NPS: ನಿತ್ಯ 74 ರೂ. ಉಳಿಸಿ ಮಿಲಿಯನೇರ್ ಆಗಬಹುದು! ತಿಂಗಳಿಗೆ ಸಿಗಲಿದೆ 27,500 ರೂ.ವರೆಗೆ ಪಿಂಚಣಿ

National Pension System: ದುಡಿಯಲು ಪ್ರಾರಂಭಿಸಿದೊಡನೆ ನಿವೃತ್ತಿಯ ಯೋಜನೆಯನ್ನು ಪ್ರಾರಂಭಿಸಬೇಕು. ಏಕೆಂದರೆ ಇದರೊಂದಿಗೆ ನೀವು ನಿವೃತ್ತಿಯವರೆಗೂ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು.

Written by - Yashaswini V | Last Updated : Jun 21, 2021, 02:40 PM IST
  • ಪ್ರತಿದಿನ 74 ರೂ.ಗಳನ್ನು ಉಳಿಸಿ, ನಿವೃತ್ತಿಯವರೆಗೂ ಮಿಲಿಯನೇರ್ ಆಗಿ
  • ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮನ್ನು ಕೋಟ್ಯಾಧಿಪತಿಯಾಗಬಹುದು
  • ನೀವು ಎನ್‌ಪಿಎಸ್ ಮೂಲಕ ಮಿಲಿಯನೇರ್ ಆಗಲು ಬಯಸಿದರೆ, ಅದರ ವಿಧಾನವು ತುಂಬಾ ಸುಲಭ, ಸ್ವಲ್ಪ ಟ್ರಿಕ್ ಅಗತ್ಯವಿದೆ
NPS: ನಿತ್ಯ 74 ರೂ. ಉಳಿಸಿ ಮಿಲಿಯನೇರ್ ಆಗಬಹುದು! ತಿಂಗಳಿಗೆ ಸಿಗಲಿದೆ 27,500 ರೂ.ವರೆಗೆ ಪಿಂಚಣಿ  title=
ಪ್ರತಿದಿನ 74 ರೂ.ಗಳನ್ನು ಉಳಿಸಿ, ನಿವೃತ್ತಿಯ ವೇಳೆಗೆ ಕೋಟ್ಯಾಧಿಪತಿ ಆಗಿ

National Pension System: ದುಡಿಯಲು ಪ್ರಾರಂಭಿಸಿದೊಡನೆ ನಿವೃತ್ತಿಯ ಯೋಜನೆಯನ್ನು ಪ್ರಾರಂಭಿಸಬೇಕು. ಏಕೆಂದರೆ ಇದರೊಂದಿಗೆ ನೀವು ನಿವೃತ್ತಿಯವರೆಗೂ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು (National Pension System) ಅಂತಹ ಒಂದು ಆಯ್ಕೆಯಾಗಿದ್ದು, ಇದರಲ್ಲಿ ನೀವು ಒಟ್ಟು ಮೊತ್ತ ಹೂಡಿಕೆ ಮಾಡಬಹುದು ಮತ್ತು ನಿಮ್ಮ ನಿವೃತ್ತಿಯ ನಂತರ ಮಾಸಿಕ ಪಿಂಚಣಿ ಪಡೆಯಬಹುದು.

ಪ್ರತಿದಿನ 74 ರೂ.ಗಳನ್ನು ಉಳಿಸಿ, ನಿವೃತ್ತಿಯವರೆಗೂ ಮಿಲಿಯನೇರ್ ಆಗಿ:
ನೀವು ದಿನಕ್ಕೆ 74 ರೂ.ಗಳನ್ನು ಮಾತ್ರ ಉಳಿಸಿ ಎನ್‌ಪಿಎಸ್‌ನಲ್ಲಿ (NPS) ಇರಿಸಲು ಬಯಸಿದರೆ, ನಿವೃತ್ತಿಯ ತನಕ ನಿಮ್ಮ ಕೈಯಲ್ಲಿ 1 ಕೋಟಿ ರೂ. ಗಳಿಸಬಹುದು.  ನಿಮಗೆ 20 ವರ್ಷವಾಗಿದ್ದರ ಈ ವಯಸ್ಸಿನಲ್ಲಿ ನೀವು ಕೆಲಸ ಮಾಡದಿದ್ದರೂ ನಿಮ್ಮ ನಿವೃತ್ತಿಯ ಯೋಜನೆಯನ್ನು ಪ್ರಾರಂಭಿಸಬಹುದು. 

ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡುತ್ತದೆ:
ಎನ್‌ಪಿಎಸ್ ಮಾರುಕಟ್ಟೆ ಸಂಬಂಧಿತ ನಿವೃತ್ತಿ ಆಧಾರಿತ ಹೂಡಿಕೆ ಆಯ್ಕೆಯಾಗಿದೆ. ಈ ಯೋಜನೆಯಡಿಯಲ್ಲಿ, ಎನ್‌ಪಿಎಸ್ ಹಣವನ್ನು ಈಕ್ವಿಟಿ ಅಂದರೆ ಸ್ಟಾಕ್ ಮಾರ್ಕೆಟ್ ಮತ್ತು ಸಾಲ ಅಂದರೆ ಸರ್ಕಾರಿ ಬಾಂಡ್‌ಗಳು ಮತ್ತು ಕಾರ್ಪೊರೇಟ್ ಬಾಂಡ್‌ಗಳಲ್ಲಿ ಎರಡು ಸ್ಥಳಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಖಾತೆ ತೆರೆಯುವ ಸಮಯದಲ್ಲಿ ಮಾತ್ರ ಎನ್‌ಪಿಎಸ್ ಹಣ ಎಷ್ಟು ಇಕ್ವಿಟಿಗೆ ಹೋಗುತ್ತದೆ ಎಂಬುದನ್ನು ನೀವು ನಿರ್ಧರಿಸಬಹುದು. ಸಾಮಾನ್ಯವಾಗಿ 75% ರಷ್ಟು ಹಣ ಈಕ್ವಿಟಿಗೆ ಹೋಗಬಹುದು. ಇದರರ್ಥ ಇದರಲ್ಲಿ ನೀವು ಪಿಪಿಎಫ್ (PPF) ಅಥವಾ ಇಪಿಎಫ್ ಗಿಂತ ಸ್ವಲ್ಪ ಹೆಚ್ಚಿನ ಆದಾಯವನ್ನು ಪಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ- NPS Withdrawal Rule Change : NPS ಅಕೌಂಟ್ ಹಣ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ..!

ನೀವು ಎನ್‌ಪಿಎಸ್ ಮೂಲಕ ಮಿಲಿಯನೇರ್ ಆಗಲು ಬಯಸಿದರೆ, ಅದರ ವಿಧಾನವು ತುಂಬಾ ಸುಲಭ, ಸ್ವಲ್ಪ ಟ್ರಿಕ್ ಅಗತ್ಯವಿದೆ. ಈ ಸಮಯದಲ್ಲಿ ನಿಮಗೆ 20 ವರ್ಷ ವಯಸ್ಸಾಗಿದೆ ಎಂದು ಭಾವಿಸೋಣ. ನೀವು ದಿನಕ್ಕೆ 74 ರೂ. ಅಂದರೆ ತಿಂಗಳಿಗೆ 2230 ರೂ.ಗಳನ್ನು ಉಳಿಸುವ ಮೂಲಕ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿದರೆ ನೀವು ನಿವೃತ್ತಿಯ ವೇಳೆಗೆ ಕೋಟ್ಯಾಧಿಪತಿಯಾಗಬಹುದು. ಅಂದರೆ, ನೀವು 40 ವರ್ಷಗಳ ನಂತರ ನಿವೃತ್ತರಾದಾಗ, ನೀವು ಮಿಲಿಯನೇರ್ ಆಗುತ್ತೀರಿ. ಈಗ ನಿಮಗೆ 9% ದರದಲ್ಲಿ ಲಾಭ ಸಿಕ್ಕಿದೆ ಎಂದು ಭಾವಿಸೋಣ. ಆದ್ದರಿಂದ ನೀವು ನಿವೃತ್ತರಾದಾಗ, ನಿಮ್ಮ ಒಟ್ಟು ಪಿಂಚಣಿ ಸಂಪತ್ತು 1.03 ಕೋಟಿ ರೂ. ಆಗಲಿದೆ.

ಎನ್‌ಪಿಎಸ್‌ನಲ್ಲಿ ಹೂಡಿಕೆ
ವಯಸ್ಸು  20 ವರ್ಷಗಳು
ತಿಂಗಳಿಗೆ ಹೂಡಿಕೆ 2230 ರೂ.
ಹೂಡಿಕೆ ಅವಧಿ 40 ವರ್ಷಗಳು
ಅಂದಾಜು ಆದಾಯ 9%

 

ಎನ್‌ಪಿಎಸ್ ಹೂಡಿಕೆಗಳ ಲೆಡ್ಜರ್ ಖಾತೆ
ಒಟ್ಟು ಹೂಡಿಕೆ 10.7 ಲಕ್ಷ ರೂ.
ಪಡೆದ ಒಟ್ಟು ಬಡ್ಡಿ 92.40 ಲಕ್ಷ ರೂ.
ಪಿಂಚಣಿ ಸಂಪತ್ತು 1.03 ಕೋಟಿ ರೂ.
ಒಟ್ಟು ತೆರಿಗೆ ಉಳಿತಾಯ 3.21 ಲಕ್ಷ ರೂ.

ಈಗ ನೀವು ಈ ಎಲ್ಲಾ ಹಣವನ್ನು ಒಮ್ಮೆಗೇ ಹಿಂಪಡೆಯಲು ಸಾಧ್ಯವಿಲ್ಲ, ನೀವು ಅದರಲ್ಲಿ ಕೇವಲ 60 ಪ್ರತಿಶತವನ್ನು ಮಾತ್ರ ಹಿಂಪಡೆಯಬಹುದು, ಉಳಿದ 40 ಪ್ರತಿಶತವನ್ನು ನೀವು ವರ್ಷಾಶನ ಯೋಜನೆಯಲ್ಲಿ ಹಾಕಬೇಕಾಗುತ್ತದೆ, ಇದರಿಂದ ನೀವು ಪ್ರತಿ ತಿಂಗಳು ಪಿಂಚಣಿ ಪಡೆಯುತ್ತೀರಿ. ನಿಮ್ಮ ಹಣದ 40% ಅನ್ನು ನೀವು ವರ್ಷಾಶನದಲ್ಲಿ ಇರಿಸಿದ್ದೀರಿ ಎಂದು ಭಾವಿಸೋಣ. ಆದ್ದರಿಂದ ನಿಮಗೆ 60 ವರ್ಷ ವಯಸ್ಸಾದಾಗ, ನೀವು ಒಂದು ದೊಡ್ಡ ಮೊತ್ತವನ್ನು 61.86 ಲಕ್ಷಗಳನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಮತ್ತು ಬಡ್ಡಿ 8% ಎಂದು ಊಹಿಸಿದರೆ, ನಂತರ ಪ್ರತಿ ತಿಂಗಳು ಪಿಂಚಣಿ ಸುಮಾರು 27,500 ಸಾವಿರ ರೂಪಾಯಿಗಳಾಗಿರುತ್ತದೆ.

ಇದನ್ನೂ ಓದಿ- Aadhaar ಆಧಾರಿತ ಆನ್‌ಲೈನ್ ಕೆವೈಸಿ ಮೂಲಕವೂ ತೆರೆಯಬಹುದು NPS ಖಾತೆ ತೆರೆಯಬಹುದು!

ಪಿಂಚಣಿ ಖಾತೆ
ವರ್ಷಾಶನ 40 ಪ್ರತಿಶತ
ಅಂದಾಜು ಬಡ್ಡಿದರ 8%
ಒಟ್ಟು ಮೊತ್ತ 61.86 ಲಕ್ಷ (ಮೊದಲೇ ಸ್ವೀಕರಿಸಲಾಗುವುದು)
ಮಾಸಿಕ ಪಿಂಚಣಿ  ರೂ .27496

ಇದು ಮಾರುಕಟ್ಟೆ ಸಂಬಂಧಿತ ಉತ್ಪನ್ನವಾಗಿದ್ದರೂ, ಅದರ ಆದಾಯದಲ್ಲಿ ಬದಲಾವಣೆ ಸಾಧ್ಯತೆಯಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News