ನವದೆಹಲಿ : ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ 23 ಪೈಸೆ ಮತ್ತು ಡೀಸೆಲ್ ಬೆಲೆ 30 ಪೈಸೆಗಳಷ್ಟು ಏರಿಕೆ ಆಗಿದೆ.


COMMERCIAL BREAK
SCROLL TO CONTINUE READING

ತೈಲ ಬೆಲೆ ಮೇ 4 ರ ನಂತರ ಇದು 14 ನೇ ಭಾರಿ ಬೆಲೆ ಏರಿಕೆ ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್(Petrol Price) ಲೀಟರ್ ಗೆ 100 ರ ಗಡಿ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 99.94 ರೂ. ಮತ್ತು ಮತ್ತು ಡೀಸೆಲ್ ಬೆಲೆ 91.87 ರೂ.ಗೆ ಏರಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 96.86  ರೂ. ಡೀಸೆಲ್ 89.75 ರೂ.ಗೆ ಏರಿಕೆಯಾಗಿದೆ.


ಇದನ್ನೂ ಓದಿ : Personal Loan Requirement: ಕೇವಲ ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯುವ ವಿಧಾನ ತಿಳಿಯಿರಿ


ಕೋಲ್ಕತಾದಲ್ಲಿ ಪೆಟ್ರೋಲ್ 93.78 ರೂ. ಡೀಸೆಲ್(Diesel Price) 87.51 ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 95.33 ರೂ. ಮತ್ತು ಡೀಸೆಲ್ 89.44 ರೂ.ಗೆ ಏರಿಕೆಯಾಗಿದೆ. 


ಇದನ್ನೂ ಓದಿ : ICICI Bank: ಯುಪಿಐ ಐಡಿಯೊಂದಿಗೆ ವ್ಯವಹಾರ ನಡೆಸಲು ಇದರ ಅಗತ್ಯವಿಲ್ಲ


ತೈಲ ಕಂಪನಿಗಳು ಹಿಂದಿನ 15 ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆ(International Markets)ಯಲ್ಲಿ ಬೆಂಚ್ ಮಾರ್ಕ್ ಇಂಧನದ ಸರಾಸರಿ ಬೆಲೆ ಮತ್ತು ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸುತ್ತವೆ. ಮಂಗಳವಾರ ನಡೆದ 13ನೇ ಏರಿಕೆಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 3.04 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 3.59 ರೂ. ರಷ್ಟು ಹೆಚ್ಚಳವಾಗಿದೆ.


ಇದನ್ನೂ ಓದಿ : ಇನ್ನು ಮುಂದೆ ಲಭ್ಯವಿಲ್ಲ ಆಧಾರ್ ನ ಈ ಸೇವೆ ; UIDAI ನಿರ್ಧಾರದ ಹಿಂದಿನ ಕಾರಣ ಏನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.