PAN Card Making Process: ಈ ಪ್ರಕ್ರಿಯೆ ಅನುಸರಿಸಿ ಹತ್ತೇ ನಿಮಿಷಗಳಲ್ಲಿ ಮಾಡಿಸಬಹುದು ಪಾನ್ ಕಾರ್ಡ್
ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ಜೊತೆ ಲಿಂಕ್ ಆಗಿದ್ದರೆ, ಪ್ಯಾನ್ ಕಾರ್ಡ್ ಅನ್ನು 10 ನಿಮಿಷಗಳಲ್ಲಿ ಪಡೆಯಬಹುದು.
ನವದೆಹಲಿ : ಈಗ ಆಧಾರ್ ಮತ್ತು ಪ್ಯಾನ್ ಕಾರ್ಡ್ (Aadhaara card) ಅತ್ಯಂತ ಪ್ರಮುಖ ದಾಖಲೆಗಳಾಗಿವೆ. ಬ್ಯಾಂಕಿಂಗ್ ಅಥವಾ ತೆರಿಗೆ ಸಲ್ಲಿಸುವಂತಹ ಸೇವೆಗಳಿಗೆ ಪ್ಯಾನ್ ಕಾರ್ಡ್ (PAn Card) ಹೊಂದುವುದು ಬಹಳ ಮುಖ್ಯವಾಗಿರುತ್ತದೆ. ಇನ್ನು ದೊಡ್ಡ ಮೊತ್ತದ ವರ್ಗಾವಣೆ ಅಥವಾ ಆಭರಣ ಮತ್ತು ಕಾರುಗಳಂತಹ ದುಬಾರಿ ವಸ್ತುಗಳ ಖರೀದಿ ಸಂದರ್ಭದಲ್ಲಿಯೂ ಪ್ಯಾನ್ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಆದಾಯ ತೆರಿಗೆ ಇಲಾಖೆಯು ಹೊಸ ಪ್ಯಾನ್ ಕಾರ್ಡ್ ಮಾಡಿಸುವ ಅಥವಾ ಕಳೆದುಹೋದ ಪ್ಯಾನ್ ಅನ್ನು ಮತ್ತೆ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ಜೊತೆ ಲಿಂಕ್ (Aadhaar card mobile link) ಆಗಿದ್ದರೆ, ಪ್ಯಾನ್ ಕಾರ್ಡ್ ಅನ್ನು 10 ನಿಮಿಷಗಳಲ್ಲಿ ಪಡೆಯಬಹುದು. ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಹೊಸ ಆದಾಯ ತೆರಿಗೆ ವೆಬ್‌ಸೈಟ್‌ನಿಂದ ನಿಮ್ಮ ಇ-ಪ್ಯಾನ್ ಕಾರ್ಡ್ (e-pan card)ಅನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ : NPS Rules Change : ಬದಲಾದ NPS ನಿಯಮಗಳು : ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಇದಕ್ಕಾಗಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ (Aadhaaa card Pan card link) ಮಾಡಿಸುವುದು ಕಡ್ಡಾಯವಾಗಿದೆ. ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗದಿದ್ದರೆ ಇ-ಪ್ಯಾನ್ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಹೊಸ ಪ್ಯಾನ್ ಕಾರ್ಡ್ ಅನ್ನು ತಕ್ಷಣವೇ ಪಡೆಯಲು ಮತ್ತು ಹಳೆಯ ಪ್ಯಾನ್ ಕಾರ್ಡ್ ಅನ್ನು ಇ-ಪ್ಯಾನ್ ಕಾರ್ಡ್ ರೂಪದಲ್ಲಿ ಪಡೆಯಲು ಇರುವ ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ.
ಪ್ಯಾನ್ ಸಂಖ್ಯೆಯ ಮೂಲಕ ಇ-ಪ್ಯಾನ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ ?
- ಮೊದಲಿಗೆ ಆದಾಯ ತೆರಿಗೆ ವೆಬ್‌ಸೈಟ್ https://www.incometax.gov.in/iec/foportal ಗೆ ಲಾಗಿನ್ ಆಗಿ
- ಇನ್ಸ್ಟಂಟ್ ಇ ಪ್ಯಾನ್ ಮೇಲೆ ಕ್ಲಿಕ್ ಮಾಡಿ
- 'ಹೊಸ ಇ-ಪ್ಯಾನ್' ಮೇಲೆ ಕ್ಲಿಕ್ ಮಾಡಿ
- ಈಗ ನಿಮ್ಮ PAN ಸಂಖ್ಯೆಯನ್ನು ನಮೂದಿಸಿ
- ಪ್ಯಾನ್ ಸಂಖ್ಯೆ ನಿಮಗೆ ನೆನಪಿಲ್ಲದಿದ್ದರೆ, ಆಧಾರ್ ಸಂಖ್ಯೆಯನ್ನು ನಮೂದಿಸಿ.
- ನಿಯಮಗಳು ಮತ್ತು ಷರತ್ತುಗಳನ್ನು ಅನುಮೋದಿಸಿ
-ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಹಾಕಿ.
- ಕನ್ ಫರ್ಮ್ ಮಾಡಿ
ಈಗ ನಿಮ್ಮ ಪ್ಯಾನ್ ಅನ್ನು ನಿಮ್ಮ ಇಮೇಲ್ ಐಡಿಗೆ ಪಿಡಿಎಫ್ ರೂಪದಲ್ಲಿ ಕಳುಹಿಸಲಾಗುತ್ತದೆ. ನಂತರ ನಿಮ್ಮ 'ಇ-ಪ್ಯಾನ್' ಅನ್ನು ಡೌನ್‌ಲೋಡ್ ಮಾಡಬಹುದು.
ಆಧಾರ್ ಸಹಾಯದಿಂದ ಪ್ಯಾನ್ ಕಾರ್ಡ್ ಮಾಡಿಸುವುದು ಹೇಗೆ ?
- ಮೊದಲಿಗೆ, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ incometaxindiaefiling.gov.in ಗೆ ಹೋಗಿ ಮತ್ತು ಆಧಾರ್ ವಿಭಾಗದ ಮೂಲಕ ಇನ್‌ಸ್ಟಂಟ್ ಪ್ಯಾನ್‌ಗೆ ಹೋಗಿ.
-ಈಗ ಹೊಸ ಪೇಜ್ ಓಪನ್ ಆಗುತ್ತದೆ ಅಲ್ಲಿ ಗೆಟ್ ನ್ಯೂ ಪ್ಯಾನ್ ಮೇಲೆ ಕ್ಲಿಕ್ ಮಾಡಿ.
-ಇದರ ನಂತರ, ಓಪನ್ ಆಗವ ಪೇಜ್ ನಲ್ಲಿ ಆಧಾರ್ ನಂಬರ್ ಹಾಕಿ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
- ಇದರ ನಂತರ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿರುವ ನಿಮ್ಮ ಮೊಬೈಲ್ ಫೋನ್‌ನಲ್ಲಿ ಬರುವ OTP ಯನ್ನು ಹಾಕಿ.
-ಆಧಾರ್ ವಿವರಗಳನ್ನು ಪರಿಶೀಲಿಸಿ.
-ಇದರ ಇಮೇಲ್ ಐಡಿಯನ್ನು ನಮೂದಿಸಿ.
- ನಿಮ್ಮ ಆಧಾರ್ e-KYC ಡೇಟಾವನ್ನು ePAN ಗೆ ವರ್ಗಾಯಿಸಲಾಗುತ್ತದೆ ಮತ್ತು ಇದಕ್ಕೆ 10 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನಿಮಗೆ PAN ಅನ್ನು ಪಿಡಿಎಫ್ ರೂಪದಲ್ಲಿ ನೀಡಲಾಗುತ್ತದೆ.
ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ಅದನ್ನು ಡೌನ್‌ಲೋಡ್ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್