PM Kisan Mandhan Yojana: ಭಾರತವು ಮೂಲತಃ ಕೃಷಿ ಪ್ರಧಾನ ದೇಶ. ಹಾಗಾಗಿ, ದೇಶದ ಬಹುಪಾಲು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವೃದ್ಧಾಪ್ಯದಲ್ಲಿ ಜೀವನೋಪಾಯದ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪಿಎಂ ಕಿಸಾನ್ ಮಾನಧನ್ ಯೋಜನೆಯನ್ನು ಪ್ರಾರಂಭಿಸಿದೆ. ಇದನ್ನು ಪ್ರಧಾನಮಂತ್ರಿ ಶ್ರಮ ಯೋಗ್ ಮಾನ್ ಧನ್ ಯೋಜನೆ ಎಂತಲೂ ಕರೆಯುತ್ತಾರೆ. ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ತಿಂಗಳಿಗೆ 3000 ರೂ. ಸಹಾಯಧನ ದೊರೆಯುತ್ತದೆ. 


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್ ಮಾನಧನ್ ಯೋಜನೆ (PM Kisan Mandhan Yojana): 
ದೇಶದ ರೈತಾಪಿ ವರ್ಗದ ಜನರಿಗೆ ವೃದ್ದಾಪ್ಯದಲ್ಲಿ ಆರ್ಥಿಕ ನೆರವನ್ನು ನೀಡುವ ನಿಟ್ಟಿನಲ್ಲಿ 2019ರಲ್ಲಿ ಪ್ರಧಾನಮಂತ್ರಿ ಮಾನಧನ್ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿತು. ಈ ಯೋಜನೆಯಲ್ಲಿ ಅರ್ಹ ವೃದ್ಧ ರೈತರಿಗೆ ಮಾಸಿಕ 3000 ರೂ.ಗಳ ಪಿಂಚನಿಯನ್ನು ನೀಡಲಾಗುತ್ತದೆ. ಇದರ ಫಲಾನುಭವಿಯಾಗಲು ಯಾರು ಅರ್ಹರು, ಈ ಪಿಂಚಣಿ ಪಡೆಯಲು ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ. 


ಪಿಎಂ ಕಿಸಾನ್ ಮಾನಧನ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: 
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ವಿಳಾಸ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ. 


ಇದನ್ನೂ ಓದಿ-  ಎಲೋನ್ ಮಸ್ಕ್ ಬಳಿಕ ವಿಶ್ವದ 2ನೇ ಟ್ರಿಲಿಯನೇರ್ ಆಗಲಿದ್ದಾರೆ ಈ ಭಾರತೀಯ ವ್ಯಕ್ತಿ..! 


ಪಿಎಂ ಕಿಸಾನ್ ಮಾನಧನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to Apply for PM Kisan Mandhan Yojana):-
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ಸುಲಭವಾಗಿ ಇದರ ಫಲಾನುಭವಿಯಾಗಬಹುದು. 
* ಮೊದಲಿಗೆ maandhan.in ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿ ರಿಜಿಸ್ಟರ್ ಆಯ್ಕೆಯನ್ನು ಆರಿಸಿ. 
*  ಹೊಸ ಪುಟದಲ್ಲಿ ನಿಗದಿತ ಜಾಗದಲ್ಲಿ ಇಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಕ್ಯಾಪ್ಚಾ ಕೋಡ್ ನಮೂದಿಸಿ. ಇದರಲ್ಲಿ ಓ‌ಟಿ‌ಪಿ ಕಳುಹಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ. 
* ಓ‌ಟಿ‌ಪಿ ನಮೂದಿಸಿ ಸಲ್ಲಿಸಿದ ನಂತರ ಅರ್ಜಿ ತೆರೆಯುತ್ತದೆ. 
* ಅರ್ಜಿಯಲ್ಲಿ ಅಗತ್ಯ ಮಾಹಿತಿಗಳನ್ನು ನಮೂದಿಸಿ ಒಮ್ಮೆ ಮಾಹಿತಿಯನ್ನು ಪರಿಶೀಲಿಸಿ ಬಳಿಕ ಸಲ್ಲಿಸಿ. 


ಪಿಎಂ ಕಿಸಾನ್ ಮಾನಧನ್ ಯೋಜನೆಗೆ ಅರ್ಹತಾ ಮಾನದಂಡ:
ಪಿಎಂ ಕಿಸಾನ್ ಮಾನಧನ್ ಯೋಜನೆ ಪ್ರಮುಖವಾಗಿ ಸಣ್ಣ ಮತ್ತು ಅತಿಸಣ್ಣ ಭೂಮಿ ಹೊಂದಿರುವ ಅರ್ಥಾತ್ 2 ಹೆಕ್ಟೇರ್ ಗಿಂತಲೂ ಕಡಿಮೆ ಜಾಮೀನು ಹೊಂದಿರುವ ರೈತರಿಗಾಗಿ ಆರಂಭಿಸಿರುವ ಯೋಜನೆ. 


ಇದನ್ನೂ ಓದಿ- ದುಬಾರಿ ಹೋಟೆಲ್‌ಗಳಲ್ಲಿ ಅಧಿಕ ಹಣ ಖರ್ಚು ಮಾಡುವ ಅಗತ್ಯವೇ ಇಲ್ಲ:  ಐ‌ಆರ್‌ಸಿ‌ಟಿ‌ಸಿ ವಿಶೇಷ ಸೇವೆಯಡಿ  ಕೇವಲ 20-40 ರೂ.ಗೆ ಸಿಗುತ್ತೆ ಎಸಿ ರೂಂ


ಪಿಎಂ ಕಿಸಾನ್ ಮಾನಧನ್ ಯೋಜನೆಯಲ್ಲಿ ಪಿಂಚಣಿ ಪಡೆಯುವುದು ಹೇಗೆ? 
ಈ ಯೋಜನೆಯಡಿ ಲಾಭ ಪಡೆಯಲು ಬಯಸುವ ರೈತರು 18 ವರ್ಷದಿಂದ 40 ವರ್ಷಗಳ ನಡುವೆ ತಮ್ಮ ಇದರಲ್ಲಿ ಹೂಡಿಕೆ ಆರಂಭಿಸಬೇಕು. 60 ವರ್ಷ ವಯಸ್ಸಿನವರೆಗೂ ಹೂಡಿಕೆ ಮಾಡಬೇಕು. 


ಹೂಡಿಕೆಯು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ. ಉದಾಹರಣೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವ ರೈತನ ವಯಸ್ಸು 30ವರ್ಷವಾಗಿದ್ದರೆ ಅವರು ಪ್ರತಿ ತಿಂಗಳು 55 ರೂ. ಠೇವಣಿ ಮಾಡಬೇಕು. ಗಮನಾರ್ಹವಾಗಿ ರೈತರು ಹೂಡಿಕೆ ಮಾಡುವಷ್ಟೇ ಹಣವನ್ನು ಸರ್ಕಾರವು ಈ ಯೋಜನೆಯಲ್ಲಿ ಠೇವಣಿ ಮಾಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ರೈತರಿಗೆ 60 ವರ್ಷ ತುಂಬಿದ ಬಳಿಕ ತಿಂಗಳಿಗೆ 3000 ರೂ. ಪಿಂಚಣಿ ದೊರೆಯುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.