ನವದೆಹಲಿ: Online Shopping: ಒಂದು ವೇಳೆ ನೀವೂ ಕೂಡ ಆನ್ಲೈನ್ ಶಾಪಿಂಗ್ (Online Shopping)ಮೂಲಕ ಸರಕುಗಳನ್ನು ಖರೀದಿಸುತ್ತಿದ್ದರೆ, ಇಲ್ಲಿದೆ  ನಿಮಗೊಂದು ಮಹತ್ವದ ಮಾಹಿತಿ. ಏಕೆಂದರೆ, ಇನ್ಮುಂದೆ ನಿಮಗೆ Flipkart-Amazon ಗಳಂತಹ ಆನ್ಲೈನ್ ಪ್ಲಾಟ್ಫಾರ್ಮ್ ಗಳ ಮೇಲೆ ಫ್ಲ್ಯಾಶ್ ಸೇಲ್ ಅಥವಾ ಭಾರಿ ರಿಯಾಯ್ತಿ ಸಿಗಲಿಕ್ಕಿಲ್ಲ. ಏಕೆಂದರೆ ಸರ್ಕಾರ ಇಂತಹ ಪ್ಲಾಟ್ಫಾರ್ಮ್ ಗಳ ಮೇಲೆ ಅಕ್ರಮ ಹಾಗೂ ಭಾರಿ ರಿಯಾಯ್ತಿಯೊಂದಿಗೆ ಸರಕು ಮಾರಾಟದ ಮೇಲೆ ಬ್ರೇಕ್ ಹಾಕುವ ಸಿದ್ಧತೆ ನಡೆಸಿದೆ. ಹೌದು, ಆನ್ಲೈನ್ ಶಾಪಿಂಗ್ ನಿಯಮಗಳಲ್ಲಿ ಸರ್ಕಾರ ಬದಲಾವಣೆ ತರುವ ಸಿದ್ಧತೆ ನಡೆಸಿದೆ. ಜೊತೆಗೆ ಈ ಕಂಪನಿಗಳಿಗೆ ಹಾಗೂ ಪ್ಲಾಟ್ಫಾರ್ಮ್ ಗಳನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜಿಸುವ ಇಲಾಖೆಯೊಂದಿಗೆ (DPIIT) ನೋಂದಣಿ ಕೂಡ ಅನಿವಾರ್ಯ ಮಾಡುವ ಪ್ರಸ್ತಾವನೆಯನ್ನು ಕೂಡ ಇಡಲಾಗಿದೆ.


COMMERCIAL BREAK
SCROLL TO CONTINUE READING

ಕಾರಣ ಏನು?
ಆನ್ಲೈನ್ ಚಿಲ್ಲರೆ ವ್ಯಾಪಾರದ ಮೂಲಕ ತನ್ನ ಛಾಪು ಮೂಡಿಸಲು ಭಾರಿ ಪ್ರಮಾಣದ ರಿಯಾಯ್ತಿ ನೀಡಲಾಗುತ್ತಿರುವ ಕುರಿತು ಸಣ್ಣ ವ್ಯಾಪಾರಿಗಳು ಆಗಾಗ ದೂರುಗಳನ್ನು ನೀಡುತ್ತಲೇ ಇರುತ್ತಾರೆ. ಈ ದೂರುಗಳ ಹಿನ್ನೆಲೆ ಭಾರತದಲ್ಲಿ ಸರ್ಕಾರ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಗಳಂತಹ ಆನ್ಲೈನ್ ಇ-ಕಾಮರ್ಸ್ (Online E-Commerce Sites) ಮಾರುಕಟ್ಟೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಿದ್ಧತೆಯನ್ನು ನಡೆಸಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ (Consumer Affair Minitry)  ಮೂಲಕ ಪ್ರಸ್ತಾಪಿಸಲಾಗಿರುವ ಗ್ರಾಹಕರ ಸಂರಕ್ಷಣಾ ನಿಯಮ 2020ರ [Consumer Protection(E-Commerce) Rules 2020] ಪ್ರಕಾರ, ಸರ್ಕಾರ ಪ್ಲಾಶ್ ಸೇಲ್ ಗಳನ್ನು ಸೀಮಿತಗೊಳಿಸುವ ಸಿದ್ಧತೆ ನಡೆಸಿದೆ. ಸಾಂಪ್ರದಾಯಿಕವಾಗಿ ಆಯೋಜಿಸಲಾಗುವ ಇ-ಕಾಮರ್ಸ್ ರಿಯಾಯಿತಿ ಮಾರಾಟದ ಮೇಲೆ ಯಾವುದೇ ರೀತಿಯ ನಿರ್ಬಂಧನೆ ವಿಧಿಸಲಾಗುವುದಿಲ್ಲ ಮತ್ತು ಕೇವಲ ವಿಶಿಷ್ಟ ರೀತಿಯಲ್ಲಿ ಗ್ರಾಹಕರನ್ನು ಆಕರ್ಷಿಸಲು ನಡೆಸಲಾಗುವ ಮಾರಾಟ ಅಥವಾ ಪದೇ-ಪದೇ ಪ್ಲಾಶ್ ಸೇಲ್ ಗಳು (Back-To-Back Sale) ಸರಕುಗಳ ಬೆಲೆ ಏರಿಸುತ್ತವೆ. ಎಲ್ಲರಿಗಾಗಿ ಸಮಾನ ಅವಕಾಶಗಳನ್ನು ಸೃಷ್ಟಿಸುವ ಪ್ಲಾಟ್ಫಾರ್ಮ್ ಒದಗಿಸುವುದರಿಂದ ತಡೆಯುತ್ತವೆ. ಹೀಗಾಗಿ ಇಂತಹ ಮಾರಾಟಗಳಿಗೆ ಅನುಮತಿ ನೀಡಲಾಗುವುದಿಲ್ಲ. 


ಇದನ್ನೂ ಓದಿ-ಮನೆಯಲ್ಲೇ ಈ ವ್ಯಾಪಾರ ಆರಂಭಿಸಿ ಪ್ರತಿ ತಿಂಗಳು 30 ಸಾವಿರ ರೂ. ಸಂಪಾದಿಸಬಹುದು


ಸಚಿವಾಲಯದ ವತಿಯಿಂದ ಪ್ರಸ್ತಾವಿಸಲಾಗಿರುವ ಇ-ಕಾಮರ್ಸ್ ನಿಯಮಗಳ ಬದಲಾವಣೆಗಳ ಪ್ರಕಾರ, ಇ-ಕಾಮರ್ಸ್ ವೇದಿಕೆಗಳು ಸಾಕಷ್ಟು ಪರಿಹಾರ ಕಾರ್ಯವಿಧಾನಗಳು (Adequate Redressal Mechanism)ಹಾಗೂ ಮುಖ್ಯ ಅನುಸರಣೆ ಅಧಿಕಾರಿಯನ್ನು (Chief Compliance Officer) ನೇಮಿಸಬೇಕಾಗುತ್ತದೆ. ಇದಲ್ಲದೆ, ಈ ಕಂಪನಿಗಳು ನಿವಾಸಿ ಕುಂದುಕೊರತೆ ಅಧಿಕಾರಿಯನ್ನು (Resident Grievance Officer) ಸಹ ನೇಮಿಸಬೇಕಾಗುತ್ತದೆ. ಈ ಅಧಿಕಾರಿ ಭಾರತದ ನಿವಾಸಿಯಾಗಿರಬೇಕು. ಇದರೊಂದಿಗೆ ನೋಡಲ್ ಅಧಿಕಾರಿಯನ್ನು (Nodal Officer) ಸಹ ಇರಿಸಬೇಕಾಗುತ್ತದೆ. ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಆದ್ಯತೆ ನೀಡುವುದು, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರಕ್ಕಾಗಿ (Department for Promotion of Industry and Internal Trade -DPIIT) ಇಲಾಖೆಯಲ್ಲಿ ಇ-ಚಿಲ್ಲರೆ ವ್ಯಾಪಾರಿಗಳ ಕಡ್ಡಾಯ ನೋಂದಣಿ ಮುಂತಾದ ನಿಯಮಗಳನ್ನು ಇದು ಒಳಗೊಂಡಿದೆ. ಕಂಪನಿಗಳನ್ನು ಗ್ರಾಹಕರಿಗೆ ಜವಾಬ್ದಾರರನ್ನಾಗಿ ಮಾಡುವುದು ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಮಾಡುವುದು ಕೇಂದ್ರ ಸರ್ಕಾರದ ಈ ಕ್ರಮದ ಮೂಲ ಉದ್ದೇಶವಾಗಿದೆ.


ಇದನ್ನೂ ಓದಿ-Aadhaar-SIM: ಒಂದು ಆಧಾರ್ ಕಾರ್ಡ್‌ನಿಂದ ಎಷ್ಟು ಸಿಮ್‌ಗಳನ್ನು ಖರೀದಿಸಬಹುದು?


ಕಳೆದ ವರ್ಷವೇ ಈ ಕುರಿತು  ಅಧಿಸೂಚನೆ ಹೊರಡಿಸಲಾಗಿದೆ
ಪ್ರಸ್ತಾವಿತ ತಿದ್ದುಪಡಿಗಳಲ್ಲಿ, ಇ-ಕಾಮರ್ಸ್ ಕಂಪನಿಗಳು ಯಾವುದೇ ಕಾನೂನಿನಡಿಯಲ್ಲಿ ಅಪರಾಧಗಳನ್ನು ತಡೆಗಟ್ಟುವುದು, ತನಿಖೆ ಮಾಡುವುದು ಮತ್ತು ಸರ್ಕಾರಿ ಸಂಸ್ಥೆಯಿಂದ ಆದೇಶವನ್ನು ಪಡೆದ 72 ಗಂಟೆಗಳ ಒಳಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಗ್ರಾಹಕ ಸಂರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020 ಅನ್ನು ಕಳೆದ ವರ್ಷ ಜುಲೈನಲ್ಲಿ ಮೊದಲು ತಿಳಿಸಲಾಗಿತ್ತು. ಕೈಗಾರಿಕಾ ಸಂಸ್ಥೆಗಳು ಮತ್ತು ಇ-ಕಾಮರ್ಸ್ ಸಂಸ್ಥೆಗಳು ಜುಲೈ 6 ರೊಳಗೆ ಪ್ರಸ್ತಾವಿತ ನಿಯಮಗಳ ಕುರಿತು ತಮ್ಮ ಸಲಹೆಗಳನ್ನು ಮತ್ತು ಅಭಿಪ್ರಾಯಗಳನ್ನು ಕಳುಹಿಸಬಹುದು ಎಂದು ಸಚಿವಾಲಯ ಸೂಚಿಸಿತ್ತು. 


ಇದನ್ನೂ ಓದಿ-NPS: ನಿತ್ಯ 74 ರೂ. ಉಳಿಸಿ ಮಿಲಿಯನೇರ್ ಆಗಬಹುದು! ತಿಂಗಳಿಗೆ ಸಿಗಲಿದೆ 27,500 ರೂ.ವರೆಗೆ ಪಿಂಚಣಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.