ನವದೆಹಲಿ : ಪೆಟ್ರೋಲ್-ಡೀಸೆಲ್ ಬೆಲೆ ಸದ್ಯಕ್ಕೆ (Petrol diesel price) ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಸತತವಾಗಿ ಪೆಟ್ರೋಲ್ ಡಿಸೇಲ್ ಬೆಲೆ ಏರುತ್ತಲೇ ಇದೆ. ಇದೀಗ ಮತ್ತೆ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 29 ಪೈಸೆ ಹೆಚ್ಚಿಸಲಾಗಿದೆ. ಇನ್ನು ಡೀಸೆಲ್ ಕೂಡಾ ಪ್ರತಿ ಲೀಟರ್ ಗೆ 28 ಪೈಸೆಗಳಷ್ಟು ದುಬಾರಿಯಾಗಿದೆ. 


COMMERCIAL BREAK
SCROLL TO CONTINUE READING

4 ವಾರಗಳಲ್ಲಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್  ಬೆಲೆ : 
ಮೇ 4 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ (Petrol diesel price) ಸಾಕಷ್ಟು ಏರಿಕೆ ಕಂಡಿದೆ. 28 ದಿನಗಳಲ್ಲಿ ಪೆಟ್ರೋಲ್  ಪ್ರತಿ ಲೀಟರ್‌ಗೆ 6.90 ರೂ.ಗಳಷ್ಟು ದುಬಾರಿಯಾದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 7.19 ರೂ.ಗಳಷ್ಟು ಏರಿಕೆ ಕಂಡಿದೆ. 


ಇದನ್ನೂ ಓದಿ : 7th Pay Commission: ಪಿಂಚಣಿಗೆ ಸಂಬಂಧಿಸಿದಂತೆ ಬದಲಾದ ನಿಯಮ; ಷರತ್ತುಗಳು ಅನ್ವಯ


ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ? 


ನಗರ    ಪೆಟ್ರೋಲ್         ಡಿಸೇಲ್ 
ದೆಹಲಿ    97.22          87.97
ಮುಂಬೈ   103.36     95.44
ಚೆನ್ನೈ      98.40         92.58
ಕೋಲ್ಕತಾ   97.12          90.82
ಭೋಪಾಲ್    105.43    96.65
ರಾಂಚಿ    93.13           92.86
ಬೆಂಗಳೂರು  100.47         93.26
ಪಾಟ್ನಾ  99.28           93.30
ಚಂಡೀಘಡ    93.50    87.62
ಲಕ್ನೋ        94.42        88.38
 


ನಿಮ್ಮ ನಗರದಲ್ಲಿ ಬೆಲೆ ಎಷ್ಟು ಎಂದು ಹೀಗೆ ತಿಳಿಯಿರಿ :
ಪೆಟ್ರೋಲ್-ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ. ನಿಮ್ಮ ನಗರದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ (Petrol rate) ಎಷ್ಟು ಎಂದು ಎಸ್ಎಂಎಸ್ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು. ಇದಕ್ಕಾಗಿ ಇಂಡಿಯನ್ ಆಯಿಲ್ (Indian Oil) ಗ್ರಾಹಕರು RSP ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟಯ ಪೆಟ್ರೋಲ್ ಪಂಪ್  ಕೋಡ್ ಹಾಕಿ 9224992249 ಸಂಖ್ಯೆಗೆ SMS ಕಳುಹಿಸಿ. ಇನ್ನು ಬಿಪಿಸಿಎಲ್ ಗ್ರಾಹಕರು RSP ಎಂದು ಟೈಪ್ ಮಾಡಿ  9223112222 ಸಂಖ್ಯೆಗೆ ಎಸ್ ಎಂಎಸ್ ಕಳುಹಿಸಿದರೆ ಸಾಕು ನಿಮ್ಮ ನಗರದ ಪೆಟ್ರೋಲ್ ಡೀಸೆಲ್ ರೇಟ್ ಎಷ್ಟು ಎಂದು ತಿಳಿಯುತ್ತದೆ. ಎಚ್‌ಪಿಸಿಎಲ್ ಗ್ರಾಹಕರು HPPrice  ಎಂದು ಬರೆದು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು. 


ಇದನ್ನೂ ಓದಿ : SBI New Rule: ಜುಲೈ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಆಗಲಿದೆ ದುಬಾರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.