PSU Insurance Companies Privatization: ಇನ್ಮುಂದೆ ಸರ್ಕಾರಿ ವಿಮಾ ಕಂಪನಿಗಳೂ ಕೂಡ ಖಾಸಗಿಯಾಗಲಿವೆ! ನಿಯಮ ಬದಲಾವಣೆಗೆ ಕೇಂದ್ರ ಸರ್ಕಾರದ ಸಿದ್ಧತೆ

PSU Insurance Companies Privatization - ಸಾರ್ವಜನಿಕ ವಿಮಾ ಕಂಪನಿಗಳ ಖಾಸಗೀಕರಣಕ್ಕಾಗಿ (PSU Insurance Companies Privatization) ಸಾಮಾನ್ಯ ವಿಮಾ ವ್ಯವಹಾರ ರಾಷ್ಟ್ರೀಕರಣ ಕಾಯ್ದೆ(GIBNA)ಗೆ ತಿದ್ದುಪಡಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ  ಸಂಬಂಧ ಮಸೂದೆಯನ್ನು (Amendment Bill) ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ (Monsoon Session) ತರುವ ಸಾಧ್ಯತೆ ಇದೆ.

Written by - Nitin Tabib | Last Updated : Jul 4, 2021, 09:49 PM IST
  • ಸಾರ್ವಜನಿಕ ವಲಯದ ವಿಮಾ ಕಂಪನಿಗಳ ಖಾಸಗೀಕರಣಕ್ಕೆ ಮೋದಿ ಸರ್ಕಾರದ ಸಿದ್ಧತೆ.
  • ಈ ಕುರಿತಾದ ಕಾನೂನಿಗೆ ಶೀಘ್ರದಲ್ಲಿಯೇ ತಿದ್ದುಪಡಿ ತರಲು ಸರ್ಕಾರದ ಸಿದ್ಧತೆ .
  • ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಈ ತಿದ್ದುಪಡಿ ಮಸೂದೆ ಮಂಡನೆಯಾಗುವ ಸಾಧ್ಯತೆ.
PSU Insurance Companies Privatization: ಇನ್ಮುಂದೆ ಸರ್ಕಾರಿ ವಿಮಾ ಕಂಪನಿಗಳೂ ಕೂಡ ಖಾಸಗಿಯಾಗಲಿವೆ! ನಿಯಮ ಬದಲಾವಣೆಗೆ ಕೇಂದ್ರ ಸರ್ಕಾರದ ಸಿದ್ಧತೆ title=
PSU Insurance Companies Privatization (File Photo)

ನವದೆಹಲಿ: PSU Insurance Companies Privatization - ಸಾರ್ವಜನಿಕ ವಲಯದ ಬ್ಯಾಂಕುಗಳು ಸೇರಿದಂತೆ ಅನೇಕ ಸಾರ್ವಜನಿಕ ವಲಯದ ಕಂಪನಿಗಳ (PSU) ಖಾಸಗೀಕರಣದ ಕುರಿತು ಕ್ರಮ ಕೈಗೊಂಡ ನಂತರ, ಇದೀಗ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರವು (PM Narendra Modi Government) ಸಾಮಾನ್ಯ ವಿಮಾ ಕಂಪನಿಗಳ ಖಾಸಗೀಕರಣಕ್ಕೆ (Insurance Companies Privatization) ಯೋಜಿಸುತ್ತಿದೆ. ಇದಕ್ಕಾಗಿ ಕೇಂದ್ರವು ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ಕಾಯ್ದೆ (GIBNA)ಗೆ ತಿದ್ದುಪಡಿ  ತರುವ ಸಿದ್ಧತೆ ನಡೆಸಿದೆ. ಈ ಕುರಿತಾದ  ಮಸೂದೆಯನ್ನು ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ-RSS Chief On Lynching: ಲಿಂಚಿಂಗ್ ಮಾಡುವವರು ಹಿಂದುತ್ವದ ವಿರೋಧಿಗಳು, ರಾಜಕೀಯದಿಂದ ಐಕ್ಯತೆಗೆ ಧಕ್ಕೆ: RSS ಮುಖ್ಯಸ್ಥ ಮೋಹನ್ ಭಾಗವತ್

ಕಾನೂನಿನ ಅಡಿ ಶೇರುಗಳ ವಿನಿಮಯ
ಸಂಸತ್ತಿನ ಮಳೆಗಾಲದ ಜುಲೈ 19 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ಕಾಯ್ದೆ 1972 ರಲ್ಲಿ ಜಾರಿಗೆ ಬಂದಿತ್ತು. ಇದರ ಅಡಿಯಲ್ಲಿ, ಭಾರತೀಯ ವಿಮಾ ಕಂಪನಿಗಳ ಷೇರುಗಳು ಮತ್ತು ಅಸ್ತಿತ್ವದಲ್ಲಿರುವ ಇತರ ವಿಮಾ ಕಂಪನಿಗಳ ಷೇರುಗಳ ಸ್ವಾಧೀನಪಡಿಸಿಕೊಳ್ಳುವಿಕೆ ಹಾಗೂ ವರ್ಗಾವಣೆ (Share Transfer) ನಡೆಯುವ ಸಾಧ್ಯತೆ ಇದೆ. ಇದರಿಂದಾಗಿ ಸಾಮಾನ್ಯ ವಿಮಾ ವ್ಯವಹಾರದ ಅಭಿವೃದ್ಧಿಯ ಮೂಲಕ ದೇಶದ ಆರ್ಥಿಕತೆಯ (Indian Economy) ಅಗತ್ಯಗಳನ್ನು ಉತ್ತಮವಾಗಿ ಪೂರೈಸಬಹುದು. The General Insurance Business (Nationalisation) Act, 1972 ಗೆ ತಿದ್ದುಪಡಿ ತರುವ ಸಿದ್ಧತೆಗಳು ಭರದಿಂದ ಸಾಗಿವೆ ಎನ್ನಲಾಗಿದೆ. ಸಾಮಾನ್ಯ ವಿಮಾ ಕಂಪನಿಗಳ ಖಾಸಗೀಕರಣಕ್ಕೆ ಸಹಾಯ ಮಾಡಲು ಮುಂಬರುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಅದನ್ನು ಮಂಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ-Provident Fund - ನೌಕರಿ ಬದಲಾಯಿಸಿದಾಗ ತಕ್ಷಣ PF ಹಣ ಹಿಂಪಡೆಯಬೇಡಿ, ದೊಡ್ಡ ಹಾನಿ ಸಂಭವಿಸುತ್ತದೆ

1.75 ಲಕ್ಷ ಕೋಟಿ ರೂ. ಬಂಡವಾಳ ಸಂಗ್ರಹಣೆಯ ಗುರಿ
2021-22ರ ಹಣಕಾಸು ವರ್ಷಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman)ಮಂಡಿಸಿದ್ದ ಕೇಂದ್ರ ಬಜೆಟ್‌ನಲ್ಲಿ, ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣ ಘೋಷಿಸಿದ್ದರು.  ಹಣಕಾಸು ವಲಯದ ಹೂಡಿಕೆ, ಹೂಡಿಕೆಯ ಕಾರ್ಯತಂತ್ರದ ಭಾಗವಾಗಿ, ಜೀವ ವಿಮಾ ನಿಗಮದ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (LIC Initial Public Offer) ತರಲು ಮತ್ತು ಐಡಿಬಿಐ ಬ್ಯಾಂಕಿನಲ್ಲಿ (IDBI Bank) ಉಳಿದಿರುವ ಪಾಲನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. 2021-22ರ ಆರ್ಥಿಕ ವರ್ಷದಲ್ಲಿ ಸಾರ್ವಜನಿಕ ವಲಯದ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಷೇರುಗಳ ಮಾರಾಟದಿಂದ 1.75 ಲಕ್ಷ ಕೋಟಿ ರೂ. ಬಂಡವಾಳ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಇದನ್ನೂ ಓದಿ-ಮಾಡಿದ್ದುಣ್ಣೋ ಮಹರಾಯ! ಪಾಕ್ ಬಿಟ್ಟರೆ ಚೀನಾ ಬಳಿಯಿಂದ ಯಾರು ಶಸ್ತ್ರಾಸ್ತ್ರ ಖರೀದಿಸುತ್ತಿಲ್ಲವಂತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News