ನವದೆಹಲಿ: Aadhaar Card Update- ಆಗಾಗ್ಗೆ ಜನರು ತಮ್ಮ ಆಧಾರ್ ಕಾರ್ಡ್‌ನ ಫೋಟೋ ಚೆನ್ನಾಗಿಲ್ಲ ಎಂದು ದೂರುತ್ತಾರೆ. ನಿಮಗೂ ಕೂಡ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಇಷ್ಟವಾಗುತ್ತಿಲ್ಲವೇ? ಅದಕ್ಕೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಆಧಾರ್ ಕಾರ್ಡ್‌ನ ಚಿತ್ರವನ್ನು ಸುಲಭವಾಗಿ ಬದಲಾಯಿಸಬಹುದು.
ನಿಮ್ಮ ಇತ್ತೀಚಿನ ಚಿತ್ರವನ್ನು ಆಧಾರ್ ಕಾರ್ಡ್‌ನಲ್ಲಿ ಪಡೆಯಲು ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸುವ ಪ್ರಕ್ರಿಯೆ ತುಂಬಾ ಸರಳವಾಗಿದೆ. ಇದನ್ನು ಯಾರಾದರೂ ಸುಲಭವಾಗಿ ಮಾಡಬಹುದು. ಈ ಕೆಲಸಕ್ಕಾಗಿ ನಿಮಗೆ ಯಾವುದೇ ರೀತಿಯ ದಾಖಲೆಗಳ ಅಗತ್ಯವಿರುವುದಿಲ್ಲ. ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಕೆಲವೇ ನಿಮಿಷಗಳಲ್ಲಿ ಆಧಾರ್ ಕಾರ್ಡ್‌ನಲ್ಲಿ (Aadhaar Card) ಹೊಸ ಫೋಟೋವನ್ನು ನವೀಕರಿಸಬಹುದು. ಆದರೆ ಇದಕ್ಕಾಗಿ ಯಾವುದೇ ಆನ್‌ಲೈನ್ ಮಾರ್ಗವಿಲ್ಲ.
ಇದನ್ನೂ ಓದಿ- Fake Aadhaar Card: ನಿಮ್ಮ ಆಧಾರ್ ಕಾರ್ಡ್ ಅಸಲಿಯೇ/ನಕಲಿಯೇ? ಈ ರೀತಿ ಪರಿಶೀಲಿಸಿ
ಫೋಟೋವನ್ನು ಬದಲಾಯಿಸುವ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಿರಿ:
ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಲು ಇಚ್ಚಿಸುವವರು ನೀವು ಆಧಾರ್ ದಾಖಲಾತಿ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಈ ಕೆಲಸಕ್ಕಾಗಿ ನಿಮಗೆ ಶುಲ್ಕ ವಿಧಿಸಲಾಗುತ್ತದೆ. ಶುಲ್ಕ ಪ್ರಕ್ರಿಯೆ ಪೂರ್ಣಗೊಂಡ ನಂತರ, ಅವರು ಮತ್ತೊಮ್ಮೆ ನಿಮ್ಮ ಚಿತ್ರವನ್ನು ಕ್ಲಿಕ್ ಮಾಡುತ್ತಾರೆ. ಇದರ ನಂತರ, ಅವರು ನಿಮ್ಮ ಹೊಸ ಚಿತ್ರವನ್ನು ಆಧಾರ್ ಕಾರ್ಡ್‌ನಲ್ಲಿ ಅಪ್ಡೇಟ್ ಮಾಡುತ್ತಾರೆ. ಈ ಪ್ರಕ್ರಿಯೆಗೆ ನೀವು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಈ ಫಾರ್ಮ್ ಯುಐಡಿಎಐನ (UIDAI) ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮಗೆ ಸುಲಭವಾಗಿ ಲಭ್ಯವಿರುತ್ತದೆ.
ಇದನ್ನೂ ಓದಿ- Aadhaar: ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲವೇ? ಈ ರೀತಿ ಪರಿಶೀಲಿಸಿ
ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಾಯಿಸಲು ಈ ಕೆಲಸವನ್ನು ಮಾಡಬೇಕಾಗುತ್ತದೆ:
ಒಂದೊಮ್ಮೆ ನೀವು ಆಧಾರ್‌ನಲ್ಲಿ ನೀಡಿರುವ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಇದಕ್ಕಾಗಿ ಯುಐಡಿಎಐ ಕೆಲವು ಮಾರ್ಗಸೂಚಿಗಳನ್ನು ಸಹ ನೀಡಿದೆ. ವಿಳಾಸ ಬದಲಾವಣೆಯನ್ನು ಮಾಡಲು ಪಾಸ್ಪೋರ್ಟ್, ಬ್ಯಾಂಕ್ ಸ್ಟೇಟ್ಮೆಂಟ್ / ಪಾಸ್ಬುಕ್, ಪೋಸ್ಟ್ ಆಫೀಸ್ ಖಾತೆ ಹೇಳಿಕೆ / ಪಾಸ್ಬುಕ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಸರ್ಕಾರಿ ಫೋಟೋ ಐಡಿ ಕಾರ್ಡ್ / ಸೇವಾ ಫೋಟೋ ಗುರುತಿನ ಚೀಟಿ ಮುಂತಾದ ವಿಳಾಸದ ಪುರಾವೆ (ಪಿಒಎ) ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿ ಅಗತ್ಯವಿದೆ. ಪಿಎಸ್ಯು ವಿತರಿಸಿದ ವಿದ್ಯುತ್ ಬಿಲ್ (3 ತಿಂಗಳಿಗಿಂತ ಹಳೆಯದಾಗಿರಬಾರದು), ವಾಟರ್ ಬಿಲ್ (3 ತಿಂಗಳಿಗಿಂತ ಹಳೆಯದಾಗಿರಬಾರದು) ಬಳಸಬಹುದು. ಇವುಗಳಲ್ಲಿ ಯಾವುದೇ ದಾಖಲೆಗಳನ್ನು ತೋರಿಸುವ ಮೂಲಕ ನೀವು ವಿಳಾಸವನ್ನು ಬದಲಾಯಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.