Paytm will also sell tomatoes : ಟೊಮೇಟೊ ಬೆಲೆ ಗಗನಕ್ಕೆ ಏರಿರುವುದು ಹಳೆಯ ವಿಚಾರ. ಟೊಮೇಟೊ ಬೆಲೆಯನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಶ್ರಮಿಸುತ್ತಿದೆ. ಈ ನಡುವೆ  ಪೇಟಿಎಂ ಕೂಡಾ  ಕಡಿಮೆ ಬೆಲೆಯಲ್ಲಿ ಟೊಮೇಟೊ ಮಾರಾಟಕ್ಕೆ ಇಳಿದಿದೆ. ಹೌದು, ಕಂಪನಿಯು ಟೊಮೆಟೊವನ್ನು ಕೆಜಿಗೆ 70 ರೂ.ಯಂತೆ ಮಾರಾಟ ಮಾಡಲಿದೆ. ಇದಕ್ಕಾಗಿ ಕಂಪನಿಯು ಎನ್‌ಸಿಸಿಎಫ್, ಒಎನ್‌ಡಿಸಿ ಜೊತೆ ಕೈಜೋಡಿಸಿದೆ. Paytm E-Commerce Private Limited (PEPL) ಮಂಗಳವಾರ ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ONDC ಮತ್ತು NCCF ನೊಂದಿಗೆ ಪಾಲುದಾರಿಕೆ ಹೊಂದಿದ್ದು,  ಪ್ರತಿ ಕೆಜಿಗೆ 70 ರೂ.ಯಂತೆ  ಟೊಮೆಟೊವನ್ನು ಮಾರಾಟ ಮಾಡುವುದಾಗಿ ಹೇಳಿದೆ.


COMMERCIAL BREAK
SCROLL TO CONTINUE READING

2 ಕಂಪನಿಗಳೊಂದಿಗೆ  ಕೈಜೋಡಿಸಿದ Paytm: 
ಈ 2 ಕಂಪನಿಗಳು ಈಗಾಗಲೇ ಟೊಮೆಟೊ ಮಾರಾಟ ಮಾಡುತ್ತಿವೆ. ಕೇಂದ್ರ ಸರ್ಕಾರದ ಸಹಕಾರಿ ಸಂಸ್ಥೆಗಳಾದ ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟ (NCCF) ಮತ್ತು NAFED ಈಗಾಗಲೇ ಆಯ್ದ ನಗರಗಳಲ್ಲಿ ಮೊಬೈಲ್ ವ್ಯಾನ್‌ಗಳ ಮೂಲಕ ಚಿಲ್ಲರೆ ಗ್ರಾಹಕರಿಗೆ ಪ್ರತಿ ಕೆಜಿಗೆ 70 ರೂ.ಗೆ ಟೊಮೆಟೊಗಳನ್ನು ಮಾರಾಟ ಮಾಡುತ್ತಿವೆ.


ಇದನ್ನೂ ಓದಿ : ನೀವು ಮಾಡುವ ಹೂಡಿಕೆಗೆ ಹಲವು ಪಟ್ಟು ಆದಾಯ ಪಡೆಯಬೇಕೆ? ಇಲ್ಲಿವೆ ಸಲಹೆಗಳು !


ವಾರಕ್ಕೆ ಎರಡು ಬಾರಿ ಖರೀದಿಸಬಹುದು : 
ಇಲ್ಲಿ ವಾರಕ್ಕೆ ಎರಡು ಬಾರಿ ಟೊಮೆಟೊಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ, ಬಳಕೆದಾರರು Paytm ಅಪ್ಲಿಕೇಶನ್‌ನಲ್ಲಿ ONDC ಮೂಲಕ ಉಚಿತ ವಿತರಣೆಯೊಂದಿಗೆ ವಾರಕ್ಕೆ ಎರಡು ಕೆಜಿ ಟೊಮೆಟೊಗಳನ್ನು  140 ರೂಗಳಲ್ಲಿ ಖರೀದಿಸಬಹುದು. ಕೆಲವು ನಗರಗಳಲ್ಲಿ ಟೊಮ್ಯಾಟೊ ಚಿಲ್ಲರೆ ಬೆಲೆ ಕೆಜಿಗೆ 200 ರೂಪಾಯಿ ದಾಟಿರುವುದರಿಂದ ಈ ಕ್ರಮವು ಬಳಕೆದಾರರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿಕೆ ತಿಳಿಸಿದೆ.


ದೆಹಲಿ-ಎನ್‌ಸಿಆರ್‌ನಲ್ಲಿರುವ ಪೇಟಿಎಂ ಒಎನ್‌ಡಿಸಿ ಬಳಕೆದಾರರಿಗೆ ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ ಫೆಡರೇಶನ್ (ಎನ್‌ಸಿಸಿಎಫ್) ಮೂಲಕ ಪ್ರತಿ ಕೆಜಿಗೆ 70 ರೂ.ಗೆ ಟೊಮೆಟೊವನ್ನು ಮಾರಾಟ ಮಾಡುವುದಾಗಿ ಪಿಇಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ :  ಭಾರತದ ಜಿಡಿಪಿಗೆ ಸಿಗಲಿದೆ ಹೊಸ ರೆಕ್ಕೆ, ಐಎಫ್ಎಫ್ ಅಂದಾಜಿನಿಂದ ಹೆಚ್ಚಾದ ಭರವಸೆ, ಇಲ್ಲಿದೆ ರಿಪೋರ್ಟ್!


ಬೆಲೆ ಏರಿಕೆ ದೇಶದ ಮೇಲೆ ಪರಿಣಾಮ ಬೀರುತ್ತಿದೆ : 
'ಟೊಮ್ಯಾಟೊನಂತಹ ಅಗತ್ಯ ವಸ್ತುಗಳ ಬೆಲೆಗಳು ದೇಶಾದ್ಯಂತ ಅನೇಕ ಜನರ ಮೇಲೆ ಪರಿಣಾಮ ಬೀರುತ್ತಿವೆ. NCCF ಮತ್ತು ONDC ನಡುವಿನ ಈ ಸಹಯೋಗದೊಂದಿಗೆ, ದೆಹಲಿ-NCR ನಲ್ಲಿರುವ ನಮ್ಮ ಬಳಕೆದಾರರು ಈಗ ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ಟೊಮೆಟೊಗಳನ್ನು ಖರೀದಿಸಬಹುದು ಎಂದು ಕಂಪನಿ (Paytm) ವಕ್ತಾರರು ತಿಳಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.