ನವದೆಹಲಿ: ಜಾಗತಿಕ ಸಾಂಕ್ರಾಮಿಕ ಕೊರೊನಾವೈರಸ್ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವಿನಾಶವನ್ನುಂಟು ಮಾಡಿದೆ. ಆದರೆ, ಈಗ ಕೊರೊನಾವೈರಸ್ ಸೋಂಕು ಕಡಿಮೆಯಾಗುತ್ತಿದ್ದಂತೆ ಜೀವನ ಕ್ರಮೇಣ ಸಹಜ ಸ್ಥಿತಿಯತ್ತ ಮರಳುತ್ತಿದೆ. ಈ ಮಧ್ಯೆ ಹಲವರು ವಿದೇಶ ಪ್ರಯಾಣದ ಬಗ್ಗೆ ಯೋಜಿಸುತ್ತಿದ್ದಾರೆ.  ಕೆಲವು ದೇಶಗಳಲ್ಲಿ ಪ್ರವೇಶ ಇನ್ನೂ ಲಭ್ಯವಿಲ್ಲದಿದ್ದರೂ, ಕೆಲವು ದೇಶಗಳು ಪ್ರವಾಸಿಗರಿಗಾಗಿ ತಮ್ಮ ಅಂತಾರಾಷ್ಟ್ರೀಯ ಗಡಿಗಳನ್ನು ಷರತ್ತುಗಳೊಂದಿಗೆ ತೆರೆದಿವೆ. ಹಲವು ದೇಶಗಳು ಕೋವಿಡ್ ಲಸಿಕೆ (Corona Vaccine) ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿವೆ. 


COMMERCIAL BREAK
SCROLL TO CONTINUE READING

ನೀವು ಸಹ ವಿದೇಶಕ್ಕೆ ಪ್ರಯಾಣಿಸಲು ಯೋಚಿಸುತ್ತಿದ್ದರೆ, ನಿಮ್ಮ ಕರೋನಾ ಲಸಿಕೆ ಪ್ರಮಾಣಪತ್ರವನ್ನು (Corona Vaccination Certificate) ನಿಮ್ಮ ಪಾಸ್‌ಪೋರ್ಟ್‌ನೊಂದಿಗೆ ಲಿಂಕ್ ಮಾಡಬೇಕು. ನಿಮ್ಮ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ನಿಮ್ಮ ಪಾಸ್‌ಪೋರ್ಟ್‌ನೊಂದಿಗೆ ಹೇಗೆ ಲಿಂಕ್ ಮಾಡಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ...


ಇದನ್ನೂ ಓದಿ- Passport in Post Office: ಈಗ ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲೂ ಪಾಸ್‌ಪೋರ್ಟ್ ಲಭ್ಯ


ವಿದೇಶ ಪ್ರಯಾಣಕ್ಕೆ ಕೋವಿಡ್ ಪ್ರಮಾಣಪತ್ರ ಕಡ್ಡಾಯ:
ಬೇರೆ ದೇಶಗಳಿಗೆ ಪ್ರಯಾಣಿಸಲು ನೀವು ನಿಮ್ಮ ಪಾಸ್‌ಪೋರ್ಟ್‌ನೊಂದಿಗೆ ಕರೋನಾ ಪ್ರಮಾಣಪತ್ರವನ್ನು ಲಿಂಕ್ (How to link corona vaccination certificate with passport) ಮಾಡುವುದು ಕಡ್ಡಾಯವಾಗಿದೆ. ಇದರಿಂದ ನಿಮ್ಮ ವಿದೇಶಿ ಪ್ರಯಾಣಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ನೀವು ಕರೋನಾ ಲಸಿಕೆಯ ಎರಡೂ ಡೋಸ್‌ಗಳನ್ನು ಸಹ ತೆಗೆದುಕೊಂಡಿದ್ದರೆ, ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಕರೋನಾ ಲಸಿಕೆ ಪ್ರಮಾಣಪತ್ರವನ್ನು ನಿಮ್ಮ ಪಾಸ್‌ಪೋರ್ಟ್‌ನೊಂದಿಗೆ ಸುಲಭವಾಗಿ ಲಿಂಕ್ ಮಾಡಬಹುದು.


ಇದನ್ನೂ ಓದಿ- ಪಾಸ್ ಪೋರ್ಟ್ , ಪ್ಯಾನ್ ಕಾರ್ಡ್ ಗಾಗಿ ಅಲೆಯಬೇಕಿಲ್ಲ, ಸಮೀಪದ ರೇಷನ್ ಅಂಗಡಿಯಲ್ಲೇ ಅರ್ಜಿ ಸಲ್ಲಿಸಬಹುದು


ಕರೋನಾ ಲಸಿಕೆ ಪ್ರಮಾಣ ಪತ್ರವನ್ನು ಪಾಸ್‌ಪೋರ್ಟ್‌ನೊಂದಿಗೆ ಲಿಂಕ್ ಮಾಡುವ ಸಂಪೂರ್ಣ ಪ್ರಕ್ರಿಯೆ:-
>> ಇದಕ್ಕಾಗಿ ನೀವು ಮೊದಲು ಕೋವಿನ್ www.cowin.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ .
>> ಲಾಗಿನ್ ಆದ ನಂತರ, ನೀವು ಹೋಮ್ ಪೇಜ್ ನಲ್ಲಿರುವ ಸಪೋರ್ಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
>> ಬೆಂಬಲ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ನೀವು ಇಲ್ಲಿ ಮೂರು ಆಯ್ಕೆಗಳನ್ನು ಪಡೆಯುತ್ತೀರಿ. ಈಗ 'ಪ್ರಮಾಣಪತ್ರ ತಿದ್ದುಪಡಿ'ಗಳ  (certificate corrections) ಮೇಲೆ ಕ್ಲಿಕ್ ಮಾಡಿ.
>> ಇಲ್ಲಿ ಕ್ಲಿಕ್ ಮಾಡಿದ ನಂತರ, ನಿಮ್ಮ ವ್ಯಾಕ್ಸಿನೇಷನ್ (Vaccination) ಸ್ಥಿತಿಯನ್ನು ನೀವು ನೋಡುತ್ತೀರಿ.
ಈಗ 'Raise an issue' ಆಯ್ಕೆಯನ್ನು ಕ್ಲಿಕ್ ಮಾಡಿ.
>> ರೈಸ್ ಎ ಇಶ್ಯೂ ಕ್ಲಿಕ್ ಮಾಡಿದ ನಂತರ, ನೀವು ಪಾಸ್‌ಪೋರ್ಟ್ ವಿವರಗಳನ್ನು ಸೇರಿಸಿ ಕ್ಲಿಕ್ ಮಾಡಿ.
>> ಇದರ ನಂತರ, ನೀವು ಲಸಿಕೆಯ ವಿವರಗಳನ್ನು ಸೇರಿಸಲು ಬಯಸುವವರ ಪಾಸ್‌ಪೋರ್ಟ್‌ನಿಂದ ಹೆಸರು ಮತ್ತು ಪಾಸ್‌ಪೋರ್ಟ್ ಸಂಖ್ಯೆಯನ್ನು ಭರ್ತಿ ಮಾಡಿ. 
>> ನೀವು ವಿವರಗಳನ್ನು ಸಲ್ಲಿಸಿದ ನಂತರ, ನಿಮ್ಮ ನೋಂದಾಯಿತ ಸಂಖ್ಯೆಗೆ ಸಂದೇಶ ಬರುತ್ತದೆ.
>> ಇದರ ನಂತರ, ಕೋವಿನ್ ಆಪ್‌ನಿಂದ ನಿಮ್ಮ ಲಸಿಕೆ ಪ್ರಮಾಣಪತ್ರವನ್ನು ನೀವು ಡೌನ್‌ಲೋಡ್ ಮಾಡಬಹುದು.
>> ಇದರಲ್ಲಿ ನಿಮ್ಮ ಪಾಸ್ಪೋರ್ಟ್ ವಿವರಗಳನ್ನು ನವೀಕರಿಸಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.