ನವದೆಹಲಿ : ಪೆಟ್ರೋಲ್ (Petrol) ಈಗಾಗಲೇ ಶತಕ ಸಿಡಿಸಿದೆ. ಪೆಟ್ರೋಲ್ ಗೆ ಸ್ಪರ್ಧೆ ನೀಡಿರುವ ಡೀಸೆಲ್ (Diesel) ಕೂಡಾ ಇದೀಗ ಸೆಂಚುರಿ ಸಿಡಿಸಿ ಸಾಮಾನ್ಯರ ಟೆನ್ಶನ್ ಏರಲು ಕಾರಣವಾಗಿದೆ.  ರಾಜಸ್ತಾನದ ಸಣ್ಣ ಸಿಟಿ ಶ್ರೀಗಂಗಾನಗರದಲ್ಲಿ ಡೀಸೆಲ್ ಬೆಲೆ ಕೂಡಾ ನೂರು ರೂಪಾಯಿ ದಾಟಿದೆ.  ಇಲ್ಲಿ ಪೆಟ್ರೋಲ್ ದೇಶದಲ್ಲಿ ಅತಿದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಅಂದರೆ ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 107.53 ರೂಪಾಯಿ..


COMMERCIAL BREAK
SCROLL TO CONTINUE READING

ಪೆಟ್ರೋಲ್ ಡೀಸೆಲ್ ಸಸ್ತಾ ಆಗುವ ಸಾಧ್ಯತೆ ಕಡಿಮೆ : 
ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (petrol diesel price) ಇಳಿಕೆಯಾಗುವ ಯಾವುದೇ ಸನ್ನಿವೇಶ ಇಲ್ಲ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ.  ರಾಜ್ಯ ಆಗಲಿ ಕೇಂದ್ರ ಸರ್ಕಾರವಾಗಲಿ ಪೆಟ್ರೋಲ್ ಮೇಲಿನ ತೆರಿಗೆ ಕಟ್ ಮಾಡುವ ಇರಾದೆ ಹೊಂದಿಲ್ಲ. ಇದರಲ್ಲಿ ಕೇವಲ ರಾಜಕೀಯ ಮಾತ್ರ ನಡೆಯುತ್ತಿದೆ. ಇನ್ನೊಂದು ಮುಖ್ಯ ಕಾರಣ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರ ಏರುತ್ತಿದೆ. ಈಗ ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 73 ಡಾಲರ್ ವಿಧಿಸಲಾಗುತ್ತಿದೆ. 


ಇದನ್ನೂ ಓದಿ Good News : ಈ ಮೂರು ಬ್ಯಾಂಕುಗಳಲ್ಲಿ ನಿಮ್ಮ ಖಾತೆ ಇದ್ದರೆ, ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದರೆ ಶುಲ್ಕ ಇಲ್ಲ


ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸುಮಾರು 30 ಪೈಸೆ ಏರಿಕೆಆಗಿದೆ. ಈ ವರ್ಷದಲ್ಲಿ 14 ಸಲ ಪೆಟ್ರೋಲ್ ಬೆಲೆಯಲ್ಲಿ (Petrol rate) ಏರಿಕೆಯಾಗಿದೆ. ಏಪ್ರಿಲ್ ನಲ್ಲಿ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಇತ್ತು ಇದೆ ಕಾರಣಕ್ಕೆ ಬೆಲೆಯಲ್ಲಿ ಕಡಿತ ಉಂಟಾಗಿತ್ತು. 


ಜೂನ್ ನಲ್ಲಿ ಇಲ್ಲಿಯವರೆಗೆ 8 ಸಲ ಬೆಲೆ ಏರಿಕೆ : 
ಮುಂಬಯಿನಲ್ಲಿ (Mumbai) ಪ್ರತಿ ಲೀಟರ್ ಪೆಟ್ರೋಲ್ ಬೆಲೆ 102 ರೂಪಾಯಿ ತಲುಪಿದೆ. ಇದೇ ವೇಳೆ  ಡೀಸೆಲ್ ಬೆಲೆ 94 ರೂಪಾಯಿ ಮುಟ್ಟಿದೆ.  ಜೂನ್ ನಲ್ಲಿ ಇದುವರೆಗೆ 8 ಸಲ ಬೆಲೆ ವ್ಯತ್ಯಾಸವಾಗಿದೆ.  ದೆಹಲಿಯಲ್ಲಿ (Delhi) ಪೆಟ್ರೋಲ್ ಬೆಲೆ ನಿನ್ನೆ 96.12 ಇದ್ದರೆ, ಇಂದು 96.41 ಮುಟ್ಟಿದೆ. ಮುಂಬಯಿಯಲ್ಲಿ ನಿನ್ನೆ 102.30 ಮತ್ತು ಇವತ್ತು 102.58 ರೂಪಾಯಿ ನಿಗದಿಯಾಗಿದೆ. ಚೆನ್ನೈನಲ್ಲಿ ನಿನ್ನೆ ಪ್ರತಿ ಲೀಟರ್ ಪೆಟ್ರೋಲ್ 97.43 ಆಗಿದ್ದರೆ ಇಂದು 97.69 ರೂಪಾಯಿ ದಾಖಲಾಗಿದೆ. 


ಇದನ್ನೂ ಓದಿ : SBI Alert! ಇಂಟರ್ನೆಟ್ ಬ್ಯಾಂಕಿಂಗ್, UPI ಸೇವೆಗಳು ಇಂದು ಲಭ್ಯವಿಲ್ಲ!


ಬೆಂಗಳೂರಿನಲ್ಲಿ  ಪೆಟ್ರೋಲ್ ಬೆಲೆ ಶತಕದ ಅಂಚಿನಲ್ಲಿದೆ. 99.33 ರೂಪಾಯಿ ಪ್ರತಿ ಲೀಟರಿಗೆ ಬೆಲೆ (Petrol price in bengaluru) ನಿಗದಿಯಾಗಿದೆ. ಇದೇ ವೇಳೆ ಡೀಸೆಲ್ ಪ್ರತಿ ಲೀಟರಿಗೆ 92.21 ರೂಪಾಯಿ ಆಗಿದೆ. ಮೈಸೂರಿನಲ್ಲಿ ಡೀಸೆಲ್ ಬೆಲೆ 91.81 ರೂಪಾಯಿ ಆಗಿದೆ. ಇದೇ ವೇಳೆ ಪೆಟ್ರೋಲ್ ಪ್ರತಿ ಲೀಟರಿಗೆ 98.89 ರೂಪಾಯಿ ಆಗಿದೆ. ಮಂಗಳೂರಿನಲ್ಲಿ ಪೆಟ್ರೋಲ್ 98.53 ರೂಪಾಯಿ, ಡೀಸೆಲ್ 91.2 ರೂಪಾಯಿ ಆಗಿದೆ. ಹುಬ್ಳಿ - ಧಾರಾವಾಡದಲ್ಲಿ ಡೀಸೆಲ್ ಬೆಲೆ 91.86 ರೂಪಾಯಿ, ಜೊತೆಗೆ 99.18 ರೂಪಾಯಿ ಪೆಟ್ರೋಲ್ ಪ್ರತಿ ಲೀಟರಿಗೆ ಮಾರಾಟವಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.