ್ಯದ ಬಗ್ಗೆ ತಿಳಿದಿಲ್ಲ. ಹಾಗಾಗಿ, ರೈಲ್ವೆಯ( Indian Railway)  ಈ ಸೌಲಭ್ಯದ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ.  


ಇದನ್ನೂ ಓದಿ  :  Credit Card ಬಳಸಿ ಅಪ್ಪಿ-ತಪ್ಪಿಯೂ ಈ ಪೇಮೆಂಟ್ಸ್ ಮಾಡಬೇಡಿ, ಆರ್‌ಬಿಐ ಸೂಚನೆ


ಟಿಕೆಟ್ ಬೇರೆಯವರಿಗೆ ವರ್ಗಾಯಿಸಬಹುದು : 
ಪ್ರಯಾಣಿಕನು ತನ್ನ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿ ಅಂದರೆ ತಂದೆ, ತಾಯಿ, ಸಹೋದರ, ಸಹೋದರಿ, ಮಗ, ಮಗಳು, ಗಂಡ ಮತ್ತು ಹೆಂಡತಿಯ ಹೆಸರಿಗೆ  confirmed ಟಿಕೆಟ್ ಅನ್ನು ವರ್ಗಾಯಿಸಬಹುದು. ಇದಕ್ಕಾಗಿ ಪ್ರಯಾಣಿಕರು (Passengers) ರೈಲು ಹೊರಡುವ 24 ಗಂಟೆಗಳ ಮೊದಲು ರಿಕ್ವೆಸ್ಟ್  ನೀಡಬೇಕಾಗುತ್ತದೆ. ಒಂದು ಸಲ ರಿಕ್ವೆಸ್ಟ್ ನೀಡಿದ ನಂತರ, ಟಿಕೆಟ್‌ನಲ್ಲಿ ಪ್ರಯಾಣಿಕರ ಹೆಸರನ್ನು ತೆಗೆದುಹಾಕಲಾಗುತ್ತದೆ. ಆ ಸ್ಥಳದಲ್ಲಿ ಟಿಕೆಟ್ ವರ್ಗಾವಣೆಯಾಗಬೇಕಾದ ಸದಸ್ಯರ ಹೆಸರನ್ನು ಹಾಕಲಾಗುತ್ತದೆ.


 24 ಗಂಟೆಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು :
ಪ್ರಯಾಣಿಕನು ಸರ್ಕಾರಿ ನೌಕರನಾಗಿದ್ದು, ತನ್ನ ಕರ್ತವ್ಯಕ್ಕೆ ಹೋಗುತ್ತಿದ್ದರೆ, ರೈಲು ಹೊರಡುವ 24 ಗಂಟೆಗಳ ಮೊದಲು ರಿಕ್ವೆಸ್ಟ್ ನೀಡಬಹುದು.  ಮದುವೆಗೆ ಹೋಗುವವರಿಗೆ ಈ ಸಮಸ್ಯೆ ಎದುರಾದರೆ,   ವಿವಾಹದ ದಾಖಲೆಗಳನ್ನು ಒದಗಿಸುವುದರೊಂದಿಗೆ  48 ಗಂಟೆಗಳ ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ.  ಆನ್‌ಲೈನ್‌ನಲ್ಲಿಯೂ (Online) ಈ ಸೌಲಭ್ಯವನ್ನು ಪಡೆಯಬಹುದು. ಟಿಕೆಟ್ ವರ್ಗಾವಣೆಯನ್ನು ಒಮ್ಮೆ ಮಾತ್ರ ಮಾಡಬಹುದಾಗಿದೆ. ಅಂದರೆ, ಪ್ರಯಾಣಿಕನು ತನ್ನ ಟಿಕೆಟ್ ಅನ್ನು ಇನ್ನೊಬ್ಬ ವರ್ಗಾಯಿಸಿದ್ದರೆ, ಮತ್ತೆ ಅದನ್ನು  ಬದಲಾಯಿಸಲು ಸಾಧ್ಯವಿಲ್ಲ.


ಇದನ್ನೂ ಓದಿ  :  PSU Insurance Companies Privatization: ಇನ್ಮುಂದೆ ಸರ್ಕಾರಿ ವಿಮಾ ಕಂಪನಿಗಳೂ ಕೂಡ ಖಾಸಗಿಯಾಗಲಿವೆ! ನಿಯಮ ಬದಲಾವಣೆಗೆ ಕೇಂದ್ರ ಸರ್ಕಾರದ ಸಿದ್ಧತೆ


ನಿಮ್ಮ ಟಿಕೆಟ್ ಅನ್ನು ಬೇರೆಯವರಿಗೆ ವರ್ಗಾಯಿಸುವುದು ಹೇಗೆ ? 
1. ಟಿಕೆಟ್‌ ಪ್ರಿಂಟ್ ಔಟ್ ತೆಗೆದುಕೊಳ್ಳಿ.
2. ಹತ್ತಿರದ ರೈಲ್ವೆ ನಿಲ್ದಾಣದ ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಿ.
3. ಟಿಕೆಟ್ ಯಾರ ಹೆಸರಿನಲ್ಲಿ ವರ್ಗಾಯಿಸಬೇಕು ಅವರ ಐಡಿ ಪ್ರೂಫ್ ಆಧಾರ್ ಅಥವಾ ವೋಟು ಐಡಿಯ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. 
4. ಕೌಂಟರ್ ಮೂಲಕ ಟಿಕೆಟ್ ವರ್ಗಾವಣೆಗೆ ಅರ್ಜಿ ಸಲ್ಲಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.