ನವದೆಹಲಿ: ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ಯ 12ನೇ ಕಂತು ಇನ್ನೂ ಹಲವು ರೈತರ ಖಾತೆಗೆ ಬಂದಿಲ್ಲ. ಪ್ರಧಾನಿ ಮೋದಿ ದೇಶದ ಕೋಟ್ಯಂತರ ರೈತರ ಖಾತೆಗೆ 2000 ರೂ. ಕಂತು ವರ್ಗಾಯಿಸಿದ್ದಾರೆ, ಆದರೆ ಇನ್ನೂ ಅನೇಕ ರೈತರು ಈ ಹಣವನ್ನು ಸ್ವೀಕರಿಸಿಲ್ಲ. ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದಾದರೆ ಅದಕ್ಕೆ ಕಾರಣವೇನು ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಈ ಕಾರಣದಿಂದ ಹಣ ಬಂದಿರುವುದಿಲ್ಲ


ಇಕೆವೈಸಿ ಮಾಡದ ರೈತರ ಖಾತೆಗಳಿಗೆ ಹಣ ತಲುಪಿರುವುದಿಲ್ಲ. ಇದಲ್ಲದೆ ಜಮೀನಿನ ದಾಖಲೆಗಳಲ್ಲಿ ಏನಾದರೂ ಸಮಸ್ಯೆಯಾಗಿದ್ದರೆ ರೈತರು ಇಕೆವೈಸಿ ಮಾಡಿಸಿದರೂ ಹಣ ಬಂದಿರುವುದಿಲ್ಲ.     


ವಂಚನೆ ತಡೆಯಲು ಸರ್ಕಾರ ಕ್ರಮ


ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನಡೆಯುತ್ತಿರುವ ವಂಚನೆ ತಡೆಯಲು ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ದೇಶದ ಲಕ್ಷಾಂತರ ಅನರ್ಹರು ಸರ್ಕಾರದ ಈ ಯೋಜನೆಯ ಲಾಭ ಪಡೆಯುತ್ತಿದ್ದರು. ಇದನ್ನು ತಡೆಗಟ್ಟಲು ಸರ್ಕಾರದಿಂದ eKYC ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.


ಇದನ್ನೂ ಓದಿ: ಕಾರು ಖರೀದಿ ವೇಳೆ ಮಾಡುವ ಈ ತಪ್ಪಿನಿಂದ ಜೇಬಿಗೆ ಬೀಳುವುದು ಕತ್ತರಿ


ಈ ರೀತಿ ಪರಿಶೀಲಿಸಿ


ಮೊದಲು PM ಕಿಸಾನ್ ಪೋರ್ಟಲ್‌ https://pmkisan.gov.in/  ಹೋಗಬೇಕು. ಇದರ ನಂತರ ನೀವು Beneficiary Status (https://pmkisan.gov.in/BeneficiaryStatus.aspx ) ಮೇಲೆ ಕ್ಲಿಕ್ ಮಾಡಬೇಕು. ಈಗ ಇಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ಕ್ಯಾಪ್ಚಾವನ್ನು ಭರ್ತಿ ಮಾಡಿ ಮತ್ತು Submit ಮಾಡಿ.


ನ.30ರೊಳಗೆ ಖಾತೆಗೆ  ಹಣ ಬರುತ್ತದೆ


ಪಿಎಂ ಕಿಸಾನ್ 12ನೇ ಕಂತಿನ ಹಣವು ನವೆಂಬರ್ 30ರವರೆಗೂ ರೈತರ ಖಾತೆಗಳಿಗೆ ಬರುತ್ತದೆ. ಇಕೆವೈಸಿ ಸೇರಿದಂತೆ ಜಮೀನು ದಾಖಲೆಗಳಲ್ಲಿ ಏನಾದರೂ ತಿದ್ದುಪಡಿ ದೋಷಗಳಿದ್ದಲ್ಲಿ ಆದಷ್ಟು ಬೇಗ ಸರಿಪಡಿಸಬೇಕು. ನೀವು ಎಷ್ಟು ಬೇಗ ತಪ್ಪುಗಳನ್ನು ಸರಿಪಡಿಸುತ್ತಿರೋ ಅಷ್ಟು ಬೇಗ ನಿಮ್ಮ ಖಾತೆಗೆ ಹಣ ಬರುತ್ತದೆ.  ಹತ್ತಿರದ ಕೃಷಿ ಕೇಂದ್ರದಲ್ಲಿ ಸಹ ನಿಮ್ಮ  ದಾಖಲೆಗಳನ್ನು ನವೀಕರಿಸಬಹುದು.


ಅ.17ರಂದು ಹಣ ವರ್ಗಾಯಿಸಲಾಗಿದೆ


ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ ಪ್ರಾರಂಭಿಸಿದೆ. ಇಲ್ಲಿಯವರೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ.ಗಳನ್ನು ದೇಶದಾದ್ಯಂತ 2 ಲಕ್ಷ ಕೋಟಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಪ್ರಧಾನಿ ಮೋದಿ ಅಕ್ಟೋಬರ್ 17ರಂದು ರೈತರ ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ.


ಇದನ್ನೂ ಓದಿ: ಹಬ್ಬದ ವೇಳೆ ಚಿನ್ನದ ಬೆಲೆಯಲ್ಲಿ ಇಳಿಕೆ ! ದಾಖಲೆ ಮಟ್ಟದಲ್ಲಿ ಕುಸಿಯಿತು ಬಂಗಾರದ ಬೆಲೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ