ಓಲಾ-ಉಬರ್ ಮೂಲಕ ಆಟೋ ಬುಕ್ ಮಾಡುತ್ತೀರಾ?: 5% GST ಪಾವತಿಸಲು ಸಿದ್ಧರಾಗಿ..!

ಹಸ್ತಚಾಲಿತ(Manual) ಅಥವಾ ಆಫ್‌ಲೈನ್ ಮೋಡ್‌ನಲ್ಲಿ ಆಟೋ-ರಿಕ್ಷಾ ಚಾಲಕರು ಒದಗಿಸುವ ಪ್ರಯಾಣಿಕ ಸಾರಿಗೆ ಸೇವೆಗಳಿಗೆ ಜಿಎಸ್‌ಟಿ ವಿನಾಯಿತಿ ಇರುತ್ತದೆ.

Written by - Puttaraj K Alur | Last Updated : Nov 27, 2021, 11:29 AM IST
  • ಓಲಾ-ಉಬರ್ ಮೂಲಕ ಆಟೋ ಬುಕ್ ಮಾಡುವ ಜನರಿಗೆ ಶಾಕಿಂಗ್ ನ್ಯೂಸ್
  • 2022ರ ಜ.1ರಿಂದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಆಟೋ-ರಿಕ್ಷಾ ಸೇವೆಗಳು ದುಬಾರಿ
  • ಓಲಾ-ಉಬರ್ ಆನ್‌ಲೈನ್ ಸೇವೆಗಳಿಗೆ ಶೇ.5ರಷ್ಟು GST ವಿಧಿಸಲು ನಿರ್ಧರಿಸಿರುವ ಕೇಂದ್ರ
ಓಲಾ-ಉಬರ್ ಮೂಲಕ ಆಟೋ ಬುಕ್ ಮಾಡುತ್ತೀರಾ?: 5% GST ಪಾವತಿಸಲು ಸಿದ್ಧರಾಗಿ..! title=
ದುಬಾರಿಯಾಗಲಿವೆ ಓಲಾ & ಉಬರ್ ಸೇವೆಗಳು

ನವದೆಹಲಿ: ನೀವು ಆಗಾಗ ಓಲಾ ಅಥವಾ ಉಬರ್(Uber & Ola) ಅನ್ನು ಬಳಸುತ್ತೀರಾ..? ಹಾಗಾದರೆ ನೀವು ಬಳಸುವ ಸೇವೆಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗಬಹುದು. ಹೌದು, 2022ರ ಹೊಸ ವರ್ಷದ ಜನವರಿ 1ರಿಂದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಆಟೋ-ರಿಕ್ಷಾ ಸೇವೆಗಳು ಶೇ.5ರಷ್ಟು ಜಿಎಸ್‌ಟಿಗೆ ಒಳಪಡುತ್ತವೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರ ಸಾರಿಗೆ ಸೇವೆ ಒದಗಿಸುವ ಆಟೋ-ರಿಕ್ಷಾಗಳಿಗೆ ಜಿಎಸ್‌ಟಿ ವಿನಾಯಿತಿಯನ್ನು ಹಣಕಾಸು ಸಚಿವಾಲಯದ ಭಾಗವಾಗಿರುವ ಕಂದಾಯ ಇಲಾಖೆಯು ರದ್ದುಗೊಳಿಸಿದೆ.

ಹಸ್ತಚಾಲಿತ(Manual) ಅಥವಾ ಆಫ್‌ಲೈನ್ ಮೋಡ್‌ನಲ್ಲಿ ಆಟೋ-ರಿಕ್ಷಾ(Auto-Rickshaws Tax) ಚಾಲಕರು ಒದಗಿಸುವ ಪ್ರಯಾಣಿಕ ಸಾರಿಗೆ ಸೇವೆಗಳಿಗೆ ಜಿಎಸ್‌ಟಿ(GST) ವಿನಾಯಿತಿ ಇರುತ್ತದೆ. ಯಾವುದೇ ಆನ್‌ಲೈನ್ ಮಾರುಕಟ್ಟೆಯ ಮೂಲಕ ಒದಗಿಸಲಾಗುವ ಸೇವೆಗಳಿಗೆ ಜನವರಿ 1, 2022ರಿಂದ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗ್ರಾಹಕರಿಗೆ ಸಿಹಿಸುದ್ದಿ: ತಾಜಾ ಬೆಳೆ ಆಗಮನದೊಂದಿಗೆ ಡಿಸೆಂಬರ್‌ನಿಂದ ಟೊಮೇಟೊ ಬೆಲೆ ಇಳಿಕೆ ಸಾಧ್ಯತೆ

ಕೇಂದ್ರದ ಈ ನಿರ್ಧಾರವು ಇ-ಕಾಮರ್ಸ್ ಉದ್ಯಮ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಗಮನಾರ್ಹ ಸಂಖ್ಯೆಯ ಆಟೋ ರಿಕ್ಷಾ ಚಾಲಕರನ್ನು ರೈಡರ್‌ಗಳೊಂದಿಗೆ ಸಂಪರ್ಕಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ನೊಂದಿಗೆ ಸೇವೆ(Online Auto Booking)ಯನ್ನು ಪೂರೈಸುತ್ತಿದೆ. ಇದು ಕಡಿಮೆ ವೆಚ್ಚ, ಹೆಚ್ಚು ಅನುಕೂಲಕರ ಮತ್ತು ಉತ್ತಮ ಸವಾರಿ ವ್ಯವಸ್ಥೆಯಿಂದ ಪ್ರಯಾಣಿಕರ ಸಾರಿಗೆ ಸೇವೆಗಳಿಗೆ ಅನುಕೂಲವಾಗುವಂತೆ ಮಾರುಕಟ್ಟೆಯಲ್ಲಿ ಬಹಳ ಮುಖ್ಯವಾದ ಸ್ಥಾನ ಪಡೆದುಕೊಂಡಿದೆ.

ಮತ್ತೊಂದೆಡೆ ಭಾರತದಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಲಿದೆ ಎಂದು ತಜ್ಞರು ನಂಬಿದ್ದಾರೆ. ಈ ಅಪ್ಲಿಕೇಶನ್‌ಗಳು ಒದಗಿಸುವ ಸ್ವಯಂ ಬುಕಿಂಗ್(Online Platforms Tax) ಸೇವೆಗಳ ಅನುಕೂಲವನ್ನು ಬಳಸಿಕೊಳ್ಳುವುದನ್ನು ತಡೆಯುತ್ತದೆ.

ಇದನ್ನೂ ಓದಿ: Arecanut Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ

‘ಹೊಸದಾಗಿ ಸೇರಿಸಲಾಗಿರುವ ಷರತ್ತು ಇ-ಕಾಮರ್ಸ್(E-commerce) ಪ್ಲಾಟ್‌ಫಾರ್ಮ್‌ಗಳ ಮೂಲಕ ಬುಕ್ ಮಾಡಲಾದ ರೈಡ್‌ಗಳನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ. ಇದರ ಪರಿಣಾಮ ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಒದಗಿಸುವ ಸೇವೆ ನಡುವೆ ತೆರಿಗೆ ವ್ಯತ್ಯಾಸವಾಗುತ್ತದೆ’ ಎಂದು ಇವೈ ಇಂಡಿಯಾ ಟ್ಯಾಕ್ಸ್ ಪಾಲುದಾರ ಬಿಪಿನ್ ಸಪ್ರಾ ತಿಳಿಸಿದ್ದಾರೆ. ಪ್ರಯಾಣಿಕರು ತಾವು ತೆಗೆದುಕೊಳ್ಳುವ ಆನ್‌ಲೈನ್‌ ಆಟೋ ಸೇವೆ(Auto Rickshaw)ಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಈಗಾಗಲೇ ಅಗತ್ಯವಸ್ತುಗಳು ಸೇರಿದಂತೆ ಪೆಟ್ರೋಲ್-ಡೀಸೆಲ್ ದರಗಳ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಜನಸಾಮಾನ್ಯರಿಗೆ ಬೆಲೆ ಏರಿಕೆಯು ಮತ್ತಷ್ಟು ಹೊರೆಯಾಗಿ ಪರಿಣಮಿಸಲಿದೆ. ಇದರಿಂದ ಅವರು ಉಬರ್ & ಓಲಾ ಆನ್‌ಲೈನ್‌ ಸೇವೆಗಳನ್ನು ಪಡೆದುಕೊಳ್ಳಲು ಹಿಂದೇಟು ಹಾಕುವ ಆತಂಕವೂ ಎದುರಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News