ನವದೆಹಲಿ : ಹೆಚ್ಚಿನ ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ ಮತ್ತು ಡೀಸೆಲ್ ಕೂಡ ಹಲವು ನಗರಗಳಲ್ಲಿ 100 ಕ್ಕಿಂತ ಹೆಚ್ಚಿನ ಬೆಳೆಗೆ ಮಾರಾಟವಾಗುತ್ತಿದೆ. ಆದರೆ, ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಬಳಕೆದಾರರಿಗೆ ಒಳ್ಳೆಯ ದಿನ, ಏಕೆಂದರೆ ಭಾನುವಾರ ತೈಲ ಬೆಲೆ ಇಳಿಕೆಯಾಗಿದೆ. ತೈಲ ಕಂಪನಿಗಳು ಬೆಳಿಗ್ಗೆ ಹೊಸ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ನೀವು ಇಂದಿನ ಬೆಲೆಯನ್ನು ನೋಡಿದರೆ, ಇಂಡಿಯನ್ ಆಯಿಲ್ ವೆಬ್‌ಸೈಟ್ ಪ್ರಕಾರ, ಇಂಧನ ಬೆಲೆ ಕಡಿಮೆಯಾಗಿವೆ.


COMMERCIAL BREAK
SCROLL TO CONTINUE READING

ಹೊಸ ದರದ ಪ್ರಕಾರ, ಡೀಸೆಲ್ ಬೆಲೆ(Diesel Rate) 10-20 ಪೈಸೆ ಮತ್ತು ಪೆಟ್ರೋಲ್‌ನಲ್ಲಿ ಸುಮಾರು 10 ಪೈಸೆ ಇಳಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಡೀಸೆಲ್ ಬೆಲೆಯಲ್ಲಿ ಇಳಿಯುತ್ತಲೆ ಇದೆ. ಪೆಟ್ರೋಲ್ ಬೆಲೆಯು ದೀರ್ಘಕಾಲದವರೆಗೆ ಸ್ಥಿರವಾಗಿತ್ತು ಮತ್ತು ಪೆಟ್ರೋಲ್ ಬೆಲೆಯಲ್ಲಿ ಕೊನೆಯ ಬದಲಾವಣೆ ಜುಲೈ 18 ರಂದು ಆಗಿತ್ತು. ಈಗ ಸುಮಾರು ಒಂದು ತಿಂಗಳ ನಂತರ ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆ ಕಂಡುಬಂದಿದೆ ಮತ್ತು ಬೆಲೆಯಲ್ಲಿ ಇಳಿಕೆಯಾಗಿದೆ.


ಇದನ್ನೂ ಓದಿ : Good News:ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ SBI, ಕೂಡಲೇ ಈ ಎರಡು ನಂಬರ್ ಮೊಬೈಲ್ ನಲ್ಲಿ ಸೇವ್ ಮಾಡಿ


ಇಂದಿನ ಹೊಸ ದರದ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್(petrol Rate)ಪ್ರತಿ ಲೀಟರ್‌ಗೆ 101.64 ರೂ. ಅದೇ ಸಮಯದಲ್ಲಿ, ಡೀಸೆಲ್ ಪ್ರತಿ ಲೀಟರ್‌ಗೆ 89.07 ರೂ. ಮುಂಬೈನಲ್ಲಿ ಡೀಸೆಲ್ ಪ್ರತಿ ಲೀಟರ್‌ಗೆ 96.64 ರೂ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ  107. 66 ರೂ. ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತು ಭಾರೀ ತೆರಿಗೆಯ ಹೆಚ್ಚಳದಿಂದಾಗಿ ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ದಾಖಲೆ ಮಟ್ಟದಲ್ಲಿವೆ.


ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ 


ನವದೆಹಲಿ ಪೆಟ್ರೋಲ್ ಬೆಲೆ 101.64 ರೂ. ಡೀಸೆಲ್ ಬೆಲೆ 89.07 ರೂ.
ಮುಂಬೈ ಪೆಟ್ರೋಲ್ ಬೆಲೆ  107.66 ರೂ. ಡೀಸೆಲ್ ಬೆಲೆ 96.64 ರೂ.
ಕೋಲ್ಕತಾ ಪೆಟ್ರೋಲ್ ಬೆಲೆ 101.93 ರೂ. ಡೀಸೆಲ್ ಬೆಲೆ 92.13 ರೂ.
ಚೆನ್ನೈ ಪೆಟ್ರೋಲ್ ಬೆಲೆ 99.32 ರೂ. ಡೀಸೆಲ್ ಬೆಲೆ 93.66 ರೂ.
ನೋಯ್ಡಾ ಪೆಟ್ರೋಲ್ ಬೆಲೆ 98.92 ರೂ. ಡೀಸೆಲ್ ಬೆಲೆ 89.64 ರೂ.
ಬೆಂಗಳೂರು ಪೆಟ್ರೋಲ್ ಬೆಲೆ 105.13 ರೂ. ಡೀಸೆಲ್ ಬೆಲೆ 94.49 ರೂ.
ಹೈದರಾಬಾದ್ ಪೆಟ್ರೋಲ್ ಬೆಲೆ 105.69 ರೂ. ಡೀಸೆಲ್ ಬೆಲೆ 97.15 ರೂ.
ಪಾಟ್ನಾ ಪೆಟ್ರೋಲ್ ಬೆಲೆ 104.10 ರೂ. ಡೀಸೆಲ್ ಬೆಲೆ 94.86 ರೂ.
ಜೈಪುರ ಪೆಟ್ರೋಲ್ ಬೆಲೆ 108.56 ರೂ. ಡೀಸೆಲ್ ಬೆಲೆ 98.22 ರೂ.
ಲಕ್ನೋ ಪೆಟ್ರೋಲ್ ಬೆಲೆ 98.70 ರೂ. ಡೀಸೆಲ್ ಬೆಲೆ 89.45 ರೂ.


ಇದನ್ನೂ ಓದಿ : New Pension System : ಈ ಯೋಜನೆಯಲ್ಲಿ ಹೂಡಿಕೆ ಮಾಡಿ ನಿವೃತ್ತಿ ಮೊದಲು ಮಿಲಿಯನೇರ್ ಆಗಿ ನಂತರ ಪ್ರತಿ ತಿಂಗಳು ₹50,000 ಪಿಂಚಣಿ


ನಿಮ್ಮ ನಗರದ ಬೆಲೆಗಳನ್ನು ಹೇಗೆ ನೋಡುವುದು


ಪೆಟ್ರೋಲ್ ಮತ್ತು ಡೀಸೆಲ್(Petrol-Diesel Rate) ಚಿಲ್ಲರೆ ಬೆಲೆಯನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ ಮತ್ತು ಅದರ ನಂತರ ಹೊಸ ಬೆಲೆಯನ್ನು ಬೆಳಿಗ್ಗೆ 6 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ನೀವು ನಿಮ್ಮ ಮನೆಯಲ್ಲೆ ಕುಳಿತು  ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಿಳಿದುಕೊಳ್ಳಬಹುದು. ಇಂಡಿಯನ್ ಆಯಿಲ್ ಗ್ರಾಹಕರು 9224992249 ಗೆ ತಮ್ಮ ಮೊಬೈಲ್ ನಿಂದ ಆರ್ ಎಸ್ ಪಿ ಜೊತೆಗೆ ನಗರ ಕೋಡ್ ನಮೂದಿಸಿ SMS ಕಳುಹಿಸುವ ಮೂಲಕ ಮಾಹಿತಿ ಪಡೆಯಯಬಹುದು.


ಇದನ್ನೂ ಓದಿ : Bank Alert! ಇಂದಿನಿಂದ 18 ಗಂಟೆಗಳ ಕಾಲ ಸ್ಥಗಿತಗೊಳ್ಳಲಿವೆ ಈ ಸೇವೆ, ಡೀಟೇಲ್ಸ್ ಇಲ್ಲಿದೆ


ಇಂಡಿಯನ್ ಆಯಿಲ್ (IOCL) ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀವು ನಗರ ಕೋಡ್(Code) ಅನ್ನು ಕಾಣಬಹುದು. ಸಂದೇಶವನ್ನು ಕಳುಹಿಸಿದ ನಂತರ, ನಿಮಗೆ ಇತ್ತೀಚಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳುಹಿಸಲಾಗುತ್ತದೆ. ಅದೇ ರೀತಿ, BPCL ಗ್ರಾಹಕರು ತಮ್ಮ ಮೊಬೈಲ್‌ನಿಂದ RSP ಟೈಪ್ ಮಾಡುವ ಮೂಲಕ 9223112222 ಗೆ SMS ಕಳುಹಿಸಬಹುದು. HPCL ಗ್ರಾಹಕರು HPPrice ಅನ್ನು 9222201122 ಗೆ ಟೈಪ್ ಮಾಡುವ ಮೂಲಕ SMS ಕಳುಹಿಸಬಹುದು. ಚಿಲ್ಲರೆ ಇಂಧನ ಬೆಲೆಗಳು ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಅಂತಹ ನಗರಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ, ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಅನ್ನು 100 ರೂ. ಮೀರಿ ಮಾರಾಟ ಮಾಡಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ