PM Kisan: ಈ ತಪ್ಪುಗಳಾಗಿದ್ದರೆ ನಿಂತು ಬಿಡಬಹುದು 9 ನೇ ಕಂತು, ಈ ರೀತಿ ಸರಿಪಡಿಸಿಕೊಳ್ಳಿ
ಕೇಂದ್ರ ಸರ್ಕಾರವು ಪ್ರತಿವರ್ಷ 6000 ರೂ.ಗಳ ಆರ್ಥಿಕ ಸಹಾಯವನ್ನು ರೈತರಿಗೆ ನೀಡುತ್ತದೆ. ಈ ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000 ರೂಪಾಯಿಯಂತೆ ಕಳುಹಿಸಲಾಗುತ್ತದೆ. ಈವರೆಗೆ ಸರ್ಕಾರ ರೈತರ ಖಾತೆಗಳಿಗೆ 8 ಕಂತುಗಳನ್ನು ಕಳುಹಿಸಿದೆ. 9 ನೇ ಕಂತು ಇನ್ನೇನು ರೈತರ ಖಾತೆ ಸೇರಲಿದೆ.
ನವದೆಹಲಿ : PM Kisan Samman Nidhi 2021 Latest Updates: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ನೇರವಾಗಿ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಈ ಯೋಜನೆಯ 9 ನೇ ಕಂತನ್ನು ರೈತರಿಗೆ ಕೇಂದ್ರ ಸರ್ಕಾರ (Central government) ಬಿಡುಗಡೆ ಮಾಡಲಿದೆ. ಈ ಯೋಜನೆಯಲ್ಲಿ ನೀವೇನಾದರೂ ನೋಂದಾಯಿಸಿಕೊಂಡಿದ್ದರೆ, ಈಗಿನಿಂದಲೇ ಅದರ ಸ್ಟೇಟಸ್ ಪರೀಕ್ಷಿಸಲು ಪ್ರಾರಂಭಿಸಿ..
ಶೀಘ್ರದಲ್ಲೇ ಬರಲಿದೆ 9 ನೇ ಕಂತು :
ಗಮನಿಸಬೇಕಾದ ಸಂಗತಿಯೆಂದರೆ, ಕೇಂದ್ರ ಸರ್ಕಾರವು ಪ್ರತಿವರ್ಷ 6000 ರೂ.ಗಳ ಆರ್ಥಿಕ ಸಹಾಯವನ್ನು ರೈತರಿಗೆ (Farmers) ನೀಡುತ್ತದೆ. ಈ ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000 ರೂಪಾಯಿಯಂತೆ ಕಳುಹಿಸಲಾಗುತ್ತದೆ. ಈವರೆಗೆ ಸರ್ಕಾರ ರೈತರ ಖಾತೆಗಳಿಗೆ 8 ಕಂತುಗಳನ್ನು ಕಳುಹಿಸಿದೆ. 9 ನೇ ಕಂತು ಇನ್ನೇನು ರೈತರ ಖಾತೆ ಸೇರಲಿದೆ.
ಇದನ್ನೂ ಓದಿ : Gold-Silver Rate : ಮಹಿಳೆಯೆರೆ ಗಮನಿಸಿ : ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ
ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿ:
1. ನಿಮ್ಮ ಹೆಸರನ್ನು ಪರಿಶೀಲಿಸಲು, ಮೊದಲು ನೀವು ಪಿಎಂ ಕಿಸಾನ್ (PM Kissan) ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in.ಗೆ ಭೇಟಿ ನೀಡಿ
2. ಈಗ ಹೋಂ ಪೇಜ್ ನಲ್ಲಿ Farmers Corne ಆಯ್ಕೆ ಕಾಣಿಸುತ್ತದೆ
3. ಫಾರ್ಮರ್ಸ್ ಕಾರ್ನರ್ ವಿಭಾಗದೊಳಗೆ, Beneficiaries List ಆಯ್ಕೆಯನ್ನು ಕ್ಲಿಕ್ ಮಾಡಿ.
4. ಈಗ ಡ್ರಾಪ್ ಡೌನ್ ಲಿಸ್ಟ್ ನಲ್ಲಿ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
5. ಈಗ ನೀವು 'Get Report' ' ಕ್ಲಿಕ್ ಮಾಡಿ.
6. ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ, ಇದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.
ಇದನ್ನೂ ಓದಿ : Bank Alert! ಈ ಬ್ಯಾಂಕ್ ಖಾತೆದಾರರು ಈ ಕೆಲಸ ಮಾಡದಿದ್ದಲ್ಲಿ ಆನ್ ಲೈನ್ ಪೇಮೆಂಟ್ ಸಾಧ್ಯವಾಗುವುದಿಲ್ಲ
ತಪ್ಪನ್ನು ಈ ರೀತಿ ಸರಿಪಡಿಸಿಕೊಳ್ಳಿ :
ಏಪ್ರಿಲ್-ಜುಲೈ 8 ನೇ ಕಂತು ನಿಮ್ಮ ಖಾತೆಗೆ ಬರದಿದ್ದರೆ, ನಿಮ್ಮ ಡಾಕ್ಯುಮೆಂಟ್‌ನಲ್ಲಿ ತಪ್ಪುಗಳಿದ್ದಿರಬಹುದು. ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ತುಂಬುವಲ್ಲಿ ಕೆಲವೊಮ್ಮೆ ತಪ್ಪುಗಳಾಗುತ್ತವೆ. ಅಂತಹ ತಪ್ಪು ಮಾಡಿದ್ದರೆ, ಅದನ್ನು ಈ ರೀತಿ ಸರಿಪಡಿಸಬಹುದು.
1. ತಪ್ಪನ್ನು ಸರಿಪಡಿಸಲು, ಮೊದಲು ಪಿಎಂ ಕಿಸಾನ್ ಅವರ ಅಧಿಕೃತ ವೆಬ್‌ಸೈಟ್ https://pmkisan.gov.in/.ಗೆ ಹೋಗಿ
2. ಈಗ ಅದರ ಫಾರ್ಮರ್ ಕಾರ್ನರ್‌ಗೆ ಹೋಗಿ, Edit Aadhaar Details ಆಯ್ಕೆಯನ್ನು ಕ್ಲಿಕ್ ಮಾಡಿ.
3. ಈಗ ನೀವು ಇಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.
4. ಇಲ್ಲಿ ಏನೇ ತಪ್ಪಿದ್ದರೂ ಅದನ್ನ ಆನ್‌ಲೈನ್‌ನಲ್ಲಿ ಸರಿಪಡಿಸಬಹುದು.
5. ಬೇರೆ ಯಾವುದೇ ತಪ್ಪು ಕಂಡುಬಂದಲ್ಲಿ ನಿಮ್ಮ ಅಕೌಂಟೆಂಟ್ ಮತ್ತು ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.
6. Helpdesk ಆಯ್ಕೆಯ ಮೂಲಕ, ನಿಮ್ಮ ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ತಪ್ಪುಗಳನ್ನು ಸರಿಪಡಿಸಬಹುದು
7. ಆಧಾರ್ ಸಂಖ್ಯೆಯಲ್ಲಿ ತಿದ್ದುಪಡಿ, ಕಾಗುಣಿತದಲ್ಲಿನ ತಪ್ಪು ಮುಂತಾದ ಹಲವು ತಪ್ಪುಗಳನ್ನು ಇಲ್ಲಿ ಸರಿಪಡಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.