PM Kisan Yojana : ಒಂದೇ ಸಲ ಎರಡು ಕಂತಿನ ಹಣ ಪಡೆಯಲು ಶೀಘ್ರವೇ ಈ ಕೆಲಸ ಮಾಡಿ

PM Kisan Samman Yojana: ಕರೋನಾ ಸಾಂಕ್ರಾಮಿಕ ರೋಗದ ಮಧ್ಯೆಯೇ, ಭಾರತ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಎಂಟನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾಯಿಸಿದೆ. ಆದರೆ ಇನ್ನೂ ಅನೇಕ ರೈತರು ಈ ಯೋಜನೆಗೆ ತಮ್ಮನ್ನು ನೋಂದಾಯಿಸಿಕೊಂಡಿಲ್ಲ.  ಯೋಜನೆಯ ದ್ವಿಗುಣ ಲಾಭವನ್ನು ಪಡೆಯಲು ಬಯಸುವುದಾದರೆ ಜೂನ್ 30 ರೊಳಗೆ ಈ ಯೋಜನೆಯಡಿಯಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ.

Written by - Ranjitha R K | Last Updated : Jun 9, 2021, 02:20 PM IST
  • ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಲು ನೋಂದಾವಣಿ ಅಗತ್ಯ
  • ಜೂನ್ 30ರೊಳಗೆ ನೋಂದಾಯಿಸುವ ರೈತರಿಗೆ ಸಿಗಲಿದೆ ದುಪ್ಪಟ್ಟು ಲಾಭ
  • 8 ಕಂತಿನ ಹಣವನ್ನೂ ಕೂಡಾ ಜುಲೈ ತಿಂಗಳಲ್ಲಿ ವರ್ಗಾಯಿಸಲಾಗುವುದು
PM Kisan Yojana : ಒಂದೇ ಸಲ ಎರಡು ಕಂತಿನ ಹಣ ಪಡೆಯಲು ಶೀಘ್ರವೇ ಈ ಕೆಲಸ ಮಾಡಿ title=
ಜೂನ್ 30ರೊಳಗೆ ನೋಂದಾಯಿಸುವ ರೈತರಿಗೆ ಸಿಗಲಿದೆ ದುಪ್ಪಟ್ಟು ಲಾಭ (file photo india.com)

ನವದೆಹಲಿ : PM Kisan Samman Yojana: ಕರೋನಾ ಸಾಂಕ್ರಾಮಿಕ (Coronavirus) ರೋಗದ ಮಧ್ಯೆಯೇ, ಭಾರತ ಸರ್ಕಾರ ಪಿಎಂ ಕಿಸಾನ್ ಯೋಜನೆಯ (PM Kisan Yojna) ಎಂಟನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾಯಿಸಿದೆ. ಆದರೆ ಇನ್ನೂ ಅನೇಕ ರೈತರು ಈ ಯೋಜನೆಗೆ ತಮ್ಮನ್ನು ನೋಂದಾಯಿಸಿಕೊಂಡಿಲ್ಲ. ಹಾಗಾಗಿ  ರೈತರಿಗೆ ಯೋಜನೆಯ ಲಾಭ ಪಡೆಯುವುದು ಸಾಧ್ಯವಾಗುತ್ತಿಲ್ಲ. ಯೋಜನೆಯ ದ್ವಿಗುಣ ಲಾಭವನ್ನು ಪಡೆಯಲು ಬಯಸುವುದಾದರೆ ಜೂನ್ 30 ರೊಳಗೆ ಈ ಯೋಜನೆಯಡಿಯಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ. ಹಾಗದರೆ ಮಾತ್ರ ಮುಂದಿನ ಕಂತಿನ ಹಣ ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ. 

ಜೂನ್ 30ರೊಳಗೆ ನೋಂದಾಯಿಸಿಕೊಳ್ಳಿ : 
ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ (PM Kisan Samman Yojana) ನೋಂದಾಯಿಸಿಕೊಳ್ಳುವ ಲ್ಲಾ ಅರ್ಹತೆಯಿದ್ದರೆ, ತಕ್ಷಣ ನಿಮ್ಮನ್ನು ಈ ಯೋಜನೆಯಡಿ ನೋಂದಾಯಿಸಿಕೊಳ್ಳಿ. ಜೂನ್ 30ರೊಳಗೆ ಈ ಯೋಜನೆಯಡಿ ನೊಂದಾಯಿಸಿಕೊಂಡರೆ, ನಿಮ್ಮ ಖಾತೆಗೆ 4,000 ರೂಪಾಯಿಗಳು, ಜಮೆಯಾಗುತ್ತದೆ. ಅಂದರೆ ಎಂಟನೇ ಮತ್ತು ಒಂಬತ್ತನೇ ಕಂತಿನ ಹಣವನ್ನು ಒಟ್ಟಿಗೆ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ. ಇಲ್ಲಿಯವರೆಗೆ ಯಾವ ರೈತರಿಗೆ (Farmers) ಒಂದು ಕಂತಿನ ಹಣವೂ ಬಂದಿಲ್ಲ  ರೈತರಿಗೆ ಮಾತ್ರ  ಈ ಲಾಭ ಸಿಗಲಿದೆ. ಆದರೆ ಯೋಜನೆಯಡಿ ನೀವು ನೋಂದಾಯಿಸಿಕೊಂಡಿರದಿದ್ದರೆ ಈ ಲಾಭದಿಂದ ವಂಚಿತರಾಗುತ್ತೀರಿ. 

ಇದನ್ನೂ ಓದಿ : Post Office: ಪೋಸ್ಟ್ ಆಫೀಸ್‌ನೊಂದಿಗೆ ಕೇವಲ ₹5000 ಹೂಡಿಕೆ ಮಾಡಿ ಬುಸಿನೆಸ್ಸ್ ಪ್ರಾರಂಭಿಸಿ

3 ಕಂತುಗಳಲ್ಲಿ ಸಿಗಲಿದೆ 6 ಸಾವಿರ ರೂ. :
ಪ್ರಧಾನಿ ಕಿಸಾನ್ ಸಮ್ಮನ್ ನಿಧಿ (PM Kisan) ಅಡಿಯಲ್ಲಿ ಕೇಂದ್ರ ಸರ್ಕಾರ  2 ಸಾವಿರ ರೂಪಾಯಿಗಳಂತೆ, 3 ಕಂತುಗಳಲ್ಲಿ ರೈತರ ಖಾತೆಗೆ ಹಣ ವರ್ಗಾಯಿಸುತ್ತದೆ. ಇಲ್ಲಿಯವರೆಗೆ ಸರ್ಕಾರ ಟ್ಟು 8 ಕಂತುಗಳ ಹಣವನ್ನು ರೈತರ ಖಾತೆಗೆ ವರ್ಗಾಯಿಸಿದೆ.  ಈ ಯೋಜನೆಯಲ್ಲಿ ನೋಂದಣಿ ಮಾಡಬೇಕಾದರೆ, ರೈತರು ಮೊದಲು ಪಿಎಂ ಕಿಸಾನ್ ಸಮ್ಮನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ pmkisan.gov.in ಗೆ ಭೇಟಿ ನೀಡಬೇಕಾಗುತ್ತದೆ.

ಯಾವಾಗ ಬರಲಿದೆ ಮುಂದಿನ ಕಂತು ? : 
ಜೂನ್ 30 ರೊಳಗೆ ಈ ಯೋಜನೆಯಡಿ ನೋಂದಾಯಿಸಿಕೊಂಡ ರೈತರ ಖಾತೆಗೆ ಎಂಟನೇ ಕಂತಿನ ಹಣವನ್ನು ಜುಲೈ ತಿಂಗಳಲ್ಲಿ ವರ್ಗಾಯಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಆಗಸ್ಟ್ ತಿಂಗಳಲ್ಲಿ ಸರ್ಕಾರ ಪಾವತಿಸುತ್ತದೆ.

ಇದನ್ನೂ ಓದಿ Bank privatization : ಎರಡು ಬ್ಯಾಂಕುಗಳ ಖಾಸಗೀಕರಣ ..! ನೌಕರರಿಗಾಗಿ ಸಿದ್ದವಾಗುತ್ತಿದೆ ವಿಆರ್ ಎಸ್ ಪ್ಲಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News