ಕೊನೆಗೂ ನಿಗದಿಯಾಯಿತು ದಿನಾಂಕ ! ಈ ದಿನ ಜನರ ಖಾತೆಗೆ ಬೀಳುವುದು 2 ಸಾವಿರ ರೂಪಾಯಿ

govt Schemelatest news : ಮೋದಿ ಸರ್ಕಾರವು ಜನರ ಖಾತೆಗಳಿಗೆ 2,000 ರೂ.ಗಳನ್ನು ವರ್ಗಾಯಿಸಲು ಹೊರಟಿದೆ. ಶೀಘ್ರದಲ್ಲೇ ಜನರು ಈ ಮೊತ್ತವನ್ನು ಪಡೆಯುತ್ತಾರೆ. ಹೌದು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಮೋದಿ  ಸರ್ಕಾರ ರೈತರಿಗೆ 2000 ರೂ.ಗಳನ್ನು ನೀಡುತ್ತಿದೆ. 

Written by - Ranjitha R K | Last Updated : Jul 25, 2023, 09:09 AM IST
  • ರೈತರ ಖಾತೆಗೆ 2000 ರೂಪಾಯಿ
  • ರೈತರಿಗೆ ಅಗತ್ಯ ನೆರವು ನೀಡುತ್ತಿರುವ ಕೇಂದ್ರ ಸರ್ಕಾರ
  • 27 ಜುಲೈ 2023 ರಂದು ಬಿಡುಗಡೆಯಾಗಲಿದೆ 14 ನೇ ಕಂತು
ಕೊನೆಗೂ ನಿಗದಿಯಾಯಿತು ದಿನಾಂಕ ! ಈ ದಿನ ಜನರ ಖಾತೆಗೆ ಬೀಳುವುದು  2 ಸಾವಿರ ರೂಪಾಯಿ  title=

ಬೆಂಗಳೂರು : ದೇಶದ ಜನರಿಗಾಗಿ ಮೋದಿ ಸರಕಾರ ಹಲವು ರೀತಿಯ ಯೋಜನೆಗಳನ್ನು ನಡೆಸುತ್ತಿದೆ. ಈ ಯೋಜನೆಗಳ ಮೂಲಕ ಮೋದಿ ಸರ್ಕಾರ ಜನರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರದಿಂದ ಜನರಿಗೆ ಆರ್ಥಿಕ ಲಾಭವೂ ದೊರೆಯುತ್ತಿದೆ.  ಈ ಮಧ್ಯೆ, ಮೋದಿ ಸರ್ಕಾರವು ಜನರ ಖಾತೆಗಳಿಗೆ 2,000 ರೂ.ಗಳನ್ನು ವರ್ಗಾಯಿಸಲು ಹೊರಟಿದೆ. ಶೀಘ್ರದಲ್ಲೇ ಜನರು ಈ ಮೊತ್ತವನ್ನು ಪಡೆಯುತ್ತಾರೆ. ಹೌದು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಮೋದಿ  ಸರ್ಕಾರ ರೈತರಿಗೆ 2000 ರೂ.ಗಳನ್ನು ನೀಡುತ್ತಿದೆ. 

ಪಿಎಂ ಕಿಸಾನ್ ಯೋಜನೆ : 
ಪ್ರಧಾನಮಂತ್ರಿ ಕಿಸಾನ್ ಯೋಜನೆಯು ಭಾರತದಾದ್ಯಂತ ರೈತರಿಗೆ ಅಗತ್ಯ ನೆರವು ನೀಡುತ್ತಿದೆ. ಕಿಸಾನ್ ಅಧಿಕೃತ ವೆಬ್‌ಸೈಟ್ ನಲ್ಲಿ ಫಲಾನುಭವಿಯ  ಸ್ಟೇಟಸ್ ಪರಿಶೀಲಿಸಲು ಮತ್ತು PM ಕಿಸಾನ್‌ನ 14 ನೇ ಕಂತು ಬಿಡುಗಡೆ ದಿನಾಂಕದ  ಅಪ್ಡೇಟ್ ಅನ್ನು  pmkisan.gov.in ಮೂಲಕ ಪಡೆಯಬಹುದು. ಇದೀಗ 14ನೇ ಕಂತನ್ನು ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಮೋದಿ ಸರ್ಕಾರ ಬಿಡುಗಡೆ ಮಾಡಲಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರಿಗೆ 2000 ರೂ. ಮೂರು ಸಮಾನ ಕಂತುಗಳಲ್ಲಿ 2 ಸಾವಿರ ರೂಪಾಯಿಯನ್ನು ನೀಡುತ್ತಿದೆ. 

ಇದನ್ನೂ ಓದಿ : ವಿವಿಧ ಬ್ಯಾಂಕ್‌ಗಳಿಂದ 2.09 ಲಕ್ಷ ಕೋಟಿ ಸಾಲ ರೈಟ್ ಆಫ್‌: ಆರ್‌ಬಿಐ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಯೋಜನೆ :
27 ಜುಲೈ 2023 ರಂದು ಪ್ರಧಾನ ಮಂತ್ರಿ ಕಿಸಾನ್ ಯೋಜನೆ  14 ನೇ ಕಂತು ರೈತರ ಖಾತೆಗೆ ವರ್ಗಾವಣೆಯಾಗಲಿದೆ. ಈ ಕಂತಿನ ಹಣಕ್ಕಾಗಿ ರೈತರು ಕಾತರದಿಂದ ಕಾಯುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ, ದೇಶದಾದ್ಯಂತ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 2,000 ರೂಪಾಯಿಗಳನ್ನು ವರ್ಗಾಯಿಸಲಾಗುವುದು. 14ನೇ ಕಂತಿನ ಬಿಡುಗಡೆಯಿಂದ ಲಕ್ಷಾಂತರ ರೈತರು ತಮ್ಮ ಕೃಷಿ ಅಗತ್ಯಗಳನ್ನು ಪೂರೈಸಲು ಮತ್ತು ಉತ್ತಮ ಜೀವನೋಪಾಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. 14 ನೇ ಕಂತಿನ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಅಪ್ಡೇಟ್ ಅಥವಾ ಅಧಿಸೂಚನೆಗಾಗಿ ಅಧಿಕೃತ PM-Kisan ಪೋರ್ಟಲ್ https://www.pmkisan.gov.in/ ಅನ್ನು ನಿಯಮಿತವಾಗಿ ಪರಿಶೀಲಿಸಲು ರೈತರಿಗೆ ಸೂಚಿಸಲಾಗುತ್ತದೆ. 

ಪ್ರಧಾನ ಮಂತ್ರಿ ಕಿಸಾನ್ ಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರ ಅರ್ಹತೆಯನ್ನು ಪರಿಶೀಲಿಸಿ  ಯೋಜನೆಯ ಲಾಭ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಎರಡು ಹೆಕ್ಟೇರ್‌ವರೆಗಿನ ಕೃಷಿ ಭೂಮಿ ಹೊಂದಿರುವವರು, ಮಾನ್ಯವಾದ ಆಧಾರ್ ಕಾರ್ಡ್ ಹೊಂದಿರುವವರು ಮತ್ತು ಕೆಲವು ವಿನಾಯಿತಿಗಳ ಅಡಿಯಲ್ಲಿ ಬರದಂತಹ ಅಗತ್ಯ ಮಾನದಂಡಗಳನ್ನು ಪೂರೈಸುವ ರೈತರನ್ನು ಅರ್ಹ ಫಲಾನುಭವಿಗಳೆಂದು ಪರಿಗಣಿಸಲಾಗುತ್ತದೆ. ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇ-ಕೆವೈಸಿ, ಆಧಾರ್ ಲಿಂಕ್ ಮತ್ತು ಮೊಬೈಲ್ ಸಂಖ್ಯೆ ನೋಂದಣಿ ಮೂಲಕ ರೈತರು ತಮ್ಮ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಬಹುದು.

ಇದನ್ನೂ ಓದಿ : Honda SP 160: ಭಾರತೀಯ ಮಾರುಕಟ್ಟೆಗೆ ಹೋಂಡಾ ಎಸ್‌ಪಿ 160 ಗ್ರ್ಯಾಂಡ್ ಎಂಟ್ರಿ!  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News