Bank Alert! ಈ ಬ್ಯಾಂಕ್ ಖಾತೆದಾರರು ಈ ಕೆಲಸ ಮಾಡದಿದ್ದಲ್ಲಿ ಆನ್ ಲೈನ್ ಪೇಮೆಂಟ್ ಸಾಧ್ಯವಾಗುವುದಿಲ್ಲ

Bank New IFSC Codes : ಈ ದಿನಗಳಲ್ಲಿ ಅನೇಕ ಬ್ಯಾಂಕುಗಳು ನೆಟ್ ಬ್ಯಾಂಕಿಂಗ್ ಮತ್ತು ಆನ್‌ಲೈನ್ ಬ್ಯಾಂಕ್ ವಹಿವಾಟಿನ ಬಗ್ಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಅನೇಕ ಬ್ಯಾಂಕುಗಳು ತಮ್ಮ ಐಎಫ್‌ಎಸ್‌ಸಿ ಕೋಡ್‌ಗಳಲ್ಲಿ ಬದಲಾವಣೆಗಳನ್ನು ಮಾಡಿವೆ.

Written by - Ranjitha R K | Last Updated : Jul 11, 2021, 08:45 AM IST
  • ಬದಲಾಗಿದೆ ಈ ಬ್ಯಾಂಕ್ ಗಳ IFSC Codes
  • ಆನ್ ಲೈನ್ ಪೇಮೆಂಟ್ ಗಾಗಿ ಅಪ್ ಡೇಟ್ ಮಾಡಿಕೊಳ್ಳುವುದು ಅಗತ್ಯ
  • ಇಲ್ಲವಾದರೆ ಆನ್ ಲೈನ್ ವ್ಯವಹಾರಗಳು ನಡೆಯಲ್ಲ
Bank Alert! ಈ ಬ್ಯಾಂಕ್ ಖಾತೆದಾರರು ಈ ಕೆಲಸ ಮಾಡದಿದ್ದಲ್ಲಿ ಆನ್ ಲೈನ್ ಪೇಮೆಂಟ್  ಸಾಧ್ಯವಾಗುವುದಿಲ್ಲ  title=
ಬದಲಾಗಿದೆ ಈ ಬ್ಯಾಂಕ್ ಗಳ IFSC Codes (photo zee business)

ನವದೆಹಲಿ : Bank New IFSC Codes : ಈ ದಿನಗಳಲ್ಲಿ ಅನೇಕ ಬ್ಯಾಂಕುಗಳು ನೆಟ್ ಬ್ಯಾಂಕಿಂಗ್ ಮತ್ತು ಆನ್‌ಲೈನ್ ಬ್ಯಾಂಕ್ ವಹಿವಾಟಿನ ಬಗ್ಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಅನೇಕ ಬ್ಯಾಂಕುಗಳು ತಮ್ಮ ಐಎಫ್‌ಎಸ್‌ಸಿ ಕೋಡ್‌ಗಳಲ್ಲಿ ಬದಲಾವಣೆಗಳನ್ನು (Bank New IFSC Codes) ಮಾಡಿವೆ. ಈ ಕಾರಣದಿಂದಾಗಿ ಅನೇಕ ಖಾತೆದಾರರು ತಮ್ಮ ಐಎಫ್‌ಎಸ್‌ಸಿ ಅನ್ನು ಅಪ್ ಡೇಟ್ ಮಾಡಬೇಕಾಗುತ್ತದೆ . ಏಕೆಂದರೆ ಹಳೆಯ ಐಎಫ್‌ಎಸ್‌ಸಿ ಕೋಡ್ ಗೆ ಈಗ ಯಾವುದೇ ಮಾನ್ಯತೆ ಇಲ್ಲ. ಈ ಕಾರಣದಿಂದಾಗಿ NEFT ಮೂಲಕ ಆನ್‌ಲೈನ್ ವಹಿವಾಟುಗಳನ್ನು  RTGS ಮತ್ತು IMPS routes ಮೂಲಕ ಮಾಡಲು ಸಾಧ್ಯವಾಗುವುದಿಲ್ಲ.

ಸಾರ್ವಜನಿಕ ವಲಯದ ಸಿಂಡಿಕೇಟ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ದೇನಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ವಿಜಯ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಗಳಲ್ಲಿ  ಈ ಬದಲಾವಣೆಗಳನ್ನು ಮಾಡಲಾಗಿದೆ. ಆನ್ ಲೈನ್  ಬ್ಯಾಂಕಿಂಗ್ (online banking) ವಹಿವಾಟನ್ನು ಸರಾಗವಾಗಿ ನಡೆಸುವ ಸಲುವಾಗಿ, ಖಾತೆದಾರರು ತಮ್ಮ ಹೊಸ ಐಎಫ್‌ಎಸ್‌ಸಿ ಕೋಡ್ (IFSC Code) ಅನ್ನು ತಕ್ಷಣ ಬದಲಾಯಿಸಬೇಕು ಎಂದು ಬ್ಯಾಂಕ್ ಸೂಚನೆ ನೀಡಿದೆ. 

ಇದನ್ನೂ ಓದಿ : Huge Discount On Cheapest Car: ದೇಶದ ಅತ್ಯಂತ ಅಗ್ಗದ ಕಾರ್ ಮೇಲೆ ಸಿಗುತ್ತಿದೆ ಭಾರಿ ಡಿಸ್ಕೌಂಟ್, ಬೆಲೆ 3 ಲಕ್ಷಕ್ಕೂ ಕಮ್ಮಿ, 22 ಕಿ.ಮೀ ಮೈಲೇಜ್

ಆನ್‌ಲೈನ್ ಪೋರ್ಟಲ್‌ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು : 
ಹೊಸ ಐಎಫ್‌ಎಸ್‌ಸಿ ಕೋಡ್ ನೋಂದಾಯಿಸಲು ಖಾತೆದಾರರು ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಬೇಕಾಗುತ್ತದೆ.
ಅಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ಮತ್ತೆ ಭರ್ತಿ ಮಾಡಿ.
ಹೆಸರು, ಖಾತೆ ಸಂಖ್ಯೆ, ಕಾಂಟಾಕ್ಟ್ ಡೀಟೇಲ್ಸ್  ಮತ್ತು ಬ್ಯಾಂಕ್ ವಿವರಗಳನ್ನು ನಮೂದಿಸಬೇಕಾಗುತ್ತದೆ.
 ಹೊಸ ನಿಯಮಗಳಿಂದಾಗಿ, ಪೆಯೀ ಲಿಸ್ಟ್ ಅನ್ನು ಮತ್ತೊಮ್ಮೆ ನೋಂದಾಯಿಸಿ.

ಹೊಸ ಐಎಫ್‌ಎಸ್‌ಸಿ ಕೋಡ್ ಅನ್ನು ಬದಲಾಯಿಸಿಕೊಂದ ನಂತರ ಮಾತ್ರ ನೆಟ್ ಬ್ಯಾಂಕಿಂಗ್ (Net banking) ಸೌಲಭ್ಯಗಳ ಮೂಲಕ ಆನ್‌ಲೈನ್‌ನಲ್ಲಿ ಹಣವನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ಮೊಬೈಲ್ ಬ್ಯಾಂಕಿಂಗ್ ಬಳಸುವವರಿಗೂ ಇದೇ ನಿಯಮ ಅನ್ವಯಿಸುತ್ತದೆ. ಹೊಸ ನಿಯಮದ ಬಗ್ಗೆ ಗ್ರಾಹಕರಿಗೆ ಗೊಂದಲವಿದ್ದರೆ,  ಬ್ಯಾಂಕ್‌ಗೆ (Bank) ಭೇಟಿ ನೀಡಿ, ಅದಕ್ಕೆ ಸಂಬಂಧಿಸಿದ ವಿವರಗಳನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ : Tip To Earn Money From Home: ಕೇವಲ 50 ಪೈಸೆಯಲ್ಲಿ ಮನೆಯಲ್ಲಿಯೇ ಕುಳಿತು 'ಮಾಲಾಮಾಲ್' ಆಗಿ

ಬ್ಯಾಂಕ್ ಗಳ ವಿಲೀನ :
ಆಗಸ್ಟ್ 30, 2019 ರಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಸಂಬಂಧಿಸಿದಂತೆ  ದೊಡ್ಡ ನಿಲುವನ್ನು ಪ್ರಕಟಿಸಿದ್ದರು. ಇದರ ಅನ್ವಯ ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ, ಅಲಹಾಬಾದ್ ಬ್ಯಾಂಕ್ ಅನ್ನು ಇಂಡಿಯನ್ ಬ್ಯಾಂಕ್‌ನೊಂದಿಗೆ, ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಎರಡೂ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾಗಿದೆ.  ಅಡಿಯಲ್ಲಿ ಸೇರಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News