ಬೆಂಗಳೂರು : ಆದಾಯ ತೆರಿಗೆ ಸಲ್ಲಿಸಲು ಕೊನೆಯ ದಿನಾಂಕ ಹತ್ತಿರವಾಗುತ್ತಿದೆ. 31 ಜುಲೈ 2023 ರೊಳಗೆ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಈ ದಿನಾಂಕದೊಳಗೆ, 2022-23 ರ ಹಣಕಾಸು ವರ್ಷದಲ್ಲಿ ಮಾಡಿದ ಆದಾಯವನ್ನು ಬಹಿರಂಗಪಡಿಸಬೇಕು. ಮತ್ತೊಂದೆಡೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ, ಜನರಿಗೆ ಪ್ಯಾನ್ ಕಾರ್ಡ್ ಅಗತ್ಯವಾಗಿ ಬೇಕಾಗಿರುತ್ತದೆ. ಪ್ಯಾನ್ ಕಾರ್ಡ್ ಇಲ್ಲದೇ ಹೋದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಂತಿಲ್ಲ. ಆದರೆ ಪ್ಯಾನ್ ಕಾರ್ಡ್ ಹೊರತುಪಡಿಸಿ, ಐಟಿಆರ್ ಸಲ್ಲಿಸಲು ಆಧಾರ್ ಕಾರ್ಡ್ ಕೂಡಾ ಅಗತ್ಯ.
ಆಧಾರ್ ಕಾರ್ಡ್ ಬೇಕು :
ಆದಾಯ ತೆರಿಗೆ ರಿಟರ್ನ್ ಸಲ್ಲಿಸುತ್ತಿದ್ದರೆ ನಿಮಗೆ ಆಧಾರ್ ಕಾರ್ಡ್ ಕೂಡಾ ಬೇಕಾಗುತ್ತದೆ. ಐಟಿಆರ್ ಸಲ್ಲಿಸುವಾಗ ಆದಾಯ ತೆರಿಗೆ ರಿಟರ್ನ್ ಅನ್ನು ಇ-ಪರಿಶೀಲಿಸಲು ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಆಧಾರ್ ಕಾರ್ಡ್ ಮೂಲಕ ಆದಾಯ ತೆರಿಗೆ ರಿಟರ್ನ್ ಅನ್ನು ಇ-ಪರಿಶೀಲನೆ ಮಾಡುವುದು ತುಂಬಾ ಸುಲಭ.
ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ
ಟ್ವೀಟ್ ಮೂಲಕ ಮಾಹಿತಿ ನೀಡಿದ ಯುಐಡಿಎಐ :
ಯುಐಡಿಎಐ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. 'ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಆದಾಯ ತೆರಿಗೆ ರಿಟರ್ನ್ (ITR) ಅನ್ನು ವಿದ್ಯುನ್ಮಾನವಾಗಿ ಪರಿಶೀಲಿಸಿ. ಈ ಸೇವೆಯನ್ನು ಪಡೆಯಲು, ನಿಮ್ಮ ಮೊಬೈಲ್ ಸಂಖ್ಯೆಯನ್ನು ಪ್ಯಾನ್‌ಗೆ ಲಿಂಕ್ ಮಾಡಿದ ಆಧಾರ್‌ನೊಂದಿಗೆ ಅಪ್ಡೇಟ್ ಮಾಡಬೇಕು ಎಂದು ಯುಐಡಿಎಐ ಹೇಳಿದೆ.
Electronically verify your Income Tax Returns (ITRs) using your Aadhaar number.
To avail this service, your mobile number must be updated with PAN linked Aadhaar.@GoI_MeitY @mygovindia @PIB_India pic.twitter.com/AHLb7t24h3
— Aadhaar (@UIDAI) July 25, 2023
ಇ-ವೆರಿಫೈ :
ಆಧಾರ್ ಕಾರ್ಡ್ ಮೂಲಕ ಐಟಿಆರ್ ಅನ್ನು ಇ-ಪರಿಶೀಲಿಸಿದಾಗ, ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಈ OTPಯನ್ನು ITR ಪೋರ್ಟಲ್‌ನಲ್ಲಿ ನಮೂದಿಸಬೇಕು. ಇದರ ನಂತರ, ಐಟಿಆರ್ ಅನ್ನು ಇ-ಪರಿಶೀಲಿಸಲಾಗುತ್ತದೆ.
ಇದನ್ನೂ ಓದಿ : ಕೊನೆಗೂ ನಿಗದಿಯಾಯಿತು ದಿನಾಂಕ ! ಈ ದಿನ ಜನರ ಖಾತೆಗೆ ಬೀಳುವುದು 2 ಸಾವಿರ ರೂಪಾಯಿ
ಆಧಾರ್ ಕಾರ್ಡ್ ಬಹಳ ಮುಖ್ಯ :
ಇಂತಹ ಪರಿಸ್ಥಿತಿಯಲ್ಲಿ, ಐಟಿಆರ್ ಸಲ್ಲಿಸಲು ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಕೂಡಾ ಬಹಳ ಮುಖ್ಯ. ಜನರು ತಮ್ಮ ಐಟಿಆರ್ ಅನ್ನು ಸಲ್ಲಿಸುವಾಗ ಹೊಸ ತೆರಿಗೆ ಪದ್ಧತಿ ಮತ್ತು ಹಳೆಯ ತೆರಿಗೆ ಪದ್ಧತಿಯಿಂದ ಒಂದು ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದರ ಆಧಾರದ ಮೇಲೆ ಆದಾಯ ತೆರಿಗೆ ರಿಟರ್ನ್ ಅನ್ನು ತುಂಬಲು ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.