ಈ ಬ್ಯಾಂಕಿನ ಲೈಸೆನ್ಸ್ ರದ್ದುಗೊಳಿಸಿದ RBI : ಇದರಲ್ಲಿ ನಿಮ್ಮ ಹಣವಿದೆಯೇ? ಬ್ಯಾಂಕ್ ಯಾವುದು ಚೆಕ್ ಮಾಡಿ!

ಬ್ಯಾಂಕಿನ ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ. ಪರವಾನಗಿ ರದ್ದತಿಯೊಂದಿಗೆ, ಬ್ಯಾಂಕಿನ ಠೇವಣಿ ಮತ್ತು ಪಾವತಿಗಳನ್ನು ಸಹ ನಿಷೇಧಿಸಲಾಗಿದೆ.

Written by - Channabasava A Kashinakunti | Last Updated : Jul 29, 2021, 08:13 PM IST
  • ಮಡ್ ಗಾವ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿ
  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರದ್ದುಗೊಳಿಸಿದೆ
  • ಗೋವಾ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಕೂಡ ಬ್ಯಾಂಕ್
ಈ ಬ್ಯಾಂಕಿನ ಲೈಸೆನ್ಸ್ ರದ್ದುಗೊಳಿಸಿದ RBI : ಇದರಲ್ಲಿ ನಿಮ್ಮ ಹಣವಿದೆಯೇ? ಬ್ಯಾಂಕ್ ಯಾವುದು ಚೆಕ್ ಮಾಡಿ! title=

ನವದೆಹಲಿ: ಗೋವಾದ ಮಡ್ ಗಾವ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರದ್ದುಗೊಳಿಸಿದೆ. ಬ್ಯಾಂಕಿನ ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ. ಪರವಾನಗಿ ರದ್ದತಿಯೊಂದಿಗೆ, ಬ್ಯಾಂಕಿನ ಠೇವಣಿ ಮತ್ತು ಪಾವತಿಗಳನ್ನು ಸಹ ನಿಷೇಧಿಸಲಾಗಿದೆ.

ಈ ಕ್ರಮ ಬ್ಯಾಂಕಿನ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್‌ಬಿಐ(RBI) ಹೇಳಿದೆ. ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಬ್ಯಾಂಕಿನ ಶೇ .99 ರಷ್ಟು ಠೇವಣಿದಾರರು ತಮ್ಮ ಸಂಪೂರ್ಣ ಠೇವಣಿ ಮತ್ತು  ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DIGC) ಯಿಂದ ಹಿಂತಿರುಗಿಸುತ್ತಾರೆ ಎಂದು ಆರ್‌ಬಿಐ ಹೇಳಿದೆ.

ಇದನ್ನೂ ಓದಿ : Google ಮೂಲಕ ಕುಳಿತಲ್ಲೇ ಸಂಪಾದಿಸಿ 50 ಸಾವಿರ ರೂಪಾಯಿ, ಮಾಡಬೇಕಾಗಿರುವುದು ಇಷ್ಟೇ

ಗೋವಾ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಕೂಡ ಬ್ಯಾಂಕ್ ಬಂದ್(Bank Close) ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಆರ್‌ಬಿಐ ತಿಳಿಸಿದೆ. ಇದರೊಂದಿಗೆ ಬ್ಯಾಂಕಿಗೆ ಲಿಕ್ವಿಡೇಟರ್ ನೇಮಕ ಮಾಡಲು ಆದೇಶ ಹೊರಡಿಸಲು ಮನವಿ ಮಾಡಲಾಗಿದೆ.

ಆರ್‌ಬಿಐ ಮತ್ತಷ್ಟು ಹೇಳಿದ್ದು, 'ಮಡ್ ಗಾವ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌(Madgaum Urban Co-operative Bank)ನಲ್ಲಿ  ಬಂಡವಾಳವಿಲ್ಲ ಹಾಗಾಗಿ ಬ್ಯಾಂಕ್ ನಡೆಸಲು ಕಷ್ಟವಾಗುತ್ತಿದೆ. ಅಲ್ಲದೆ, ಈ ಬ್ಯಾಂಕ್ 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ವಿವಿಧ ನಿಬಂಧನೆಗಳನ್ನು ಅನುಸರಿಸಲು ವಿಫಲವಾಗಿದೆ.

ಇದನ್ನೂ ಓದಿ : SBI YONO App: ಆನ್‌ಲೈನ್ ಬ್ಯಾಂಕಿಂಗ್ ನಿಯಮಗಳನ್ನು ಬದಲಾಯಿಸಿದ ಎಸ್‌ಬಿಐ

ಕೇಂದ್ರೀಯ ಬ್ಯಾಂಕ್(Central Bank), 'ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಹೊಂದಿರುವ ಬ್ಯಾಂಕ್ ತನ್ನ ಅಸ್ತಿತ್ವದಲ್ಲಿರುವ ಠೇವಣಿದಾರರಿಗೆ ಪೂರ್ಣ ಪಾವತಿ ಮಾಡಲು ಸಾಧ್ಯವಿಲ್ಲ. ಮತ್ತು ಬ್ಯಾಂಕ್ ಮುಚ್ಚದಿದ್ದರೆ, ಅದು ತನ್ನ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತಿತ್ತು. ಆದ್ದರಿಂದ, ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News