Pension Schemes Latest News: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (PFRDA) ಅಧ್ಯಕ್ಷ ಸುಪ್ರತಿಮ್ ಬಂಡೋಪಾಧ್ಯಾಯ, ಹೆಚ್ಚು ಚಂದಾದಾರರನ್ನು ಆಕರ್ಷಿಸಲು ಹೊಸ ನಿವೃತ್ತಿ ಸೌಲಭ್ಯಗಳನ್ನು ಪರಿಚಯಿಸುವ ಯೋಜನೆಗಳ ಮೇಲೆ PFRDA ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಇದು ಕನಿಷ್ಠ ನಿಶ್ಚಿತ ಆದಾಯವನ್ನು ಖಾತರಿಪಡಿಸುವ ಉತ್ಪನ್ನವನ್ನೂ ಸಹ ಒಳಗೊಂಡಿರಲಿದೆ ಎಂದು ಅವರು ಹೇಳಿದ್ದಾರೆ.  ಸುದ್ದಿ ಸಂಸ್ಥೆ PTI ಪ್ರಕಟಿಸಿರುವ ಒಂದು ವರದಿಯ ಪ್ರಕಾರ "NPS (New Pension Scheme) ಹಾಗೂ ಅಟಲ್ ಪೆನ್ಷನ್ ಯೋಜನೆ (APY)ಗಳನ್ನು ಹೊರತುಪಡಿಸಿ, ಹೆಚ್ಚೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲು PFRDA ಹೊಸ ಹಾಗೂ ವಿಶಿಷ್ಟ ರೀತಿಯ ಉತ್ಪನ್ನಗಳನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ." ಎಂದು ಬಂಡೋಪಾಧ್ಯಾಯ ಹೇಳಿದ್ದಾರೆ ಎನ್ನಲಾಗಿದೆ. ಇದರಲ್ಲಿ ಗ್ರಾಹಕರಿಗೆ ಕನಿಷ್ಠ ನಿಶ್ಚಿತ ರಿಟರ್ನ್ ನೀಡುವ ಉತ್ಪನ್ನ ತಮ್ಮ ಮೊದಲ ಆದ್ಯತೆಯಾಗಿದೆ ಎಂದೂ ಕೂಡ ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನೂತನ ಉತ್ಪನ್ನ ತಯಾರಿಸಲು ಸಹಕರಿಸಲು ವಿನಂತಿ (Appeal to help create new products)
ವರದಿಗಳ ಪ್ರಕಾರ 'ಇನ್ಸ್ಟಿಟ್ಯೂಟ್ ಆಫ್ ಏಕ್ಚ್ಯುವರೀಸ್ ಆಫ್ ಇಂಡಿಯಾ' ವತಿಯಿಂದ ಡಿಜಿಟಲ್ ಪದ್ಧತಿಯಿಂದ ಆಯುಜಿಸಲಾಗಿದ್ದ ಸೆಮಿನಾರ್ ಉದ್ದೇಶಿಸಿ ಅವರು ಮಾತನಾಡುತ್ತ ಅವರು ಈ ವಿಷಯ ಹೇಳಿದ್ದಾರೆ. ಆರ್ಥಿಕ ಹೂಡಿಕೆ ಹಾಗೂ ಉತಪನ್ನಗಳಲ್ಲಿನ ಅಪಾಯದ ಮೌಲ್ಯಮಾಪನ ಹಾಗೂ ನಿರ್ವಹಣೆ ಮಾಡುವವರು ಈ ನೂತನ ಉತ್ಪನ್ನಗಳನ್ನು ಸಿದ್ಧಪಡಿಸಲು ಪಿಂಚಣಿ ನಿಯಂತ್ರಣ ಸಂಸ್ಥೆಗೆ ಸಹಕರಿಸಬೇಕು ಎಂದು ಬಂಡೋಪಾಧ್ಯಾಯ ಹೇಳಿದ್ದಾರೆ.  ಪಿಂಚಣಿ ನಿಧಿ ವ್ಯವಸ್ಥಾಪಕರು ಉತ್ಪನ್ನಗಳನ್ನು ಖಾತರಿಪಡಿಸಲು ಪ್ರಾರಂಭಿಸಿದಾಗ, ಅದು ತಮ್ಮ ಬಂಡವಾಳ ಅಗತ್ಯಗಳು ಮತ್ತು ಬಂಡವಾಳದ ಅವಶ್ಯಕತೆಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದು, ಇದರಲ್ಲಿ ನೀವು ವೃತ್ತಿಪರರ ಪಾತ್ರ ನಿರ್ವಹಿಸಬಹುದು ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-Retirement: ನಿವೃತ್ತಿ ನಂತ್ರದ ನೆಮ್ಮದಿ ಜೀವನಕ್ಕೆ ಹೂಡಿಕೆ ಮಾಡಿ ಈ ಯೋಜನೆಯಲ್ಲಿ!


ಹೆಚ್ಚುವರಿ ಪೆನ್ಷನ್ ನೀಡುವುದರ ಮೇಲೆ ನಿರ್ಣಯ ಹೊರಬೀಳುವ ಸಾಧ್ಯತೆ (Can be considered for giving more pension)
ಇದಲ್ಲದೆ ಪ್ರಾಧಿಕಾರ ಹೆಚ್ಚುವರಿ ಪೆನ್ಷನ್ ನೀಡುವುದರ ಮೇಲೆ ತನ್ನ ಗಮನ ಕೆಂದ್ರೀಕರಿಸುತ್ತಿದೆ. ಇದರ ಅಡಿ, ಚಂದಾದಾರರು NPSನಿಂದ ಹೊರಬಂದ ಬಳಿಕ ಉನ್ನತ ಮಟ್ಟದ ದರದಲ್ಲಿ ಪೆನ್ಷನ್ ಅನ್ನು ಪ್ರಸ್ತುತಪಡಿಸಬಹುದಾಗಿದೆ ಎಂದು ಬಂದೋಪಾಧ್ಯಾಯ ಹೇಳಿದ್ದಾರೆ. NPS ನಿಂದ ಚಂದಾದಾರರು ಹೊರಬಂದ ಬಳಿಕ ನಾವು ಅವರಿಗೆ ರಿಟೈರ್ ಮೆಂಟ್ ಫಂಡ್ ನ ಕನಿಷ್ಠ ಅಂದರೆ ಶೇ.40ರಷ್ಟನ್ನು ಉಪಯೋಗಿಸುವ ಆಯ್ಕೆ ನೀಡುತ್ತೇವೆ. ಏಕೆಂದರೆ ವಾರ್ಷಿಗ ಪೆನ್ಷನ್ ದರಗಳು ಸಾಮಾನ್ಯವಾಗಿ ಮಾರುಕಟ್ಟೆಯನ್ನು ಅನುಸರಿಸುತ್ತವೆ ಮತ್ತು ಈ ದರ ಕ್ರಮೇಣ ಕೆಳಜಾರುತ್ತಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ- Salary Account ಖಾತೆದಾರರಿಗೆ 20 ಲಕ್ಷ ರೂ.ವಿಮೆ ಹೋಮ್ ಲೋನ್ ನಲ್ಲಿ ಡಿಸ್ಕೌಂಟ್, ಯಾವ್ ಬ್ಯಾಂಕ್ ನೀಡ್ತಿದೆ ಈ ಸೌಲಭ್ಯ?


ವಾರ್ಷಿಕವಾಗಿ ಪೆನ್ಷನ್ ದರಗಳು ಕಡಿಮೆಯಾಗುತ್ತಿರುವ ಕಾರಣ ಹಳೆ ಪೀಳಿಗೆಗಳು ಈ ಉತ್ಪನ್ನಗಳ ಜೊತೆಗೆ ಬರುತ್ತಿಲ್ಲ. ಇಂತಹುದರಲ್ಲಿ ನಾವು ಹೊಸದೊಂದು ವಾರ್ಷಿಕ ಪೆನ್ಷನ್ ಯೋಜನೆಯನ್ನು ಜಾರಿಗೆ ತರಬಹುದೆ? ಮತ್ತು ಮಾರುಕಟ್ಟೆಯ ಮಾನದಂಡಗಳನ್ನು ಆಧರಿಸಿ ಅದರ ದರಗಳು ಬದಲಾಗಬಹುದೇ? ಎಂದು ಅವರು ತಮ್ಮ ಅನಿಸಿಕೆಯನ್ನು ಮಂಡಿಸಿದ್ದಾರೆ. ಜೊತೆಗೆ NPS ಚಂದಾದಾರರಿಗೆ ಪೆನ್ಷನ್ ಅನುಮಾನ ಹೇಳಲು ಮತ್ತು ನಿಯಂತ್ರಕದ ಜೊತೆಗೆ ಸೇರಿ ಕಾರ್ಯನಿರ್ವಹಿಸಲು ಬಂಡೋಪಾಧ್ಯಾಯ,  ಅಕ್ಚುವರಿಸ್ ಅವರನ್ನು ಕೋರಿದ್ದಾರೆ.


ಇದನ್ನೂ ಓದಿ-LIC Nivesh Plus Plan: ಒಂದೇ ಬಾರಿಯ ಹೂಡಿಕೆಯಲ್ಲಿ ಪಡೆಯಬಹುದು ಉತ್ತಮ ರಿಟರ್ನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.