ನವದೆಹಲಿ :  ಇನ್ನು ಮುಂದೆ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದು ದುಬಾರಿಯಾಗಲಿದೆ.  Zomato ಮತ್ತು Swiggy ನಂತಹ ಆನ್‌ಲೈನ್ ಅಪ್ಲಿಕೇಶನ್ ಆಧಾರಿತ ಆಹಾರ ವಿತರಣಾ ವೇದಿಕೆಗಳು ಈಗ 5 ಪ್ರತಿಶತ GST ಪಾವತಿಸಬೇಕಾಗುತ್ತದೆ. ಆನ್‌ಲೈನ್ ಆಹಾರ ದರಗಳು ಜನವರಿ 1, 2022 ರಿಂದ ತುಟ್ಟಿಯಾಗಲಿವೆ. 


COMMERCIAL BREAK
SCROLL TO CONTINUE READING

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ : 
ಆಹಾರ ವಿತರಣಾ ಸೇವೆಗಳನ್ನು ಜಿಎಸ್‌ಟಿ (GST)  ವ್ಯಾಪ್ತಿಗೆ ತರಲು ಬಹಳ ಸಮಯದಿಂದ ಬೇಡಿಕೆ ಇತ್ತು. ಈ ವರ್ಷದ ಸೆಪ್ಟೆಂಬರ್ 17 ರಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಬೇಡಿಕೆಯನ್ನು ಅಂಗೀಕರಿಸಲಾಯಿತು. ಆಹಾರ ವಿತರಿಸುವ ಕಂಪನಿಗಳಿಗೆ ಸರ್ಕಾರ ಶೇ.5ರಷ್ಟು ಜಿಎಸ್‌ಟಿ ವಿಧಿಸಿದೆ. ಇಲ್ಲಿಯವರೆಗೆ, ರೆಸ್ಟೋರೆಂಟ್‌ಗಳು ಈ ತೆರಿಗೆಯನ್ನು ಪಾವತಿಸುತ್ತಿಟ್ಟು. ಆದರೆ ಹೊಸ ನಿಯಮ ಜಾರಿಯಿಂದ, ಆಹಾರ ವಿತರಣಾ ಕಂಪನಿಗಳು (Food delivery company) ಈ ತೆರಿಗೆಯನ್ನು ಪಾವತಿಸಲಿವೆ. ಈ ಹೊಸ ವ್ಯವಸ್ಥೆಯನ್ನು 2022 ರ ಜನವರಿ 1 ರಿಂದ ದೇಶಾದ್ಯಂತ ಪ್ರಾರಂಭಿಸಲಾಗುವುದು.


ಇದನ್ನೂ ಓದಿ:  UIDAI Update: ಕಳೆದುಹೋದ UID ಅಥವಾ EID ಸಂಖ್ಯೆಯನ್ನು ಈ ರೀತಿ ಮರಳಿ ಪಡೆಯಬಹುದು


ಗ್ರಾಹಕರಿಂದ ಹಣ ವಸೂಲಿ ಮಾಡಲಿವೆ ಕಂಪನಿಗಳು :
 ಈ ತೆರಿಗೆಯನ್ನು ಗ್ರಾಹಕರಿಂದ ಅಲ್ಲ, ಅಪ್ಲಿಕೇಶನ್ ಕಂಪನಿಗಳಿಂದ ವಸೂಲು ಮಾಡುವುದಾಗಿ ಸರ್ಕಾರ ಮೊದಲೇ ಹೇಳಿದೆ. ಆದರೆ ಸರ್ಕಾರದ ಈ ನಿರ್ಧಾರದಿಂದ ಕಂಪನಿಗೆ ಹೊರೆಯಾದರೆ ಆ್ಯಪ್ ಕಂಪನಿಗಳು ಯಾವುದಾದರೂ ರೀತಿಯಲ್ಲಿ ಅದನ್ನು ಗ್ರಾಹಕರಿಂದ ವಸೂಲಿ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ (Online food order) ಮಾಡುವವರಿಗೆ ಹೊಸ ವರ್ಷ ದುಬಾರಿಯಾಗಿ ಪರಿಣಮಿಸಲಿದೆ. 


 ಹೇಗೆ ಕೆಲಸ ಮಾಡುತ್ತದೆ ಈ ಹೊಸ ನಿಯಮ ?
ಜಿಎಸ್‌ಟಿಯ ಹೊಸ ನಿಯಮಗಳ ನಂತರ, ಆಹಾರ ಸಂಗ್ರಾಹಕ ಅಪ್ಲಿಕೇಶನ್‌ಗಳು, ಸೇವೆಯನ್ನು ಒದಗಿಸುತ್ತಿರುವ ರೆಸ್ಟೋರೆಂಟ್‌ಗಳಿಂದ ತೆರಿಗೆಯನ್ನು ಸಂಗ್ರಹಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.  ಹಿಂದೆ ರೆಸ್ಟೋರೆಂಟ್‌ಗಳು ಜಿಎಸ್‌ಟಿ ಸಂಗ್ರಹಿಸುತ್ತಿದ್ದವು ಆದರೆ ಅದನ್ನು ಸರ್ಕಾರಕ್ಕೆ ಠೇವಣಿ ಮಾಡುವಲ್ಲಿ ಅಕ್ರಮ ನಡೆದಿತ್ತು. 


ಇದನ್ನೂ ಓದಿ : ಒಂದು ರೂಪಾಯಿಗೆ ಖರೀದಿಸಿ ಒಂದು ಕೆಜಿ ಸಕ್ಕರೆ, ಅರ್ಧ ಕಿಲೋ ಈರುಳ್ಳಿ , ಈ ಅವಕಾಶ ಇಂದು ಮಾತ್ರ


ಈ ಆಹಾರ ಪದಾರ್ಥಗಳೂ ದುಬಾರಿಯಾಗಲಿವೆ :
ಆಹಾರ ಪದಾರ್ಥಗಳಲ್ಲಿ ಕಾರ್ಬೊನೇಟೆಡ್ ಹಣ್ಣಿನ ಪಾನೀಯಗಳು ದುಬಾರಿಯಾಗಿವೆ. ಇದರ ಮೇಲೆ  28% ಜಿಎಸ್ಟಿ ಮತ್ತು 12% ನಷ್ಟು ಕಂಪನ್ಸೆಶನ್ ಸೆಸ್ ಬೀಳಲಿದೆ. ಈ ಹಿಂದೆ ಶೇ.28ರಷ್ಟು ಜಿಎಸ್‌ಟಿ ಮಾತ್ರ ವಿಧಿಸಲಾಗುತ್ತಿತ್ತು. ಇದಲ್ಲದೇ ಐಸ್ ಕ್ರೀಮ್ (ice cream)ತಿನ್ನುವುದು ದುಬಾರಿಯಾಗಲಿದೆ.  ಸಿಹಿ ಸುಪಾರಿ ಮತ್ತು ಕೋಟೆಡ್ ಏಲಕ್ಕಿ ಈಗ ದುಬಾರಿಯಾಗಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.