Aadhaar Card Update: ಈಗ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೂ ಚಿಂತಿಸಬೇಕಿಲ್ಲ

Aadhaar Card Update: ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿರುವ ಯುಐಡಿಎಐ (UIDAI), ಈಗ ಜನರು ಆಧಾರ್ ಕಾರ್ಡ್ ಇಲ್ಲದಿದ್ದರೂ ಈ ಆಯ್ಕೆಗಳನ್ನು ಬಳಸಿಕೊಂಡು ತಮ್ಮ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬಹುದು ಎಂದು ತಿಳಿಸಿದೆ.

Written by - Yashaswini V | Last Updated : Aug 2, 2021, 12:35 PM IST
  • ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದ ಯುಐಡಿಎಐ
  • ಈಗ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ
  • ಆಧಾರ್ ಪತ್ರ, ಇ-ಆಧಾರ್, ಎಂಆಧಾರ್ ಗೆ ಸಂಬಂಧಿಸಿದ ವಿಶೇಷ ವಿಷಯಗಳನ್ನು ತಿಳಿಯಿರಿ
Aadhaar Card Update: ಈಗ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೂ ಚಿಂತಿಸಬೇಕಿಲ್ಲ title=
Aadhaar Card Update

ನವದೆಹಲಿ:  Aadhaar Card Latest News- ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೇ ಯಾವುದೇ ಸರ್ಕಾರಿ ಅಥವಾ ಖಾಸಗಿ ಕೆಲಸಗಳನ್ನು ಮಾಡುವುದು ತುಂಬಾ ಕಷ್ಟ. ಬ್ಯಾಂಕಿಂಗ್‌ನಿಂದ ಟಿಕೆಟ್‌ವರೆಗೆ ಪ್ರತಿಯೊಂದು ಪ್ರಮುಖ ಕೆಲಸಕ್ಕೂ ಆಧಾರ್ ಕಾರ್ಡ್ ಅಗತ್ಯವಿದೆ. ಜನರು ಆಧಾರ್ ಬಗ್ಗೆ ಈಗ ಜಾಗೃತರಾಗಲು ಇದೇ ಕಾರಣ. ಆದರೆ ಹಲವು ಸಂದರ್ಭಗಳಲ್ಲಿ ನಾವು ಕೆಲಸದ ಗಡಿಬಿಡಿಯಲ್ಲಿ ಆಧಾರ್ ಕಾರ್ಡ್ ಅನ್ನು ಕಳೆದುಕೊಳ್ಳಬಹುದು ಅಥವಾ  ಅದನ್ನು ಎಲ್ಲಿಯಾದರೂ ಇಟ್ಟು ಮರೆತಿರಬಹುರು. ಅಂತಹ ಸಂದರ್ಭದಲ್ಲಿ ಆಧಾರ್‌ನಿಂದಾಗಿ ಹಲವು ಕೆಲಸಗಳು ಸ್ಥಗಿತಗೊಳ್ಳಬಹುದು. ಆದರೆ ಈಗ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆಧಾರ್ ನೀಡುವ ಸಂಸ್ಥೆ ಯುಐಡಿಎಐ (UIDAI) ಒಂದು ನಿಯಮವನ್ನು ಬದಲಿಸಿದೆ.  ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿರುವ ಯುಐಡಿಎಐ (UIDAI), ಈಗ ಜನರು ಆಧಾರ್ ಕಾರ್ಡ್ ಇಲ್ಲದಿದ್ದರೂ ಈ ಆಯ್ಕೆಗಳನ್ನು ಬಳಸಿಕೊಂಡು ತಮ್ಮ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬಹುದು ಎಂದು ತಿಳಿಸಿದೆ.

ಆಧಾರ್ ಇಲ್ಲದಿದ್ದಾಗ ನೀವು ಈ ದಾಖಲೆಗಳನ್ನು ಸಹ ಬಳಸಬಹುದು:
ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಪ್ರಕಾರ, ನೀವು ಆಧಾರ್ ಪತ್ರ (Aadhaar Letter), ಇ-ಆಧಾರ್ (eAadhaar), ಎಂಆಧಾರ್ (mAadhaar)  ಮತ್ತು ಆಧಾರ್ ಪಿವಿಸಿ ಕಾರ್ಡ್ (Aadhaar PVC Card)  ಹೊಂದಿದ್ದರೆ ಅವೆಲ್ಲವೂ ಸಮಾನವಾಗಿ ಮಾನ್ಯ ಮತ್ತು ಸ್ವೀಕಾರಾರ್ಹ. ಅಂದರೆ, ಈಗ ನೀವು ಆಧಾರ್ ಕಾರ್ಡ್ ಬದಲಿಗೆ ಮೇಲೆ ಉಲ್ಲೇಖಿಸಿದ ದಾಖಲೆಗಳನ್ನು ಬಳಸಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಬಹುದಾಗಿದೆ.

ಇದನ್ನೂ ಓದಿ- Aadhaar Card ಅನ್ನು ಅಸುರಕ್ಷಿತವಾಗಿರಿಸಲು ಈ ರೀತಿ ಲಾಕ್ ಮಾಡಿ

ಆಧಾರ್ ಪತ್ರ, ಇ-ಆಧಾರ್, ಎಂಆಧಾರ್ ಗೆ ಸಂಬಂಧಿಸಿದ ವಿಶೇಷ ವಿಷಯಗಳು:-
1.ಆಧಾರ್ ಪತ್ರದ ಮೇಲೆ ಆಧಾರ್ :

ಆಧಾರ್ ಪತ್ರ (Aadhaar Letter) ಅಥವಾ ಯಾವುದೇ ಸಾಮಾನ್ಯ ಕಾಗದದಲ್ಲಿ ಆಧಾರ್ ಡೌನ್‌ಲೋಡ್ ಆಗಿದ್ದರೂ, ಈ ಆಧಾರ್ ಸಂಪೂರ್ಣವಾಗಿ ಮಾನ್ಯವಾಗಿರುತ್ತದೆ. ಒಬ್ಬ ವ್ಯಕ್ತಿಯು ಪೇಪರ್ ಆಧಾರ್ ಕಾರ್ಡ್ ಹೊಂದಿದ್ದರೆ, ಆತನ ಆಧಾರ್ ಕಾರ್ಡ್ ಲ್ಯಾಮಿನೇಟ್ ಮಾಡುವುದು ಅಥವಾ ಹಣ ಪಾವತಿಸಿ ಸ್ಮಾರ್ಟ್ ಕಾರ್ಡ್ ಪಡೆಯುವುದು ಕಡ್ಡಾಯವಲ್ಲ.

2. ಆಧಾರ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ:
ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೆ ನೀವು ಯಾವುದೇ ಶುಲ್ಕವಿಲ್ಲದೆ ನಿಮ್ಮ ಆಧಾರ್ ಕಾರ್ಡ್ ಅನ್ನು https://eaadhaar.uidai.gov.in ನಿಂದ ಡೌನ್‌ಲೋಡ್ ಮಾಡಬಹುದು. ಇದನ್ನು ಪ್ಲಾಸ್ಟಿಕ್/ಪಿವಿಸಿ ಮೇಲೆ ಮುದ್ರಿಸುವ ಅಗತ್ಯವಿಲ್ಲ.

ಇದನ್ನೂ ಓದಿ- LPG Cylinder Booking: ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲು ಈ ಸುಲಭ ಮಾರ್ಗಗಳನ್ನು ಅನುಸರಿಸಿ

3. ಎಂಆಧಾರ್:
ಇದು ಆಧಾರ್‌ನ ಅಧಿಕೃತ ಅಪ್ಲಿಕೇಶನ್ ಆಗಿದೆ. ಈ ಆಪ್ ಸಹಾಯದಿಂದ ನಿಮ್ಮ ಆಧಾರ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು. ನಿಮ್ಮ ಬಳಿ ಯಾವಾಗಲಾದರೂ ಆಧಾರ್ ಕಾರ್ಡ್ ಇಲ್ಲದಿದ್ದರೆ, ನೀವು ಎಂಆಧಾರ್ (mAadhaar) ಬಳಸಿ ನಿಮ್ಮ ಕೆಲಸವನ್ನು ಮಾಡಬಹುದು. ಈ ಅಪ್ಲಿಕೇಶನ್‌ನೊಂದಿಗೆ, ನಿಮಗೆ ಆಧಾರ್‌ಗೆ ಸಂಬಂಧಿಸಿದ 35 ಕ್ಕೂ ಹೆಚ್ಚು ಆಧಾರ್ ಸೇವೆಗಳನ್ನು ಸಹ ಒದಗಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News