ನವದೆಹಲಿ : PM-KISAN Scheme: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಮುಂದಿನ ಅಂದರೆ 9 ನೇ ಕಂತು ಇನ್ನೇನು ರೈತರ ಖಾತೆ ಸೇರಲಿದೆ. ಈ ಕಂತನ್ನು ಆಗಸ್ಟ್ ತಿಂಗಳಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೆ, ಇದುವರೆಗೂ 40 ಲಕ್ಷಕ್ಕೂ ಹೆಚ್ಚು ರೈತರ ಖಾತೆ ಸೇರಬೇಕಾಗಿದ್ದ ಮೊತ್ತ ರೈತರಿಗೆ ತಲುಪಲೇ ಇಲ್ಲ. ಅಂದರೆ ಈ ಖಾತೆಗಳ ಟ್ರಾನ್ಸಾಕ್ಷನ್ ವಿಫಲವಾಗಿದೆ. ಸರ್ಕಾರವೇ ಈ ಬಗ್ಗೆ ಮಾಹಿತಿ ನೀಡಿದೆ. ವಹಿವಾಟಿನ ವೈಫಲ್ಯದ ಹಿಂದೆ ಹಲವು ಕಾರಣಗಳಿವೆ ಎಂದು ಸರ್ಕಾರ ಹೇಳಿದೆ. ಅಂಕಿಅಂಶಗಳ ಪ್ರಕಾರ, ಜೂನ್ ವರೆಗೆ ಪಿಎಂ ಕಿಸಾನ್ ಯೋಜನೆಯ (Pm Kisan Yojana) 40,16,867 ವಹಿವಾಟುಗಳು ವಿಫಲವಾಗಿವೆ.


COMMERCIAL BREAK
SCROLL TO CONTINUE READING

ಪಿಎಂ-ಕಿಸಾನ್ ಯೋಜನೆಯಲ್ಲಿ (Pm Kisan Scheme) ಫಲಾನುಭವಿ ರೈತರಿಗೆ ಅವರ ಖಾತೆಯಲ್ಲಿ ವಾರ್ಷಿಕವಾಗಿ 6000 ರೂಗಳನ್ನು ಹಾಕಲಾಗುತ್ತದೆ. 2 ಸಾವಿರ ರೂಗಳಂತೆ, ಮೂರು ಕಂತುಗಳಲ್ಲಿ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ (PM Kisan) ಯೋಜನೆ ಪ್ರಕಾರ, ಎರಡು ಹೆಕ್ಟೇರ್ ವರೆಗೆ ಕೃಷಿ ಮಾಡಬಹುದಾದ ಜಮೀನು ಹೊಂದಿರುವ ರೈತರಿಗೆ ಈ ಯೋಜನೆಯ ಲಾಭ ಸಿಗಲಿದೆ. 


ಇದನ್ನೂ ಓದಿ : ಈ ಬ್ಯಾಂಕಿನ ಲೈಸೆನ್ಸ್ ರದ್ದುಗೊಳಿಸಿದ RBI : ಇದರಲ್ಲಿ ನಿಮ್ಮ ಹಣವಿದೆಯೇ? ಬ್ಯಾಂಕ್ ಯಾವುದು ಚೆಕ್ ಮಾಡಿ!


ಯಾವ ಕಾರಣಕ್ಕಾಗಿ ವಿಫಲವಾಗಿದೆ ಟ್ರಾನ್ಸಾಕ್ಷನ್ : 
1.ಫಲಾನುಭವಿ ರೈತನ ಬ್ಯಾಂಕ್ ಖಾತೆ (Bank Account) ಕಾರ್ಯನಿರ್ವಹಿಸುತ್ತಿಲ್ಲ 
2.ಬ್ಯಾಂಕ್ ಖಾತೆ ವರ್ಗಾವಣೆಯಿಂದಾಗಿ ಟ್ರಾನ್ಸಾಕ್ಷನ್ ವಿಫಲ.
3.ಬ್ಯಾಂಕ್ ಖಾತೆಯ ತಪ್ಪು ಐಎಫ್‌ಎಸ್‌ಸಿ ಕೋಡ್‌ನಿಂದಾಗಿ (IFSC) ಹಣ ತಲುಪಿಲ್ಲ.
4.ನಿಗದಿತ ಮಿತಿಗಿಂತ ಹೆಚ್ಚಿನ ಹಣದ ವಹಿವಾಟಿನಿಂದಾಗಿ ವ್ಯವಹಾರ ವಿಫಲವಾಗಿದೆ.
5.ಫಲಾನುಭವಿ ರೈತ ಮರಣ ಹೊಂದಿರುವ ಕಾರಣ ಹಣ ತಲುಪಲಿಲ್ಲ.
6.ಬ್ಯಾಂಕ್ ಖಾತೆ ಬ್ಲಾಕ್ ಆಗಿರುವ ಕಾರಣ ಹಣ ತಲುಪಲಿಲ್ಲ.
7.ಆಕ್ಟಿವ್ ಆಗಿರದ ಆಧಾರ್ ಸಂಖ್ಯೆಯಿಂದಾಗಿ ಹಣ ವರ್ಗಾವಣೆಯಾಗುತ್ತಿಲ್ಲ 

 


ಆನ್‌ಲೈನ್ ನಲ್ಲಿ ಆಧಾರ್ ತಿದ್ದುಪಡಿ ಮಾಡಬಹುದಾಗಿದೆ : 


-ಪಿಎಂ ಕಿಸಾನ್ ಯೋಜನೆಯಲ್ಲಿ ಆನ್‌ಲೈನ್‌ನಲ್ಲಿ ಆಧಾರ್ ಸಂಖ್ಯೆಯನ್ನು (Aadhaar) ಸರಿಪಡಿಸಲು, ಪಿಎಂ ಕಿಸಾನ್ ಅವರ ವೆಬ್‌ಸೈಟ್ pmkisan.gov.in ಗೆ ಲಾಗಿನ್ ಮಾಡಿ. 
-ಅಲ್ಲಿ'ಫಾರ್ಮರ್ಸ್ ಕಾರ್ನರ್' ಆಯ್ಕೆಯು ಕಾಣಿಸುತ್ತದೆ. 
-ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಆಧಾರ್ ಎಡಿಟ್ ಲಿಂಕ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
- ಇಲ್ಲಿ ತೆರೆಯುವ ಪೇಜ್ ನಲ್ಲಿ ಆಧಾರ್ ನಂಬರ್ ಅನ್ನು ನೀವು ಸರಿಪಡಿಸಬಹುದು.


ಇದನ್ನೂ ಓದಿ : Google ಮೂಲಕ ಕುಳಿತಲ್ಲೇ ಸಂಪಾದಿಸಿ 50 ಸಾವಿರ ರೂಪಾಯಿ, ಮಾಡಬೇಕಾಗಿರುವುದು ಇಷ್ಟೇ


ಇತರ ತಪ್ಪುಗಳನ್ನು ಹೇಗೆ ಸರಿಪಡಿಸುವುದು?
-ರೈತರ ವಿವರಗಳನ್ನು ಎಡಿಟ್ ಮಾಡಲು ಪಿಎಂ ಕಿಸಾನ್ ವೆಬ್‌ಸೈಟ್ pmkisan.gov.in ನ ಫಾರ್ಮರ್ಸ್ ಕಾರ್ನರ್‌'ಗೆ ಹೋಗಿ ನೀವು ಆಧಾರ್ ಸಂಖ್ಯೆಯ ಮಾಹಿತಿಯನ್ನು ನೀಡಬೇಕಾಗುತ್ತದೆ.
-ಕ್ಯಾಪ್ಚಾ ವಿವರಗಳನ್ನು ನೀಡುವ ಮೂಲಕ ಇಲ್ಲಿ ಕ್ಲಿಕ್ ಮಾಡಬೇಕು. ಇಲ್ಲಿತೆರೆಯುವ ಪೇಜ್ ನಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡುವುದಿದ್ದರೆ ಮಾಡಬಹುದಾಗಿದೆ. 
-ಬ್ಯಾಂಕ್ ಖಾತೆ ಸಂಖ್ಯೆ ತಪ್ಪಾಗಿದ್ದರೆ, ನೀವು ಕೃಷಿ ಇಲಾಖೆ ಕಚೇರಿಗೆ ಹೋಗಿ, ತಪ್ಪನ್ನು ಸರಿಪಡಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.