ಪತ್ನಿಯ ಹೆಸರಿನಲ್ಲಿ ಈ ಖಾತೆ ತೆರೆದು ತಿಂಗಳಿಗೆ ₹47,066 ಸಂಪಾದಿಸಿ, ಜೊತೆಗೆ ಒಟ್ಟಿಗೆ 1,05,89,741 ಪಡೆಯಿರಿ!
NPS Account On Wife Name: ಹೊಸ ಪಿಂಚಣಿ ವ್ಯವಸ್ಥೆ (ರಾಷ್ಟ್ರೀಯ ಪಿಂಚಣಿ ಯೋಜನೆ) ಖಾತೆಯನ್ನು ನೀವು ನಿಮ್ಮ ಪತ್ನಿಯ ಹೆಸರಿನಲ್ಲಿಯೂ ಕೂಡ ತೆರೆಯಬಹುದು. ಅನುಕೂಲಕ್ಕೆ ಅನುಗುಣವಾಗಿ, ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಹಣವನ್ನು ಠೇವಣಿ ಮಾಡುವ ಆಯ್ಕೆ ಇದರಲ್ಲಿ ಲಭ್ಯವಿದೆ. 1,000 ರೂಪಾಯಿಗಳಿದ್ದರೂ ಪತ್ನಿಯ ಹೆಸರಿನಲ್ಲಿ ಎನ್‌ಪಿಎಸ್ ಖಾತೆ ತೆರೆಯಬಹುದು.
ಬೆಂಗಳೂರು: ಪ್ರತಿಯೊಬ್ಬರೂ ಭವಿಷ್ಯದ ಕುರಿತು ತಮ್ಮ ಯೋಜನೆಯನ್ನು ರೂಪಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ನಿವೃತ್ತಿ ಯೋಜನೆಯನ್ನು ಸಹ ಹುಡುಕುತ್ತಾರೆ. ಆದರೆ, ಸಾಮಾನ್ಯವಾಗಿ ಜನರಿಗೆ ಸರಿಯಾದ ದಾರಿ ತೋಚುವುದಿಲ್ಲ ನಿಮ್ಮ ನಿವೃತ್ತಿಯ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ ನಿಮ್ಮ ಪತ್ನಿ ನಿಮ್ಮೀ ಸಮಸ್ಯೆಯನ್ನು ಪರಿಹರಿಸಬಹುದು. ಹೌದು, ನಿಮ್ಮ ಪತ್ನಿಯ ಹೆಸರಿನಲ್ಲಿ ಈ ವಿಶೇಷ ಖಾತೆ ತೆರೆದರೆ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅಂತಹ ಒಂದು ಯೋಜನೆಯಾಗಿದೆ, ಇದರಲ್ಲಿ ನೀವು ಮಾತ್ರವಲ್ಲದೆ ನಿಮ್ಮ ಪತ್ನಿಗೂ ಕೂಡ ಹಣ ಸಂಪಾದಿಸಲು ಸಹಾಯ ಮಾಡಬಹುದು. ಹೊಸ ಪಿಂಚಣಿ ವ್ಯವಸ್ಥೆ (NPS) ಖಾತೆಯನ್ನು ಪತ್ನಿಯ ಹೆಸರಿನಲ್ಲಿ ತೆರೆಯಬಹುದು. NPS ಖಾತೆಯು 60 ವರ್ಷ ವಯಸ್ಸಿನಲ್ಲಿ ಪತ್ನಿಗೆ ಒಂದು ದೊಡ್ಡ ಮೊತ್ತವನ್ನು ನೀಡುತ್ತದೆ. ಇದಲ್ಲದೆ, ನೀವು ಪ್ರತಿ ತಿಂಗಳು ಪಿಂಚಣಿ ಪ್ರಯೋಜನವನ್ನು ಸಹ ಪಡೆಯುವಿರಿ. ಇದು ಹೆಂಡತಿಯ ನಿಯಮಿತ ಆದಾಯವಾಗಿರುತ್ತದೆ. NPS ಖಾತೆಯ ದೊಡ್ಡ ಪ್ರಯೋಜನವೆಂದರೆ ಪ್ರತಿ ತಿಂಗಳು ನಿಮಗೆ ಎಷ್ಟು ಪಿಂಚಣಿ ಬೇಕು ಎಂದು ನೀವೇ ನಿರ್ಧರಿಸಬಹುದು. ಇದರಿಂದ 60ರ ಹರೆಯದಲ್ಲೂ ಹಣದ ಟೆನ್ಷನ್ ಇರುವುದಿಲ್ಲ.
ಪತ್ನಿಯ ಹೆಸರಿನಲ್ಲಿ NPS ಖಾತೆ ತೆರೆಯಿರಿ
ಹೊಸ ಪಿಂಚಣಿ ವ್ಯವಸ್ಥೆ (ರಾಷ್ಟ್ರೀಯ ಪಿಂಚಣಿ ಯೋಜನೆ) ಖಾತೆಯನ್ನು ಪತ್ನಿಯ ಹೆಸರಿನಲ್ಲಿ ತೆರೆಯಬಹುದು. ಅನುಕೂಲಕ್ಕೆ ಅನುಗುಣವಾಗಿ, ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಹಣವನ್ನು ಠೇವಣಿ ಮಾಡುವ ಆಯ್ಕೆ ಇದರಲ್ಲಿ ಲಭ್ಯವಿದೆ. 1,000 ರೂಪಾಯಿಗಳಿದ್ದರೂ ಪತ್ನಿಯ ಹೆಸರಿನಲ್ಲಿ ಎನ್‌ಪಿಎಸ್ ಖಾತೆ ತೆರೆಯಬಹುದು. NPS ಖಾತೆಯು 60 ವರ್ಷ ವಯಸ್ಸಿನಲ್ಲಿ ಪಕ್ವವಾಗುತ್ತದೆ. ಹೊಸ ನಿಯಮಗಳ ಪ್ರಕಾರ, ನೀವು ಬಯಸಿದರೆ, ಪತ್ನಿಯ ವಯಸ್ಸು 65 ವರ್ಷಗಳವರೆಗೆ NPS ಖಾತೆಯನ್ನು ಚಾಲನೆಯಲ್ಲಿ ಇರಿಸಬಹುದು.
ಆದರೆ, NPS ನಿಂದ ಹಣ ಗಳಿಸುವುದು ಹೇಗೆ?
ನಿಮ್ಮ ಪತ್ನಿಯ ವಯಸ್ಸು ಈಗ 30 ವರ್ಷಗಳು ಮತ್ತು ನೀವು ಪ್ರತಿ ತಿಂಗಳು NPS ಖಾತೆಯಲ್ಲಿ 5000 ರೂ. ಠೇವಣಿ ಇರಿಸಿದರೆ, ನಿಮ್ಮ ವಾರ್ಷಿಕ ಹೂಡಿಕೆ 60 ಸಾವಿರ ರೂ. ಗಳಾಗುತ್ತದೆ. 30 ವರ್ಷಗಳವರೆಗೆ ಹೂಡಿಕೆಯನ್ನು ಮುಂದುವರಿಸಿ. ಒಟ್ಟಾರೆ ನಿಮ್ಮ ಹೂಡಿಕೆ 18 ಲಕ್ಷ ರೂ.ಗಳಾಗುತ್ತದೆ. ನಿವೃತ್ತಿಯ ಸಮಯದಲ್ಲಿ, ನಿಮ್ಮ ಬಳಿ 1,76,49,569 ರೂಪಾಯಿಗಳ ಬೃಹತ್ ನಿಧಿ ಸಿದ್ಧವಾಗಿರುತ್ತದೆ. ಇದರಲ್ಲಿ ಬಡ್ಡಿಯಿಂದ ಮಾತ್ರ 1,05,89,741 ರೂ. ಬರುತ್ತದೆ. ಇಲ್ಲಿ ನಾವು ಸರಾಸರಿ ಬಡ್ಡಿಯನ್ನು ಶೇ.12ರಲ್ಲೇ ಇಟ್ಟುಕೊಂಡಿದ್ದೇವೆ. ಈಗ ಕಾಂಪೌಂಡಿಂಗ್ ಕೆಲಸ. ಹೂಡಿಕೆಯು 18 ಲಕ್ಷಗಳಾಗಬಹುದು ಆದರೆ ಕಾಂಪೌಂಡಿಂಗ್ ಲಾಭ ನಿಮ್ಮ ಮೊತ್ತವನ್ನು 1.5 ಕೋಟಿ ರೂಪಾಯಿಗಳಿಗಿಂತ ಹೆಚ್ಚು ತೆಗೆದುಕೊಂಡು ಹೋಗುತ್ತದೆ (ರೂ. 1,76,49,569).
ಪಿಂಚಣಿ ಸೂತ್ರವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಇದು ಎನ್‌ಪಿಎಸ್ ಖಾತೆಯ ದೊಡ್ಡ ಪ್ರಯೋಜನವಾಗಿದ್ದು, ನಿಮಗೆ ಎಷ್ಟು ಪಿಂಚಣಿ ಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು. ನಿಮ್ಮ ಪತ್ನಿಯ ಖಾತೆಯು 60 ನೇ ವಯಸ್ಸಿನಲ್ಲಿ ಪಕ್ವಗೊಂಡಾಗ, ನೀವು ಒಟ್ಟು ಮೊತ್ತ 1,05,89,741 ರೂ.ಗಲಾಗಿರುತ್ತದೆ ಇದು ಬಡ್ಡಿಯಿಂದ ಬಂದ ಹಣ. ಉಳಿದ ರೂ 70,59,828 ಅನ್ನು ವರ್ಷಾಶನ ಯೋಜನೆಯಲ್ಲಿ ಹೂಡಿಕೆ ಮಾಡಿ. ನಾವು ವರ್ಷಾಶನವನ್ನು ಕನಿಷ್ಠ ಶೇಕಡಾ 40 ರಷ್ಟು ಮಾತ್ರ ಇಟ್ಟುಕೊಂಡಿದ್ದೇವೆ. ವಾರ್ಷಿಕ ವರ್ಷಾಶನ ದರವನ್ನು ಶೇ.8 ರಷ್ಟು ಇರಿಸಲಾಗಿದೆ.
ಮಾಸಿಕ ₹ 5000 ಹೂಡಿಕೆಯೊಂದಿಗೆ ₹ 1.76 ಕೋಟಿ ನಿಧಿಯನ್ನು ರಚನೆಯಾಗುತ್ತದೆ.
ಒಟ್ಟು ಮೊತ್ತ ಎಷ್ಟು ಮತ್ತು ಎಷ್ಟು ಪಿಂಚಣಿ ಸಿಗುತ್ತದೆ? ಎಂಬುದನ್ನು ನಾವು HDFC ಪಿಂಚಣಿಯ NPS ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಲೆಕ್ಕಾಚಾರವನ್ನು ಮಾಡಿದ್ದೇವೆ.
- ವಯಸ್ಸು - 30 ವರ್ಷಗಳು
- ಒಟ್ಟು ಹೂಡಿಕೆಯ ಅವಧಿ - 30 ವರ್ಷಗಳು
- ಮಾಸಿಕ ಕೊಡುಗೆ- ರೂ 5,000
- ಹೂಡಿಕೆಯ ಮೇಲೆ ಅಂದಾಜು ಲಾಭ - 12 ಪ್ರತಿಶತ
- ಒಟ್ಟು ಪಿಂಚಣಿ ನಿಧಿ- ರೂ 1,76,49,569 (ಮೆಚ್ಯೂರಿಟಿಯಲ್ಲಿ)
- ವಾರ್ಷಿಕ ಯೋಜನೆ ರೂ 70,59,828 (40%)
- ಅಂದಾಜು ವರ್ಷಾಶನ ದರ 8 ಪ್ರತಿಶತ
- ಮಾಸಿಕ ಪಿಂಚಣಿ - ₹ 47,066 ಗಳಾಗುತ್ತದೆ.
ಇದನ್ನೂ ಓದಿ-ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ, ರಕ್ಷಾ ಬಂಧನ ಹಬ್ಬಕ್ಕೆ ಮೋದಿ ಸರ್ಕಾರದ ವತಿಯಿಂದ ಸಹೋದರಿಯರಿಗೆ ಉಡುಗೊರೆ!
ಮ್ಯೂಚವಲ್ ಫಂಡ್ ನಲ್ಲಿ ಯಾವ ರೀತಿ ಹೂಡಿಕೆಯನ್ನು ಮಾಡಿದರೆ ಹೆಚ್ಚು ಲಾಭದ ಜೊತೆಗೆ ಭದ್ರತೆ ಸಿಗುತ್ತದೆ?
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ನಿಮಗೆ ಯಾವುದೇ ರೀತಿಯ ಹೂಡಿಕೆಯ ಸಲಹೆಯನ್ನು ನೀಡುವುದಿಲ್ಲ ಮತ್ತು ಅದರಿಂದ ಸಿಗುವ ಲಾಭ ನಷ್ಟದ ಹೊಣೆಯನ್ನು ಕೂಡ ಹೊರುವುದಿಲ್ಲ. ಹಣ ಹೂಡಿಕೆ ಮಾಡುವ ಮುನ್ನ ಒಮ್ಮೆ ವಿಷಯ ತಜ್ಞರನ್ನು ಸಂಪರ್ಕಿಸಿ ಅವರಿಂದ ಸಲಹೆಗಳನ್ನು ಪಡೆದುಕೊಳ್ಳಲು ಸೂಚಿಸಲಾಗುತ್ತದೆ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.