7th Pay Commission: ಪಿಂಚಣಿಗೆ ಸಂಬಂಧಿಸಿದಂತೆ ಬದಲಾದ ನಿಯಮ; ಷರತ್ತುಗಳು ಅನ್ವಯ

7th Pay Commission: ಕೇಂದ್ರ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆ ಮಾಡಲಾಗಿದೆ. ಈಗ ನೌಕರರು ತಮ್ಮ ಸ್ವಂತ ವಿವೇಚನೆಯಿಂದ ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಹಳೆಯ ಪಿಂಚಣಿ ಯೋಜನೆ ನಡುವೆ ಆಯ್ಕೆ ಮಾಡಬಹುದು. 

Written by - Ranjitha R K | Last Updated : Jun 20, 2021, 09:37 AM IST
  • ಕೇಂದ್ರ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ
  • ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಹಳೆಯ ಪಿಂಚಣಿ ಯೋಜನೆ ನಡುವೆ ಆಯ್ಕೆ ಮಾಡಬಹುದು.
  • ಏನು ಹೇಳುತ್ತದೆ ಸಿಸಿಎಸ್ ನಿಯಮಗಳು ತಿಳಿಯಿರಿ
7th Pay Commission: ಪಿಂಚಣಿಗೆ ಸಂಬಂಧಿಸಿದಂತೆ ಬದಲಾದ ನಿಯಮ;  ಷರತ್ತುಗಳು ಅನ್ವಯ  title=
ಕೇಂದ್ರ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ (file photo)

ನವದೆಹಲಿ : ಕೇಂದ್ರ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆ ಮಾಡಲಾಗಿದೆ. ಈಗ ನೌಕರರು ತಮ್ಮ ಸ್ವಂತ ವಿವೇಚನೆಯಿಂದ ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಹಳೆಯ ಪಿಂಚಣಿ ಯೋಜನೆ ನಡುವೆ ಆಯ್ಕೆ ಮಾಡಬಹುದು. ಸಿಸಿಎಸ್ ನಿಯಮಗಳನ್ನು (CCS rules) ಮಾರ್ಚ್  30ರ 2021 ರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ಉದ್ಯೋಗಿಗಳಿಗೆ ಸಿಗಲಿದೆ ಆಯ್ಕೆ : 
ಸಿಸಿಎಸ್ ನಿಯಮಗಳು 2021 ರ (CCS rules 2021) ನಿಯಮ 10 ರ ಪ್ರಕಾರ, ರಾಷ್ಟ್ರೀಯ ಪಿಂಚಣಿ ಯೋಜನೆಯ  (NPS) ವ್ಯಾಪ್ತಿಗೆ ಬರುವ ಕೇಂದ್ರ ಸರ್ಕಾರಿ ನೌಕರರು, ಹಳೆಯ ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಠೇವಣಿ ಇಟ್ಟಿರುವ ಪಿಂಚಣಿ ಕಾರ್ಪಸ್‌ನ ಲಾಭವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಪಡೆಯುತ್ತಾರೆ. ಆದರೆ, ಮೃತ ಸದಸ್ಯರ ಕುಟುಂಬಕ್ಕೆ ಈ ಲಾಭ ಸಿಗುವುದಿಲ್ಲ. ಒಂದು ವೇಳೆ, ನೌಕರರು ಈ ಎರಡೂ ಯೋಜನೆಗಳಲ್ಲಿ ಯಾವ ಆಯ್ಕೆಯನ್ನು ಆರಿಸದೇ ಹೋದಲ್ಲಿ , ಮೊದಲ 15 ವರ್ಷಗಳ ಸೇವೆಗೆ ಹಳೆಯ ಪಿಂಚಣಿ ಯೋಜನೆಯಡಿ (Old pension scheme) ಲಾಭ ನೀಡಲಾಗುತ್ತದೆ. ನಂತರ 15 ವರ್ಷಗಳ ನಂತರದ ಅವಧಿಗೆ  ರಾಷ್ಟ್ರೀಯ ಪಿಂಚಣಿ ಯೋಜನೆಯ ಲಾಭವನ್ನು ನೀಡಲಾಗುವುದು. 

ಇದನ್ನೂ ಓದಿ : Post Office Investment - ಪೋಸ್ಟ್ ಆಫಿಸ್ ನ ಈ ಹೂಡಿಕೆಯ ಮೂಲಕ ನೀವು ಕೂಡ ಮಿಲಿಯನೇರ್ ಆಗಬಹುದು

ಏನು ಹೇಳುತ್ತದೆ ಸಿಸಿಎಸ್ ನಿಯಮಗಳು : 
ಸಿಸಿಎಸ್ ನಿಯಮಗಳು, 2021 ಅನ್ನು ಮಾರ್ಚ್ 30, 2021 ರ ಗೆಜೆಟ್ ಅಧಿಸೂಚನೆಯ ಮೂಲಕ ತಿಳಿಸಲಾಗಿದೆ. ಇದರ ಪ್ರಕಾರ, ಎನ್‌ಪಿಎಸ್ ಅಡಿಯಲ್ಲಿ ಬರುವ ಎಲ್ಲ ಉದ್ಯೋಗಿಗಳು, ಸರ್ಕಾರಿ ಕೆಲಸಕ್ಕೆ ಸೇರುವ ಸಮಯದಲ್ಲಿ, ರಾಷ್ಟ್ರೀಯ ಪಿಂಚಣಿ ಯೋಜನೆಯ ಲಾಭ ಪಡೆಯಲು ಫಾರ್ಮ್ 1 ರ ನಿಯಮ ಬಳಸಬೇಕಾಗುತ್ತದೆ. ಇದಲ್ಲದೆ, ಸೆಂಟ್ರಲ್ ಸಿವಿಲ್ ಸರ್ವೀಸಸ್ ನಿಯಮಗಳು (Central civil service rules), 1972 ಅಥವಾ ಕೇಂದ್ರ ನಾಗರಿಕ ಸೇವೆಗಳ ನಿಯಮಗಳು, 1939 ರ ಅಡಿಯಲ್ಲಿ ಸಾವಿನ ನಂತರ ಅಥವಾ ನಿವೃತ್ತಿಯ ನಂತರ ಲಾಭ ಸಿಗಲಿದೆ.

ಕಚೇರಿಗಳಲ್ಲಿ ಮೆಮರಾಂಡಮ್ ಜಾರಿ : 
ಈ ನಿಯಮದ ಪ್ರಕಾರ, ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿರುವ ಮತ್ತು ಎನ್‌ಪಿಎಸ್ ಅಡಿಯಲ್ಲಿರುವ ಸರ್ಕಾರಿ ನೌಕರರು ಶೀಘ್ರದಲ್ಲೇ ಫಾರ್ಮ್ 2 ರಲ್ಲಿ ಅಂತಹ ಆಯ್ಕೆಗಳನ್ನು ಅನುಮತಿಸಬೇಕಾಗುತ್ತದೆ. ಆರೋಗ್ಯ ಸೇವೆಯ ಮಹಾನಿರ್ದೇಶಕರು (director general of health service) ಜೂನ್ 9 ರಂದು ಹೊರಡಿಸಿರುವ ಕಚೇರಿ ಜ್ಞಾಪಕ ಪತ್ರದ ಪ್ರಕಾರ, ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಮತ್ತು ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುವ ನೌಕರರು ಸಹ ಫಾರ್ಮ್ 2 ರಲ್ಲಿ ತಮ್ಮ ಕುಟುಂಬದ ವಿವರಗಳನ್ನು ನೀಡಬೇಕಾಗುತ್ತದೆ. ಸೆಂಟ್ರಲ್ ರೆಕಾರ್ಡ್ ನಲ್ಲಿ (Centarl record) ಸೇವ್ ಮಾಡಿಕೊಳ್ಳಲು ಇದು ಅಗತ್ಯವಾಗಿರುತ್ತದೆ. 

ಇದನ್ನೂ ಓದಿ : SBI ಗ್ರಾಹಕರೇ ಗಮನಿಸಿ : ನಾಳೆ ಲಭ್ಯವಿರಲ್ಲ 'ಇಂಟರ್ನೆಟ್ ಬ್ಯಾಂಕಿಂಗ್' ಸೇವೆಗಳು!

ಕುಟುಂಬಕ್ಕೆ ಸಿಗಲಿದೆ ಈ ಲಾಭ : 
ಸಿಸಿಎಸ್  ನಿಯಮಗಳು, 1972 ರ ಪ್ರಕಾರ, ಕುಟುಂಬ ಪಿಂಚಣಿ ಸರ್ಕಾರಿ ನೌಕರನು (Central government employees) ಆಯ್ಕೆ ಮಾಡಿದ ಆಯ್ಕೆಯ ಪ್ರಕಾರ ಅಥವಾ ಡೀಫಾಲ್ಟ್ ಆಯ್ಕೆಯಂತೆ, ಕುಟುಂಬಕ್ಕೆ, ಪಿಂಚಣಿ ಮೊತ್ತವನ್ನು ನೀಡಲಾಗುತ್ತದೆ. ಅಂದರೆ ಡೆತ್ ಗ್ರಾಚ್ಯುಟಿ, ಲಿವ್ ಎನ್‌ಕ್ಯಾಶ್‌ಮೆಂಟ್, ಸಿಜಿಇಜಿಐಎಸ್ ಎ ಸೌಲಭ್ಯಗಳು, ಸಿಜಿಎಚ್‌ಎಸ್ ಸೌಲಭ್ಯಗಳು ಮತ್ತು 7 ನೇ ವೇತನ ಯೋಗದ (7th pay commission) ಆಧಾರದಲ್ಲಿಸಿಗುವ ವೇತನ ಸೇರಿದೆ. ಈ ರೀತಿಯಾಗಿ, ಕೇಂದ್ರ ನೌಕರರ ಪಿಂಚಣಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News