PM Kisan: ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಸರ್ಕಾರ, ಖಾತೆಗೆ ಹಣ ಬಂದಿಲ್ಲವೇ ಇಲ್ಲಿ ದೂರು ನೀಡಿ
PM Kisan Samman Nidhi Yojana: ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ www.pmkisan.gov.in ನಲ್ಲಿ ಬಿಡುಗಡೆ ಮಾಡಿದೆ.
ನವದೆಹಲಿ: ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ (PM Kisan Samman Nidhi Yojana) ಯ ಎಂಟನೇ ಕಂತನ್ನು ದೇಶಾದ್ಯಂತ ಕೋಟ್ಯಂತರ ರೈತರ ಖಾತೆಗೆ ಕಳುಹಿಸಲಾಗಿದೆ. Www.pmkisan.gov.in ನಲ್ಲಿ ಸರ್ಕಾರ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಿಎಂ ಕಿಸಾನ್ ಯೋಜನೆಯ 8ನೇ ಪಟ್ಟಿ ಅನ್ನು ಪರಿಶೀಲಿಸಲು ಕಾಯುತ್ತಿದ್ದವರು ಇದರಲ್ಲೀಗ ತಮ್ಮ ಹೆಸರನ್ನು ಪರಿಶೀಲಿಸಬಹುದು.
ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಹೀಗೆ ಪರಿಶೀಲಿಸಿ:
ನೀವೂ ಸಹ ಈ ಯೋಜನೆಯ ಫಲಾನುಭವಿಗಳಾಗಿದ್ದರೆ ಮತ್ತು 8ನೇ ಕಂತಿನಲ್ಲಿ ಬಿಡುಗಡೆ ಮಾಡಲಾಗಿರುವ ಹಣ ನಿಮ್ಮ ಖಾತೆಗೂ ಬರಲಿದೆಯೇ ಎಂಬುದುದನ್ನು ತಿಳಿಯಲು ಸುಲಭವಾಗಿ ಸರ್ಕಾರದ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.
ಇದನ್ನೂ ಓದಿ - PM Kisan ನೋಂದಣಿಯಲ್ಲಿ ತೊಂದರೆಯೇ? ಅದನ್ನ ಮನೆಯಲ್ಲಿಯೇ ಕುಳಿತು ಸರಿಪಡಿಸಿ! ಹೇಗೆ ಇಲ್ಲಿದೆ ನೋಡಿ
1. ಮೊದಲು ಪಿಎಂ ಕಿಸಾನ್ (PM Kisan) ಅವರ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://pmkisan.gov.in/.
2. ಇಲ್ಲಿ ನೀವು ಬಲಭಾಗದಲ್ಲಿ 'ಫಾರ್ಮರ್ಸ್ ಕಾರ್ನರ್' ('Farmers Corner') ಆಯ್ಕೆಯನ್ನು ನೋಡುತ್ತೀರಿ
3. ಇದರಲ್ಲಿ 'ಫಲಾನುಭವಿ ಸ್ಥಿತಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ, ಹೊಸ ಪುಟ ತೆರೆಯುತ್ತದೆ.
4. ಹೊಸ ಪುಟದಲ್ಲಿ, ಆಧಾರ್ (Aadhaar) ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯಿಂದ ಆಯ್ಕೆಗಳಲ್ಲಿ ಒಂದನ್ನು ಆರಿಸಿ. ಈ ಮೂರು ಸಂಖ್ಯೆಗಳ ಮೂಲಕ ನಿಮ್ಮ ಖಾತೆಗೆ ಹಣ ಬರುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬಹುದು.
5. ನೀವು ಆಯ್ಕೆ ಮಾಡಿದ ಆಯ್ಕೆಯ ಸಂಖ್ಯೆಯನ್ನು ಭರ್ತಿ ಮಾಡಿ. ಇದರ ನಂತರ, 'ಡೇಟಾ ಪಡೆಯಿರಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
6. ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ, ನೀವು ಎಲ್ಲಾ ವಹಿವಾಟುಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ. ನಿಮ್ಮ ಖಾತೆಗೆ ಕಂತು ಬಂದಾಗ ಮತ್ತು ಯಾವ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದೂ ಸಹ ಇದರಲ್ಲಿ ತಿಳಿಯಲಿದೆ.
7. ಈ ಸ್ಥಳದಲ್ಲಿ ಎಂಟನೇ ಕಂತಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ನೀವು ಪಡೆಯುತ್ತೀರಿ.
8. ಎಫ್‌ಟಿಒ ಉತ್ಪತ್ತಿಯಾಗಿದೆ ಮತ್ತು ಪಾವತಿ ದೃಢೀಕರಣ ಬಾಕಿ ಉಳಿದಿದೆ ಎಂದು ನೀವು ನೋಡಿದರೆ, ಇದರರ್ಥ ನಿಧಿ ವರ್ಗಾವಣೆಯ ಪ್ರಕ್ರಿಯೆಯು ಪ್ರಾರಂಭವಾಗಿದೆ. ಈ ಕಂತು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಬರುತ್ತದೆ ಎಂದರ್ಥ.
ಮೊಬೈಲ್ ಅಪ್ಲಿಕೇಶನ್ ಮೂಲಕವೂ ಪರಿಶೀಲಿಸಿ :
ಪಿಎಂ ಕಿಸಾನ್‌ಗಾಗಿ ಮೊಬೈಲ್ ಆ್ಯಪ್ ಕೂಡ ಇದೆ. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಅದನ್ನು ಡೌನ್‌ಲೋಡ್ ಮಾಡಿ, ನಿಮ್ಮ ಸ್ಟೇಟಸ್ ಬಗ್ಗೆ ನೀವು ಇದರಲ್ಲಿ ನವೀಕರಣ ಪಡೆಯುತ್ತೀರಿ.
ಒಂದೊಮ್ಮೆ ಇನ್ನೂ ಹಣ ನಿಮ್ಮ ಖಾತೆಗೆ ಬರದಿದ್ದರೆ ಹೀಗೆ ಮಾಡಿ:
ಈ ಪಟ್ಟಿಯನ್ನು ಪರಿಶೀಲಿಸಿದ ಬಳಿಕ ಅದರಲ್ಲಿ ನಿಮ್ಮ ಹೆಸರಿದ್ದೂ ಕೂಡ ಇನ್ನೂ ಪಿಎಂ ಕಿಸಾನ್ ಯೋಜನೆಯ (PM Kisan Samman Nidhi Yojana) 8ನೇ ಕಂತಿನ ಹಣವನ್ನು ಪಡೆಯದ ಅನೇಕ ರೈತರು ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ರೈತ ಸಹೋದರರು ಸರ್ಕಾರ ನೀಡಿರುವ ಸಹಾಯವಾಣಿ ಸಂಖ್ಯೆಯಲ್ಲಿ ದೂರು ನೀಡಬಹುದು. ಇದಲ್ಲದೆ, ನೀವು ಪ್ರದೇಶದ ಅಕೌಂಟೆಂಟ್ ಮತ್ತು ಕೃಷಿ ಅಧಿಕಾರಿಯನ್ನು ಸಹ ಸಂಪರ್ಕಿಸಬಹುದು.
ಇದನ್ನೂ ಓದಿ - PM Kisan Samman Nidhi : ಈ ತಪ್ಪುಗಳಾಗಿದ್ದರೆ ಪಿಎಂ ಕಿಸಾನ್ ಸೌಲಭ್ಯದಿಂದ ನೀವೂ ವಂಚಿತರಾಗಬಹುದು
ಇಲ್ಲಿ ದೂರು ನೀಡಿ:
ಕಿಸಾನ್ ಸಮ್ಮನ್ ನಿಧಿಯ ಕಂತು ಸ್ವೀಕರಿಸದಿದ್ದರೆ, ಕಿಸಾನ್ ಸಮ್ಮನ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು. ಇದಕ್ಕಾಗಿ, ನೀವು ಸಹಾಯವಾಣಿ ಸಂಖ್ಯೆ 011-24300606 / 011-23381092 ಗೆ ಕರೆ ಮಾಡಬಹುದು.
ಪಿಎಂ-ಕಿಸಾನ್ ಹೆಲ್ಪ್ ಡೆಸ್ಕ್:
ಇದಲ್ಲದೆ, ಸೋಮವಾರದಿಂದ ಶುಕ್ರವಾರದವರೆಗೆ, PM-KISAN ಸಹಾಯ ಕೇಂದ್ರವನ್ನು ಇಮೇಲ್ ಮೂಲಕ ಸಂಪರ್ಕಿಸಬಹುದು. pmkisan-ict@gov.in ಗೆ ಮೇಲ್ ಮಾಡುವ ಮೂಲಕ ದೂರು ನೀಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.