ನವದೆಹಲಿ : ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಾಗ ಫ್ರೀ ಲಿಮಿಟ್ ಮುಗಿದ ನಂತರ, ಎಟಿಎಂ ಶುಲ್ಕವನ್ನು (ATM Charge) ಹೆಚ್ಚಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್, (RBI) ಬ್ಯಾಂಕುಗಳಿಗೆ ಅವಕಾಶ ನೀಡಿದೆ. ಬ್ಯಾಂಕುಗಳ ಮೇಲೆ ಹೆಚ್ಚುತ್ತಿರುವ ಹೊರೆಯ ಹಿನ್ನೆಲೆಯಲ್ಲಿ, ಎಟಿಎಂ ವಹಿವಾಟಿನ ಶುಲ್ಕವನ್ನು ಹೆಚ್ಚಿಸಲು ಆರ್‌ಬಿಐ ಅನುಮತಿ ನೀಡಿದೆ. ಉಚಿತ ಮಿತಿ ಮುಗಿದ ನಂತರ ಎಟಿಎಂನಿಂದ (ATM) ಹಣವನ್ನು ವಿತ್ ಡ್ರಾ ಮಾಡುವುದು ಇನ್ನು ದುಬಾರಿಯಾಗಲಿದೆ. ಹೀಗಿರುವಾಗ ಕೆಲ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅನ್ ಲಿಮಿಟೆಡ್ ಕ್ಯಾಶ್ ವಿತ್ ಡ್ರಾವಲ್ ಸೌಲಭ್ಯ ಒದಗಿಸುತ್ತಿದೆ.
ಅನಿಯಮಿತ ಉಚಿತ ವಹಿವಾಟುಗಳು (Unlimited free transaction) :
ಆಗಸ್ಟ್ ಒಂದರಿಂದ ಬ್ಯಾಂಕುಗಳು ತಮ್ಮ ಎಟಿಎಂ ಶುಲ್ಕವನ್ನು (ATM Charge) ಹೆಚ್ಚಿಸಲಿವೆ. ಪ್ರಸ್ತುತ ನಿಯಮಗಳ ಪ್ರಕಾರ, ದೇಶದ ಹೆಚ್ಚಿನ ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು ನಗರ ಮತ್ತು ಪಟ್ಟಣಗಳಲ್ಲಿ 3 ರಿಂದ 5 ಉಚಿತ ಎಟಿಎಂ ವಹಿವಾಟನ್ನು ಒದಗಿಸುತ್ತವೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ, ಬ್ಯಾಂಕುಗಳು ಗರಿಷ್ಠ 5 ಉಚಿತ ಎಟಿಎಂ ವಹಿವಾಟುಗಳಿಗೆ ಅನುಮತಿ ನೀಡುತ್ತವೆ. ಇದೀಗ ಕೆಲ ಬ್ಯಾಂಕುಗಳು ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲದೆ ಹಣ ವಿತ್ ಡ್ರಾ ಮಾಡುವ ಅವಕಾಶವನ್ನು ನೀಡುತ್ತಿವೆ, ಆ ಬ್ಯಾಂಕುಗಳೆಂದರೆ, ಇಂಡಸ್‌ಇಂಡ್ ಬ್ಯಾಂಕ್ (IndusInd Bank) , ಐಡಿಬಿಐ ಬ್ಯಾಂಕ್ (IDBI Bank) ಮತ್ತು ಸಿಟಿ ಬ್ಯಾಂಕ್ (Citi Bank).
ಇದನ್ನೂ ಓದಿ : ATM New Charges- ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಇನ್ನು ದುಬಾರಿ, ನೀವು ಎಷ್ಟು ಪಾವತಿಸಬೇಕಾಗುತ್ತೆ ತಿಳಿಯಿರಿ
ಎಷ್ಟು ಹೆಚ್ಚಳವಾಗಲಿದೆ ಶುಲ್ಕ ?:
ನಗದು ವಿತ್ ಡ್ರಾ ಶುಲ್ಕವನ್ನು ಈಗ 20 ರಿಂದ 21 ರೂಗಳಿಗೆ ಹೆಚ್ಚಿಸಲಾಗಿದೆ. ಅಂತೆಯೇ, ಇಂಟರ್ಚೇಂಜ್ ಚಾರ್ಜ್ (interchange charge) ಅನ್ನು 16 ರ ಬದಲು 17 ರೂಗಳಿಗೆ ಹೆಚ್ಚಿಸಲು ಆರ್‌ಬಿಐ (RBI) ಬ್ಯಾಂಕುಗಳಿಗೆ ಅವಕಾಶ ನೀಡಿದೆ. ಹಣಕಾಸೇತರ ವಹಿವಾಟು ಎಟಿಎಂ ಶುಲ್ಕವನ್ನು 5 ರೂ.ಗಳಿಂದ 6 ರೂ.ಗೆ ಹೆಚ್ಚಿಸಲಾಗಿದೆ.
ನೀವು ಐಡಿಬಿಐ (IDBI) ಗ್ರಾಹಕರಾಗಿದ್ದರೆ, ಬ್ಯಾಂಕ್ ತನ್ನ ಎಟಿಎಂಗಳಲ್ಲಿ ಉಚಿತ ಅನಿಯಮಿತ ವಹಿವಾಟುಗಳನ್ನು ನಡೆಸಲು ಅವಕಾಶ ನೀಡುತ್ತದೆ. ಇನ್ನು ಇಂಡಸ್ಇಂಡ್ ಬ್ಯಾಂಕ್ (IndusInd Bank), ಭಾರತದ ಯಾವುದೇ ಬ್ಯಾಂಕಿನ ಎಟಿಎಂನಲ್ಲಿ ಅನಿಯಮಿತ ಉಚಿತ ಎಟಿಎಂ ವಹಿವಾಟುಗಳನ್ನು ನಡೆಸಲು ಅನುಮತಿಸುತ್ತದೆ. ಬ್ಯಾಂಕಿನ ವೆಬ್‌ಸೈಟ್ ಪ್ರಕಾರ, ದೇಶದ ಯಾವುದೇ ಎಟಿಎಂನಲ್ಲಿ (ATM) ಇಂಡಸ್ಇಂಡ್ ಬ್ಯಾಂಕ್ ಡೆಬಿಟ್ ಕಾರ್ಡ್‌ನೊಂದಿಗೆ ಅನಿಯಮಿತ ಉಚಿತ ಎಟಿಎಂ ವ್ಯವಹಾರ ನಡೆಸಬಹುದು.
ಇದನ್ನೂ ಓದಿ : PF Interest : ನೀವು ಕೆಲಸ ಬಿಟ್ಟ ಮೇಲೆ 'PF ಖಾತೆ'ಗೆ ಎಷ್ಟು ದಿನಗಳವರೆಗೆ ಬಡ್ಡಿ ಬರುತ್ತೆ ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.