Credit Card ಬಳಸಿ ಅಪ್ಪಿ-ತಪ್ಪಿಯೂ ಈ ಪೇಮೆಂಟ್ಸ್ ಮಾಡಬೇಡಿ, ಆರ್‌ಬಿಐ ಸೂಚನೆ

Credit Card Update: ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಆದರೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಕೆಲವು ಪಾವತಿಗಳನ್ನು ಅಂದರೆ ಪೇಮೆಂಟ್ಸ್ ಮಾಡಬಾರದು ಎಂಬುದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಕೆಲವು ಪಾವತಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧಿಸಿದೆ.

Written by - Yashaswini V | Last Updated : Jul 5, 2021, 01:20 PM IST
  • ದಿನದಿಂದ ದಿನಕ್ಕೆ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ
  • ಜನರು ಕಷ್ಟದ ಸಮಯದಲ್ಲಿ ಬೇರೆಯವರಿಂದ ಹಣ ಪಡೆಯುವ ಬದಲು ಸುಲಭವಾಗಿ ಕ್ರೆಡಿಟ್ ಕಾರ್ಡ್‌ಗಳಲ್ಲಿ ಸಾಲ ಪಡೆಯುತ್ತಾರೆ
  • ಅದಾಗ್ಯೂ, ಕ್ರೆಡಿಟ್ ಕಾರ್ಡ್‌ಗಳಿಂದ ಕೆಲವು ಪಾವತಿಗಳನ್ನು ಆರ್‌ಬಿಐ ನಿಷೇಧಿಸಿದೆ
Credit Card ಬಳಸಿ ಅಪ್ಪಿ-ತಪ್ಪಿಯೂ ಈ ಪೇಮೆಂಟ್ಸ್ ಮಾಡಬೇಡಿ, ಆರ್‌ಬಿಐ ಸೂಚನೆ title=
ಕ್ರೆಡಿಟ್ ಕಾರ್ಡ್‌ಗಳ ಮೂಲಕ ಈ ಪಾವತಿಗಳು ನಿಷಿದ್ಧ!

ನವದೆಹಲಿ: Prohibited Transactions On Credit Card- ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಡಿಜಿಟಲ್ ಪಾವತಿಯನ್ನು (Digital Payment) ಉತ್ತೇಜಿಸಲಾಗುತ್ತಿದೆ. ಇದರೊಂದಿಗೆ ಬಳಕೆದಾರರಲ್ಲಿ ಕ್ರೆಡಿಟ್ ಕಾರ್ಡ್‌ನ ಪ್ರವೃತ್ತಿ ಕೂಡ ನಿರಂತರವಾಗಿ ಹೆಚ್ಚುತ್ತಿದೆ. ಯಾವುದೇ ಶಾಪಿಂಗ್ ಆಗಲಿ, ಬಿಲ್ ಪಾವತಿಗಳಾಗಲಿ, ಮೊಬೈಲ್ ರೀಚಾರ್ಜ್ ಪ್ರತಿಯೊಂದಕ್ಕೂ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅವಲಂಬಿಸಲಾಗುತ್ತಿದೆ. ಆದರೆ ಹಲವು ಬಾರಿ ಖಾತೆಯಲ್ಲಿ ನಿರ್ದಿಷ್ಟ ಮೊತ್ತ ಇಲ್ಲದಿರುವಾಗ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಅನುಕೂಲಕರವಾಗಿದೆ.  ಅನೇಕ ಬಾರಿ ಜನರು ಕಷ್ಟದ ಸಮಯದಲ್ಲಿ ಬೇರೆಯವರಿಂದ ಹಣ ಪಡೆಯುವ ಬದಲು ಸುಲಭವಾಗಿ ಕ್ರೆಡಿಟ್ ಕಾರ್ಡ್‌ಗಳಲ್ಲಿ ಸಾಲ ಪಡೆಯುತ್ತಾರೆ. ಆದರೆ ಕ್ರೆಡಿಟ್ ಕಾರ್ಡ್ ಬಳಸುವಾಗ ಅದರ ಬಗ್ಗೆ ಸೂಕ್ತ ಮಾಹಿತಿ ಹೊಂದಿರುವುದು ಬಹಳ ಮುಖ್ಯ. ಇಲ್ಲದಿದ್ದರೆ ಗ್ರಾಹಕರು ಭಾರೀ ಸಂಕಷ್ಟಕ್ಕೆ ಸಿಲುಕಬಹುದು.

ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಪ್ರಮುಖ ನಿಯಮಗಳು:
ಬಹುತೇಕ ಜನರು ಕ್ರೆಡಿಟ್ ಕಾರ್ಡ್‌ಗಳನ್ನು (Credit Card) ಬಳಸುತ್ತಾರೆ, ಆದರೆ ಅವರಲ್ಲಿ ಕೆಲವೇ ಕೆಲವರಿಗೆ ಮಾತ್ರ ಇದಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ತಿಳಿದಿರುತ್ತವೆ. ಕೆಲವು ಪಾವತಿಗಳಿಗೆ ಕ್ರೆಡಿಟ್ ಕಾರ್ಡ್  (Prohibited Transactions On Credit Card) ಅನ್ನು ಬಳಸುವಂತಿಲ್ಲ. 

ಇದನ್ನೂ ಓದಿ- Credit Card Payment ಬಾಕಿ ಇದೆಯೇ? ಪಾವತಿಸಲು ಖಾತೆಯಲ್ಲಿ ಹಣವಿಲ್ಲವೇ? ಇಲ್ಲಿದೆ ಸುಲಭ ಮಾರ್ಗ

ಕ್ರೆಡಿಟ್ ಕಾರ್ಡ್ ಮೂಲಕ ಇವುಗಳ ಪಾವತಿ ನಿಷೇಧ:
ವಾಸ್ತವವಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)  ಕ್ರೆಡಿಟ್ ಕಾರ್ಡ್ (Credit Card Payment)  ಮೂಲಕ ಕೆಲವು ಪಾವತಿಗಳನ್ನು ನಿಷೇಧಿಸಿದೆ. ಆರ್‌ಬಿಐ ನಿಯಮದ ಪ್ರಕಾರ ಈ ವ್ಯವಹಾರಗಳಿಗೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡುವಂತಿಲ್ಲ...
1-ವಿದೇಶೀ ವಿನಿಮಯ ವ್ಯಾಪಾರ, 
2-ಲಾಟರಿ ಟಿಕೆಟ್‌ಗಳ ಖರೀದಿ, 
3-ಕಾಲ್ ಬ್ಯಾಕ್ ಸೇವೆಗಳು, 
4-ಬೆಟ್ಟಿಂಗ್,
5-ಕುದುರೆ ರೇಸಿಂಗ್‌ನಲ್ಲಿ ಹಣವನ್ನು ಹಾಕುವುದು, 
6-ಜೂಜಾಟಕ್ಕೆ ಸಂಬಂಧಿಸಿದ ವಹಿವಾಟು, 
7-ನಿಷೇಧಿತ ನಿಯತಕಾಲಿಕೆಗಳ ಖರೀದಿ.

ಗ್ರಾಹಕರಿಗೆ ಇಮೇಲ್ ಮೂಲಕ ಬ್ಯಾಂಕ್ ಸಂದೇಶ:
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್‌ಬಿಐ ತನ್ನ ಗ್ರಾಹಕರಿಗೆ ಇಮೇಲ್ ಕಳುಹಿಸುವ ಮೂಲಕ ಆರ್‌ಬಿಐನ  (RBI) ಈ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದೆ. ಈಗಾಗಲೇ ತಿಳಿಸಿರುವ ವ್ಯವಹಾರಗಳು ಮತ್ತು ಸೇವೆಗಳನ್ನು ಪ್ರಮುಖವಾಗಿ ಜಾಹೀರಾತು ನೀಡುವ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಈ ವ್ಯವಹಾರಗಳಿಗೆ ಹಣ ಪಾವತಿಸುವಂತೆ ಕೇಳುವ ಅನೇಕ ವಿದೇಶಿ ವಿನಿಮಯದ  ವ್ಯಾಪಾರಿಗಳು, ಕ್ಯಾಸಿನೊಗಳು, ಹೋಟೆಲ್‌ಗಳು ಮತ್ತು ವೆಬ್‌ಸೈಟ್‌ಗಳಿವೆ. ಆದರೆ ಈ ವ್ಯವಹಾರಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ ಎಂದು ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ.   

ಇದನ್ನೂ ಓದಿ- Debit-Credit ಕಾರ್ಡ್ ಇಲ್ಲದೆ ಎಟಿಎಂನಿಂದ ಹಣ ಹಿಂಪಡೆಯುವುದು ಹೇಗೆ?

ನಿಯಮ ಏನು ಎಂದು ತಿಳಿದುಕೊಳ್ಳಿ...
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 (Foreign Exchange Management Act, 1999) ಹಾಗೂ ಅನ್ವಯವಾಗುವ ಇತರ ನಿಯಮಗಳಡಿ ಈಗಾಗಲೇ ತಿಳಿಸಿರುವ ವ್ಯವಹಾರಗಳಿಗೆ ಕ್ರೆಡಿಟ್ ಕಾರ್ಡ್‌ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಈ ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲಿ ಕಾರ್ಡ್‌ ಹೋಲ್ಡರ್ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ಈ ನಿಯಮ ಉಲ್ಲಂಘಿಸಿದ ಪಕ್ಷದಲ್ಲಿ ಕಾರ್ಡ್‌ಹೋಲ್ಡರ್ ಕಾರ್ಡ್ಅನ್ನು ಬ್ಯಾಂಕ್ ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿಯಮಗಳಲ್ಲಿ ಸ್ಪಷ್ಟಪಡಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News