ದೆಹಲಿ: ಹೌದು ಇದು ಡಿಜಿಟಲ್ ಇಂಡಿಯಾ. ಇತ್ತೀಚಿನ ದಿನಗಳಲ್ಲಿ ಕಚೇರಿ ಕೆಲಸಗಳನ್ನು ಪೂರೈಸಲು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಎಲ್ಲವೂ ಆನ್ ಲೈನ್ ನಲ್ಲಿಯೇ ನಡೆದು ಹೋಗುತ್ತದೆ. ಮನೆಯಲ್ಲಿಯೇ ಕುಳಿತು ಆಯಾ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಪೂರೈಸಿಬಿಡಬಹುದು. ಇದು ಜನರ ಸಮಯವನ್ನು ಉಳಿಸುತ್ತದೆ. ಈ ಕಾರಣದಿಂದಾಗಿಯೇ ಪ್ರತಿಯೊಬ್ಬರೂ ಡಿಜಿಟಲ್ ನ ಮೊರೆ ಹೋಗುತ್ತಿದ್ದಾರೆ. ಇನ್ನು ನ್ಯಾಷನಲ್ ಪೆನ್ಶನ್ ಸಿಸ್ಟಮ್ ನಲ್ಲಿಯೂ ಆನ್ ಲೈನ್ ನಲ್ಲಿಯೇ ಕೆಲಸ ಮುಗಿಸಿಬಿಡಬಹುದು. ಠೇವಣಿ ಇಡಲು ಮತ್ತು ವಿಡ್ರಾ ಕೆಲಸವನ್ನು ಆನ್ ಲೈನ್ ನಲ್ಲಿಯೇ ಮಾಡಬಹುದು.
ಇನ್ನು NPS ಸಂಪೂರ್ಣ ಆನ್‌ಲೈನ್ :
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವವರಿಗೆ ಸರ್ಕಾರ ಒಳ್ಳೆ ಸುದ್ದಿಯನ್ನೇ ತಂದಿದೆ. ಈಗ ಎನ್‌ಪಿಎಸ್‌ನಲ್ಲಿ (NPS)ಹೂಡಿಕೆ ಮಾಡುವುದು ಅಥವಾ ಹಣ ವಿಡ್ರಾ ಮಾಡುವುದನ್ನು ಆನ್ ಲೈನ್ ನಲ್ಲಿಯೇ (Online) ಮಾಡಬಹುದು. ಇದಕ್ಕಾಗಿ, ನೀವು NPS https://enps.nsdl.com/eNPS/NationalPensionSystem.html ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಬೇಕು.
ಇದನ್ನೂ ಓದಿ : ಒಂದು ಕಾರಿನ FASTag ಅನ್ನು ಇನ್ನೊಂದು ಕಾರಿನಲ್ಲಿ ಹಾಕಬಹುದೇ?
ಆನ್ ಲೈನ್ ಬೇಡಿಕೆ ಇಟ್ಟಿದ್ದ PFRDA:
ಪೆನ್ಶನ್ ಫಂಡ್ ರೆಗ್ಯುಲೆಟರಿ ಆಂಡ್ ಡೆವಲೆಪ್ ಮೆಂಟ್ ಆಥಾರಿಟಿ (PFRDA) NPS ಅನ್ನು ಆನ್‌ಲೈನ್ ಮಾಡುವಂತೆ ಬಹಳ ದಿನಗಳಿಂದ ಒತ್ತಾಯಿಸಿತ್ತು. ಈ ಬಗ್ಗೆ ಅ ನುಮತಿ ನೀಡುವಂತೆ, PFRDA ಕಂದಾಯ ಇಲಾಖೆಯಿಂದ ಕೋರಿತ್ತು. ಆನ್‌ಲೈನ್ ಇ-ಕೆವೈಸಿ ಮಾಡಲು ಕಂದಾಯ ಇಲಾಖೆಯ ಅನುಮತಿ ನೀಡಿದೆ. ಈ ಕಾರಣದಿಂದ ಇನ್ನು ಎನ್‌ಪಿಎಸ್ ಖಾತೆ ತೆರೆಯುವ ಪ್ರಕ್ರಿಯೆ ಸರಳಗೊಳ್ಳಲಿದೆ. ಇತ್ತೀಚೆಗೆ ಪಿಎಫ್‌ಆರ್‌ಡಿಎ ಒಟಿಪಿ ಆಧಾರಿತ ದೃಢೀಕರಣ, ಇ-ಸೈನ್ ಆಧಾರಿತ ದೃಢೀಕರಣ ವಿಡಿಯೋ ಕಸ್ಟಮರ್ ಐಡೆಂಟಿಫಿಕೇಶನ್ ನಂತಹ ಅನೇಕ ಡಿಜಿಟಲ್ ಟೂಲ್ ಗಳನ್ನು ಪರಿಚಯಿಸಿತ್ತು.
ಸಿದ್ಧವಾಗಿದೆ ಡಿಜಿಟಲ್ ಟೂಲ್ ಕಿಟ್ :
ಎನ್‌ಪಿಎಸ್ ಹೂಡಿಕೆದಾರರಿಗೆ ಪಿಎಫ್‌ಆರ್‌ಡಿಎ ಎಂಟ್ರಿ ಟು ಎಕ್ಸಿಟ್ (E 2E ) ಡಿಜಿಟಲ್ ಉಪಕರಣವನ್ನು ಸಿದ್ಧಪಡಿಸಿದೆ. ಎನ್‌ಪಿಎಸ್ ಷೇರುದಾರರು ಈ ಮೂಲಕ ಠೇವಣಿ ಮತ್ತು ಹಿಂಪಡೆಯುವಿಕೆಯನ್ನು ಮಾಡಬಹುದು. ಇಡೀ ಪ್ರಕ್ರಿಯೆಯು ಕಾಗದ ರಹಿತವಾಗಿರುತ್ತದೆ. ಈ ಮೊದಲು, ಗ್ರಾಹಕರು (Customers) ಎನ್‌ಪಿಎಸ್‌ನಿಂದ ಎಕ್ಸಿಟ್ ಆಗಲು ಪಾಯಿಂಟ್ ಆಫ್ ಪ್ರೆಸೆನ್ಸ್ (POP) ಅಂದರೆ ಎನ್‌ಪಿಎಸ್ ಕೇಂದ್ರದಲ್ಲಿ ಭೌತಿಕವಾಗಿ ಹಾಜರಾಗಬೇಕಾಗಿತ್ತು. ಅಲ್ಲದೆ ಅಗತ್ಯ ದಾಖಲೆಗಳನ್ನು (Documents) ಕೂಡಾ ಸಲ್ಲಿಸಬೇಕಾಗಿತ್ತು.
ಇದನ್ನೂ ಓದಿ : Bank privatization : 4 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ : ಶೀಘ್ರವೇ ಫೋಷಣೆ ಸಾಧ್ಯತೆ
ಪಿಎಫ್‌ಆರ್‌ಡಿಎ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (NPS) ಹೆಚ್ಚು ಆಕರ್ಷಕವಾಗಿ ಮಾಡಲು ಎಲ್ಲಾ ತಯಾರಿ ನಡೆಸುತ್ತಿದೆ. ಇದಕ್ಕಾಗಿ, ಪಿಎಫ್‌ಆರ್‌ಡಿಎ ಕಾಲಕಾಲಕ್ಕೆ ನಿಯಮಗಳನ್ನು ಬದಲಾಯಿಸುತ್ತದೆ. ದೇಶದ ಹೆಚ್ಚಿನ ಜನರು ಇದರಲ್ಲಿ ಹೂಡಿಕೆ ಮಾಡಿ ತಮ್ಮ ಭವಿಷ್ಯವನ್ನು ಆರ್ಥಿಕವಾಗಿ ಭದ್ರಪಡಿಸಬೇಕೆನ್ನುವುದೇ ಪಿಎಫ್‌ಆರ್‌ಡಿಎ ಉದ್ದೇಶ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.