ನವದೆಹಲಿ : EPFO News: ಉಳಿತಾಯ ಖಾತೆಯಿರಲಿ, ಸ್ಥಿರ ಠೇವಣಿ ಅಥವಾ ಬ್ಯಾಂಕ್ ಲಾಕರ್ ಆಗಿರಲಿ, ಎಲ್ಲದಕ್ಕೂ  ನಾಮಿನಿಯನ್ನು ಮಾಡುವುದು ಅವಶ್ಯಕ. ಇಲ್ಲದಿದ್ದರೆ, ಕಷ್ಟದ ಸಂದರ್ಭಗಳಲ್ಲಿಯೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ, ಉದ್ಯೋಗಿಗಳ ಭವಿಷ್ಯ ನಿಧಿ ಖಾತೆದಾರರು  (EPF) ನಾಮಿನಿಯನ್ನು ಮಾಡಬೇಕಾಗುತ್ತದೆ. ಇಪಿಎಫ್ಒ ಸದಸ್ಯರ ಅಕಾಲಿಕ ಮರಣಹೊಂದಿದರೆ, ಆ ಸಂದರ್ಭದಲ್ಲಿ, ಈ ನಿಧಿಯನ್ನು ಸರಿಯಾದ ಸಮಯಕ್ಕೆ ನಾಮಿನಿಗೆ ಲಭ್ಯವಾಗುವಂತೆ ಮಾಡಬಹುದು. 


COMMERCIAL BREAK
SCROLL TO CONTINUE READING

7 ಲಕ್ಷ ರೂ.ಗಳ ಸೌಲಭ್ಯ ಪಡೆಯಿರಿ  : 


EPFO ಸದಸ್ಯರು, ಎಂಪ್ಲಾಯಿಸ್ ಡಿಪೋಸಿಟ್  ಲಿಂಕ್ಡ್ ವಿಮಾ ಯೋಜನೆ (EDLI) ಅಡಿಯಲ್ಲಿ ವಿಮಾ ರಕ್ಷಣೆಯ ಸೌಲಭ್ಯವನ್ನು ಪಡೆಯುತ್ತಾರೆ. ಯೋಜನೆಯಲ್ಲಿ ನಾಮಿನಿಗೆ ಗರಿಷ್ಠ 7 ಲಕ್ಷ ರೂ.ಗಳ ಇನ್ಸೂರೆನ್ಸ್ ಕವರ್ (Insuramnce cover) ನೀಡಲಾಗುತ್ತದೆ. ಒಂದು ವೇಳೆ,  ಯಾವುದೇ ನಾಮಿನಿಯನ್ನು ಮಾಡದೇ ಹೋದರೆ, ಈ ಹಣವನ್ನು ಕ್ಲೈಮ್ ಮಾಡಿಕೊಳ್ಳುವ ಪ್ರಕ್ರಿಯೆ  ಕಷ್ಟವಾಗುತ್ತದೆ. 


ಇದನ್ನೂ ಓದಿ : Gold Price Today : ಹತ್ತು ಸಾವಿರದಷ್ಟು ಅಗ್ಗವಾಯಿತು ಚಿನ್ನದ ಬೆಲೆ , ಇಂದಿನ ದರಕ್ಕಾಗಿ ಇಲ್ಲಿ ಚೆಕ್ ಮಾಡಿ


ಆನ್‌ಲೈನ್ ಮಾಧ್ಯಮದ ಮೂಲಕ ವಿವರಗಳನ್ನು ಹೇಗೆ ತುಂಬುವುದು ?
ಇ-ನಾಮಿನೇಷನ್ ಸೌಲಭ್ಯವೂ ಆರಂಭ : 
ನಾಮಿನಿಯ ಮಾಹಿತಿ ನೀಡಲು ಇಪಿಎಫ್‌ಒ ಈಗ ಇ-ನಾಮಿನೇಷನ್ ಸೌಲಭ್ಯವನ್ನು  ಆರಂಭಿಸಿದೆ. ನಾಮಿನಿಯನ್ನು ಹಾಕಿರದವರು ಈ ಮೂಲಕ ನಾಮಿನಿಯನ್ನು (Nominee) ಹಾಕಬಹುದಾಗಿದೆ. ಇದರ ನಂತರ, ನಾಮಿನಿಯ ಹೆಸರು, ಹುಟ್ಟಿದ ದಿನಾಂಕದಂತಹ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ.


ಇಪಿಎಫ್/ಇಪಿಎಸ್ ನಲ್ಲಿ ಇ-ನಾಮಿನೇಷನ್ ಮಾಡುವುದು ಹೇಗೆ ? 
1.ಇಪಿಎಫ್‌ಒ ವೆಬ್‌ಸೈಟ್‌ಗೆ ಹೋಗಿ ಸರ್ವಿಸ್ ಸೆಕ್ಷನ್ ನಲ್ಲಿ  ಫಾರ್ ಎಂಪ್ಲಾಯೀಸ್  ಕ್ಲಿಕ್ ಮಾಡಿ.
2.ಈಗ  UAN/ಆನ್ಲೈನ್ ​​ಸೇವೆ (OCS/OTCP)' ಮೇಲೆ ಕ್ಲಿಕ್ ಮಾಡಿ.
3.ಈಗ UAN ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
'4.ಇ-ನಾಮಿನೇಷನ್' ಆಯ್ಕೆಮಾಡಿ.
5.ಅದರ ನಂತರ ವಿವರಗಳನ್ನು ಒದಗಿಸುವಂತೆ ಕೇಳಲಾಗುತ್ತದೆ. ಇಲ್ಲಿ ವಿವರಗಳನ್ನು ಭರ್ತಿ   ಮಾಡಿ ಸೇವ್ ಕೊಡಿ. 
6. ಕುಟುಂಬದ ಮಾಹಿತಿಯನ್ನು ಅಪ್ಡೇಟ್ ಮಾಡಲು "ಎಸ್" ಮೇಲೆ ಕ್ಲಿಕ್ ಮಾಡಿ.
7. ಈಗ Add Family Details ಮೇಲೆ ಕ್ಲಿಕ್ ಮಾಡಿ. ಒಂದಕ್ಕಿಂತ ಹೆಚ್ಚು ನಾಮಿನಿಯನ್ನು ಕೂಡ ಸೇರಿಸಬಹುದು.
8. ನಾಮಿನಿ ಹಂಚಿಕೊಳ್ಳುವ ಮೊತ್ತವನ್ನು ಘೋಷಿಸಲು Enrollment details' ಮೇಲೆ ಕ್ಲಿಕ್ ಮಾಡಿ. ವಿವರಗಳನ್ನು ನಮೂದಿಸಿದ ನಂತರ, 'Save EPF Enrollment' ಮೇಲೆ ಕ್ಲಿಕ್ ಮಾಡಿ.
9. ಒಟಿಪಿ ಜನರೆಟ್ ಮಾಡಲು 'ಇ-ಸೈನ್' ಮೇಲೆ ಕ್ಲಿಕ್ ಮಾಡಿ. ಆಧಾರ್ ಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.
10. ಒಟಿಪಿಯನ್ನು ನಿರ್ದಿಷ್ಟ ಜಾಗದಲ್ಲಿ ನಮೂದಿಸಿ ಸಬ್ಮಿಟ್ ಮಾಡಿ. 

 


ಇದನ್ನೂ ಓದಿ  :Aadhaar Update: ಆಧಾರ್‌ನಲ್ಲಿ ವಿಳಾಸ ನವೀಕರಿಸಲು ಈ ಸೌಲಭ್ಯ ಸ್ಥಗಿತಗೊಳಿಸಿದ UIDAI


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ