ನವದೆಹಲಿ: PM Kisan 9th Installment Update: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ 9 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ ರೈತರು. ಪಿಎಂ ಕಿಸಾನ್ ಯೋಜನೆ ಅನ್ವಯ, ಸರ್ಕಾರ ರೈತರಿಗೆ ಮೂರು ಕಂತುಗಳಲ್ಲಿ 2,000 ರೂ.ಗಳನ್ನು ನೀಡುತ್ತಿದೆ. ಅಂದರೆ ವಾರ್ಷಿಕವಾಗಿ 6000 ರೂಗಳು ನೇರವಾಗಿ ರೈತರ ಖಾತೆಗೆ ಬಂದು ಸೇರುತ್ತದೆ. ಈಗಾಗಲೇ  ಯೋಜನೆಯ 8 ಕಂತುಗಳನ್ನು ರೈತರು ಸ್ವೀಕರಿಸಿದ್ದಾರೆ. 


COMMERCIAL BREAK
SCROLL TO CONTINUE READING

ನಿಮ್ಮ ಸ್ಟೇಟಸ್ ಪರಿಶೀಲಿಸಿಕೊಳ್ಳಿ : 
ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ರೈತರಿಗೆ ನೇರವಾಗಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸರ್ಕಾರದ ಈ ಯೋಜನೆಯನ್ನು ಆರಂಭಿಸಿದೆ.  ನೀವು ಕೂಡಾ ಪಿಎಂ ಕಿಸಾನ್ (PM Kisan) ಯೋಜನೆಯಡಿ ನೋಂದಾಯಿಸಿಕೊಂಡಿದ್ದರೆ, ನಿಮ್ಮ ಹೆಸರು  ಫಲಾನುಭವಿಗಳ ಪಟ್ಟಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು. ಇಲ್ಲಿ ನೀಡಿರುವ ಪ್ರಕ್ರಿಯೆಯ ಮೂಲಕ, ಪರಿಶೀಲಿಸಬಹುದು.


ಇದನ್ನೂ ಓದಿ : Aadhaar Update: ಆಧಾರ್ ಕಾರ್ಡ್‌ನಲ್ಲಿರುವ ಚಿತ್ರ ಇಷ್ಟವಾಗುತ್ತಿಲ್ಲವೇ? ಅದನ್ನು ಈ ರೀತಿ ಬದಲಾಯಿಸಿ


 ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿಯಲ್ಲಿ ಪರಿಶೀಲಿಸಿ :
1. ಹೆಸರನ್ನು ಪರಿಶೀಲಿಸಲು, ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ https://pmkisan.gov.in.ಗೆ ಹೋಗಬೇಕು 
2. ಈಗ ಅದರ ಹೊಂ ಪೇಜ್ ನಲ್ಲಿ   Farmers Corner ಆಯ್ಕೆ ಕಾಣಿಸುತ್ತದೆ. 
3.  Farmers Corner ವಿಭಾಗದೊಳಗೆ, Beneficiaries List ಆಯ್ಕೆಯನ್ನು ಕ್ಲಿಕ್ ಮಾಡಿ.
4. ಈಗ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
5. ಇದರ ನಂತರ Get Report ಕ್ಲಿಕ್ ಮಾಡಿ.
6. ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸುತ್ತದೆ, ಇದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.


2 ಕೋಟಿಗೂ ಹೆಚ್ಚು ರೈತರ ಅರ್ಜಿಗಳಲ್ಲಿ ತಪ್ಪು:
ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ (Pm Kisan Yojana) 20 ಜುಲೈ 2021 ರವರೆಗೆ 12.30 ಕೋಟಿ ಜನರ ಅರ್ಜಿಗಳು ಬಂದಿವೆ. ಆದರೆ ಈ ಪೈಕಿ 2.77 ಕೋಟಿ ರೈತರ ಅರ್ಜಿಗಳಲ್ಲಿ ತಪ್ಪುಗಳಿವೆ. ಈ ತಪ್ಪುಗಳನ್ನು ಸರಿಪಡಿಸಬೇಕಾಗಿದೆ. ಇದಲ್ಲದೆ, ಸುಮಾರು 27.50 ಲಕ್ಷ ರೈತರ ಟ್ರಾನ್ಸಕ್ಶನ್  ವಿಫಲವಾಗಿದೆ. ಇನ್ನು 31.63 ಲಕ್ಷ ರೈತರ ಅರ್ಜಿಗಳನ್ನು ಮೊದಲ ಹಂತದಲ್ಲಿಯೇ ರದ್ದುಪಡಿಸಲಾಗಿದೆ. ಉತ್ತರ ಪ್ರದೇಶದ 2.84 ಕೋಟಿ ರೈತರ (Farmers) ಡೇಟಾ ತಿದ್ದುಪಡಿ ಮಾಡಬೇಕಾಗಿಲ್ಲ. ಜಾರ್ಖಂಡ್, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ (Karnataka) ಅಂತಹ ರೈತರ ಸಂಖ್ಯೆ ಇನ್ನೂ ಹೆಚ್ಚಾಗಿದೆ.


ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ, DA ಬಳಿಕ ಇದೀಗ ಈ ಭತ್ಯೆಯಲ್ಲೂ ಹೆಚ್ಚಳ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ