ವಾಹನ ಸವಾರರಿಗೆ ಸಿಹಿ ಸುದ್ದಿ ! ಬದಲಾಗಿದೆ ಟೋಲ್ ನಿಯಮ - ಫಾಸ್ಟ್ಯಾಗ್ ಅಗತ್ಯವೂ ಇಲ್ಲ, ಕ್ಯಾಶ್ ಕಟ್ಟುವ ಚಿಂತೆಯೂ ಇಲ್ಲ !

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 2008 ಅನ್ನು ತಿದ್ದುಪಡಿ ಮಾಡಿದೆ.ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಸರ್ಕಾರ ಅನುಮೋದಿಸಿದೆ. 

ಬೆಂಗಳೂರು :ಭಾರತದಲ್ಲಿ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣದ ವೇಗದೊಂದಿಗೆ, ಸಾರಿಗೆ ಕೂಡಾ ವೇಗ ಪಡೆಯುತ್ತಿದೆ.ಹೆದ್ದಾರಿ-ಎಕ್ಸ್ ಪ್ರೆಸ್ ನಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿವೆ.ಇದೀಗ ಈ ಮಾರ್ಗಗಳಲ್ಲಿ ವಾಹನಗಳಿಗೆ ಹೆಚ್ಚಿನ ವೇಗ ನೀಡಲು ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ.ಹೊಸ ನಿಯಮದ ಪ್ರಕಾರ,ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ವೇನಲ್ಲಿ ಚಾಲನೆ ಮಾಡುವಾಗ 20 ಕಿಲೋಮೀಟರ್‌ವರೆಗೆ ಯಾವುದೇ ಟೋಲ್ ಪಾವತಿಸಬೇಕಾಗಿಲ್ಲ.ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ಅಳವಡಿಸಲಾಗಿರುವ ಖಾಸಗಿ ವಾಹನಗಳಿಗೆ ಈ ವಿನಾಯಿತಿ ನೀಡಿದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಈ ಹೊಸ ವ್ಯವಸ್ಥೆಯಲ್ಲಿ, ವಾಹನಗಳು ಟೋಲ್ ಪ್ಲಾಜಾಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ಹೊಸ ಉಪಗ್ರಹ ಆಧಾರಿತ ವ್ಯವಸ್ಥೆಯ ಮೂಲಕ, ಫಾಸ್ಟ್ಯಾಗ್ ಅಥವಾ  ಕ್ಯಾಶ್ ಪಾವತಿಸುವ ತೊಂದರೆಯಿಲ್ಲದೆ ವಾಹನದ ನಂಬರ್ ಪ್ಲೇಟ್‌ಗಳ ಸಹಾಯದಿಂದ ನೇರವಾಗಿ ಟೋಲ್ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.  

2 /6

ಹೊಸ ವ್ಯವಸ್ಥೆಯಾದ GNSS ಅಡಿಯಲ್ಲಿ, ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನವು ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಖಾತೆಯಿಂದ ಹಣವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.ಎನ್‌ಎಸ್‌ಎಸ್ ಹೊಂದಿದ ಖಾಸಗಿ ವಾಹನಗಳಿಗೆ 20 ಕಿ.ಮೀ.ವರೆಗಿನ ಟೋಲ್ ತೆರಿಗೆ ವಿನಾಯಿತಿಯನ್ನು ಕೂಡಾ ಸರ್ಕಾರ ನೀಡಿದೆ.

3 /6

ಹೊಸ ಟೋಲ್ ಸಂಗ್ರಹಕ್ಕಾಗಿ, ವಾಹನಗಳು ಆನ್-ಬೋರ್ಡ್ ಘಟಕಗಳು (OBU) ಮತ್ತು GPS ಅನ್ನು ಹೊಂದಿರುವುದು ಅವಶ್ಯಕ.ಹೊಸ ವ್ಯವಸ್ಥೆಯು ಫಾಸ್ಟ್ಯಾಗ್ ಅಥವಾ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ತಂತ್ರಜ್ಞಾನಕ್ಕಿಂತ ಭಿನ್ನವಾಗಿರುತ್ತದೆ. 

4 /6

GNSS ವ್ಯವಸ್ಥೆಯು ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಸ್ಟಮ್ ಆಗಿರುತ್ತದೆ. ಇದರಲ್ಲಿ ವಾಹನಗಳಲ್ಲಿ ಅಳವಡಿಸಲಾಗಿರುವ GPS ಮತ್ತು OBU ಸಹಾಯದಿಂದ ಟೋಲ್ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.ಈ ಸಂಪೂರ್ಣ ವ್ಯವಸ್ಥೆಯು ಭಾರತದ ಸ್ವಂತ ನ್ಯಾವಿಗೇಷನ್ ಸಿಸ್ಟಮ್ GAGAN ಮತ್ತು NavIC ಸಹಾಯದಿಂದ ಕಾರ್ಯನಿರ್ವಹಿಸುತ್ತದೆ.   

5 /6

ವಾಹನಗಳಲ್ಲಿ ಆನ್-ಬೋರ್ಡ್ ಘಟಕಗಳು ಅಂದರೆ OBU ಗಳನ್ನು ಸ್ಥಾಪಿಸಲಾಗುತ್ತದೆ.ಈ ಟ್ರ್ಯಾಕಿಂಗ್ ಸಾಧನದ ಸಹಾಯದಿಂದ,ಹೆದ್ದಾರಿಯಲ್ಲಿ ವಾಹನಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ.ಈ ಟ್ರ್ಯಾಕಿಂಗ್ ಯಂತ್ರದ ಮೂಲಕ,ಹೈಪರ್‌ನಲ್ಲಿ ವಾಹನಗಳು ಕ್ರಮಿಸುವ ದೂರವನ್ನು ಲೆಕ್ಕಹಾಕಲಾಗುತ್ತದೆ.ಇದಕ್ಕೆ ಸಹಾಯ ಮಾಡಲು,GPS ಮತ್ತು GNSS ಇರುತ್ತದೆ.ಇದು ಟೋಲ್ ಲೆಕ್ಕಾಚಾರದಲ್ಲಿ OBUಗೆ ಸಹಾಯ ಮಾಡುತ್ತದೆ.

6 /6

GNSS ವ್ಯವಸ್ಥೆಯನ್ನು ಆಧಾರ್ ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯೊಂದಿಗೆ ಅಟ್ಯಾಚ್ ಮಾಡಲಾಗುವುದು.ಹೀಗಾಗಿ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳು ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಹಣವನ್ನು ನೇರವಾಗಿ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.